ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿ 8, 2002 ರಿಂದ ಮೂರನೇ ಮಹಾಯುದ್ಧ - ಜ್ಯೋತಿಷಿ

By Staff
|
Google Oneindia Kannada News

ಮಡಿಕೇರಿ : 2002 ನೇ ಇಸವಿ ಫೆಬ್ರವರಿ 8 ರಿಂದ ಮೂರನೇ ಜಾಗತಿಕ ಸಮರ ಪ್ರಾರಂಭವಾಗುತ್ತದೆಂದು ಹಾಗೂ ಯುದ್ಧ ಸಂದರ್ಭದಲ್ಲಿ ಅಮೆರಿಕಾದ ಬೀದಿಬೀದಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲಿದೆ ಎಂದು ಜ್ಯೋತಿಷಿ ಕೆ.ಬಾಲಗೋಪಾಲ್‌ ಜೋಯಿಸ್‌ ಕೊಪ್ಪ ಅವರು ಭವಿಷ್ಯ ನುಡಿದಿರುವುದಾಗಿ ವಿಜಯ ಕರ್ನಾಟಕ ದೈನಿಕ ಮಂಗಳವಾರ ಪ್ರಕಟಿಸಿದೆ.

ಪ್ರಸ್ತುತ ಅಂತರರಾಷ್ಟ್ರೀಯ ಭಯೋತ್ಪಾದಕತೆಯನ್ನು ಮಟ್ಟ ಹಾಕುವ ಉದ್ದೇಶದಿಂದ ಆಪ್ಘಾನಿಸ್ತಾನದ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧ 2007 ನೇ ಇಸವಿ ನವಂಬರ್‌ 13 ರವರೆಗೂ ನಡೆಯಲಿದೆ. ಸತತ 8 ವರ್ಷಗಳ ಕಾಲ ನಡೆಯುವ ಈ ಯುದ್ಧದಲ್ಲಿ ಕ್ರೆೃಸ್ತ ಹಾಗೂ ಇಸ್ಲಾಂ ಧರ್ಮೀಯರು ಆಪಾರ ಪ್ರಮಾಣದ ನಷ್ಟ ಅನುಭವಿಸುತ್ತಾರೆ ಎಂದೂ ಬಾಲಗೋಪಾಲ್‌ ಜೋಯಿಸ್‌ ಹೇಳಿದ್ದಾರೆ.

ಕಾಶ್ಮೀರ ಕುರಿತು ಮಾರ್ಚ್‌ನಲ್ಲಿ ಭಾರತ- ಪಾಕ್‌ ಯುದ್ಧ

ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಮಾರ್ಚ್‌ನಲ್ಲಿ ಯುದ್ಧ ನಡೆಯುತ್ತದೆ. ಎಂದಿನಂತೆ ಈ ಯುದ್ಧದಲ್ಲೂ ಭಾರತ ಜಯಗಳಿಸುತ್ತದೆ ಎಂದು ಜೋಯಿಸ್‌ ಹೇಳಿದ್ದಾರೆ.

ಆಪ್ಘಾನಿಸ್ತಾನದಲ್ಲಿ ನಡೆಯ್ತುತಿರುವ ಯುದ್ಧದ ಪರಿಣಾಮ ಭಾರತಕ್ಕೆ ಅಪಾರ ಪ್ರಮಾಣದ ವಲಸೆ ಪ್ರಾರಂಭವಾಗುತ್ತದೆ. ಇಷ್ಟೆಲ್ಲಾ ಆದರೂ, ಅಂತರರಾಷ್ಟ್ರೀಯ ಪಾತಕಿ ಲ್ಯಾಡೆನ್‌ ಅಮೇರಿಕಾದವರಿಗೆ ಸಿಗುವುದಿಲ್ಲ ಎನ್ನುತ್ತದೆ ಬಾಲಗೋಪಾಲ್‌ ಅವರ ಜ್ಯೋತಿಷ್ಯ.

ಕೊನೆಯದಾಗಿ ಬಾಲಗೋಪಾಲ್‌ ಹೇಳಿರುವುದು-
ಜ್ಯೋತಿಷ್ಯದಲ್ಲಿ ಪೂರ್ಣ ನಿಖರತೆ ಸಾಧ್ಯವಿಲ್ಲ . ಪ್ರತಿಶತ 80 ರಷ್ಟು ಮಾತ್ರ ಸತ್ಯವಾಗುತ್ತದೆ. ಯಾಗ, ಹೋಮ, ಹವನಗಳಿಂದ ಪ್ರಕೃತಿಯನ್ನು ಶುದ್ಧಗೊಳಿಸಲು ಸಾಧ್ಯವಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X