Get Updates
Get notified of breaking news, exclusive insights, and must-see stories!

ಕುಮಟಾದ ಅಡಿಕೆ ದಲ್ಲಾಳಿ ಗಣೇಶಪರಮೇಶ್ವರ ಭಟ್ಟರು ಇನ್ನಿಲ್ಲ

ಕುಮಟಾ : ಸ್ವಾತಂತ್ರ ಹೋರಾಟಗಾರ, ಜಿಲ್ಲೆಯ ಪ್ರಸಿದ್ಧ ಅಡಿಕೆ ದಲ್ಲಾಳಿ ಹಾಗೂ ವ್ಯಾಪಾರಿಯಾಗಿದ್ದ ಗಣೇಶ ಪರಮೇಶ್ವರ ಭಟ್ಟ ಹಂದಿಗೋಣ ಅವರು ಸೋಮವಾರ ನಿಧನರಾಗಿದ್ದಾರೆ.

ಕಳೆದ ಐವತ್ತು ವರ್ಷಗಳಿಂದ ಅಡಿಕೆ ಮಂಡಿಯನ್ನು ನಡೆಸುತ್ತಿದ್ದ ಗಣೇಶ ಭಟ್ಟರು, ಕುಮಟಾದ ಅಡಿಕೆ ದಲ್ಲಾಳಿ ಮತ್ತು ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಾಗರ ಪ್ರಾಂತ್ಯದಲ್ಲಿಯೂ ಗಣೇಶ ಭಟ್ಟರು ಅಡಿಕೆ ಮಂಡಿಗಳನ್ನು ನಡೆಸುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೃತರು ಎರಡು ಬಾರಿ ಸೆರೆಮನೆ ವಾಸ ಅನುಭವಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಭೂಗತ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದರು.

ಗಣೇಶ ಭಟ್ಟರ ನಿಧನಕ್ಕೆ ಕುಮಟಾ ಅಡಿಕೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುರಲೀಧರ ಯಶವಂತ ಪ್ರಭು ಸಂತಾಪ ವ್ಯಕ್ತ ಪಡಿಸಿದ್ದು, ಮೃತರ ಗೌರವಾರ್ಥ ಅಕ್ಟೋಬರ್‌ 17ರಂದು ಕುಮಟಾದಲ್ಲಿ ಅಡಿಕೆ ವ್ಯಾಪಾರ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+