Get Updates
Get notified of breaking news, exclusive insights, and must-see stories!

ಕಾಶ್ಮೀರ ಮಾತುಕತೆ: ಪಾಕ್‌ ನಿಲುವು ಸಮರ್ಥಿಸಿದಕಾಲಿನ್‌ ಪೊವೆಲ್‌

ಇಸ್ಲಮಾಬಾದ್‌: ಭಾರತ ಹಾಗೂ ಪಾಕಿಸ್ತಾನ ನಡುವಣ ಮಾತುಕತೆಗಳಲ್ಲಿ ಕಾಶ್ಮೀರ ವಿವಾದವೇ ಕೇಂದ್ರಬಿಂದು ಎನ್ನುವ ಪಾಕಿಸ್ತಾನದ ನಿಲುವನ್ನು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಕಾಲಿನ್‌ ಪೊವೆಲ್‌ ಒಪ್ಪಿಕೊಂಡಿದ್ದಾರೆ.

ಉಭಯ ರಾಷ್ಟ್ರಗಳ ನಡುವಣ ಸಂಬಂಧಕ್ಕೆ ಕಾಶ್ಮೀರ ಪ್ರಕರಣವೇ ಕೇಂದ್ರಬಿಂದು ಎನ್ನುವುದನ್ನು ನಾವು ಕೂಡ ನಂಬುತ್ತೇವೆ ಎಂದು, ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ ನಂತರ ಪೊವೆಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತಕ್ಕೆ ಆಗಮಿಸುವ ಸ್ವಲ್ಪ ಸಮಯದ ಮುನ್ನ ಪೊವೆಲ್‌ ಈ ಹೇಳಿಕೆ ನೀಡಿರುವುದು ಗಮನಾರ್ಹ.

ಕಾಶ್ಮೀರ ವಿಷಯದ ಬಗ್ಗೆ ಮಾತುಕತೆ ಮುಂದುವರಿಸುವಂತೆ ಮುಷರ್ರಫ್‌ ಹಾಗೂ ವಾಜಪೇಯಿ ಅವರನ್ನು ನಾನು ಒತ್ತಾಯಿಸುತ್ತೇನೆ. ಉಭಯ ರಾಷ್ಟ್ರಗಳೂ ಗಡಿ ನಿಯಂತ್ರಣ ರೇಖೆಯನ್ನು ಗೌರವಿಸಬೇಕು ಎಂದು ಪೊವೆಲ್‌ ತಿಳಿಸಿದರು.

ಕಾಶ್ಮೀರ ವಿಷಯವೇ ಉಭಯ ರಾಷ್ಟ್ರಗಳ ನಡುವಣ ಮಾತುಕತೆಯ ಕೇಂದ್ರಬಿಂದು ಎನ್ನುವ ಪೊವೆಲ್‌ ಹೇಳಿಕೆ ಭಾರತಕ್ಕೆ ನಿರಾಶೆ ಮೂಡಿಸಿದೆ. ಪಾಕಿಸ್ತಾನದೊಂದಿಗಿನ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಕೇಂದ್ರಬಿಂದುವಲ್ಲ ಎನ್ನುವುದು ಭಾರತದ ನಿಲುವು. ಇತರ ವಿಷಯಗಳೊಂದಿಗೆ ಕಾಶ್ಮೀರ ವಿಷಯವೂ ಒಂದೆಂದು ಭಾರತ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+