ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.4 ರಂದು ವಾಜಪೇಯಿ ರಷ್ಯಾಕ್ಕೆ:ಆಪ್ಘಾನಿಸ್ತಾನ ಕುರಿತು ಚರ್ಚೆ

By Staff
|
Google Oneindia Kannada News

ನವದೆಹಲಿ : ಪ್ರಧಾನಿ ವಾಜಪೇಯಿ ನವಂಬರ್‌ 4 ರಿಂದ ನಾಲ್ಕು ದಿನಗಳ ಕಾಲ ರಷ್ಯಾ ಭೇಟಿ ಕೈಗೊಳ್ಳಲಿದ್ದು , ಭೇಟಿಯ ಕಾಲದಲ್ಲಿ ಉಭಯ ರಾಷ್ಟ್ರಗಳ ನಡುವಣ ಸಂಬಂಧಗಳ ಸುಧಾರಣೆ ಹಾಗೂ ಆಪ್ಘಾನಿಸ್ತಾನ ಬಿಕ್ಕಟ್ಟು ಕುರಿತಂತೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೆ ಚರ್ಚಿಸುವರು.

ಭಾರತದ ಸಚಿವರೊಂದಿಗೆ ಚರ್ಚಿಸಿ ವಾಜಪೇಯಿ ಅವರ ಭೇಟಿಯ ಕಾಲದ ಕಾರ್ಯಕ್ರಮಗಳನ್ನು ಮಂಗಳವಾರ ಅಂತಿಮಗೊಳಿಸಿದ ರಷ್ಯಾದ ಉಪ ಪ್ರಧಾನಿ ಇಲ್ಯ ಕ್ಲೆಬನೊವ್‌, ಸುದ್ದಿಗಾರರಿಗೆ ಭೇಟಿಯ ವಿವರಗಳನ್ನು ನೀಡಿದರು. ಉಭಯ ದೇಶಗಳ ನಡುವಣ ರಕ್ಷಣಾ ಸಹಕಾರ, ಆರ್ಥಿಕ ಸಹಕಾರವನ್ನು ಬಲಪಡಿಸುವುದು ಹಾಗೂ ಆಪ್ಘಾನಿಸ್ತಾನ ಬಿಕ್ಕಟ್ಟು ಕುರಿತು ವಾಜಪೇಯಿ ಹಾಗೂ ಪುಟಿನ್‌ ಚರ್ಚಿಸಲಿದ್ದಾರೆ ಎಂದು ಕ್ಲೆಬನೊವ್‌ ತಿಳಿಸಿದರು.

ಅಟಲ್‌ ಭೇಟಿ ಸಂದರ್ಭದಲ್ಲಿ ಮಾಸ್ಕೋ ಘೋಷಣೆ ಹೊರಬೀಳುವ ಸಾಧ್ಯತೆಯೂ ಇದೆ ಹಾಗೂ ಭಾರತದ ಹೊಸ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸುವ ಆಂದೋಲನವನ್ನು ರಷ್ಯಾ ಪ್ರಾರಂಭಿಸಲಿದೆ. ವಿದ್ಯುತ್‌, ಸಂವಹನ, ತೈಲ ಹಾಗೂ ಅನಿಲ ವಿಭಾಗಗಳಲ್ಲಿ ಉಭಯ ನಾಯಕರು ನಿರ್ಣಯ ಕೈಗೊಳ್ಳುವರು.

ನ್ಯೂಕ್ಲಿಯರ್‌ ಸಿಡಿತಲೆಗಳನ್ನು ಕೊಂಡೊಯ್ಯಬಲ್ಲ ರಷ್ಯಾದ ಟಿಯು-22 ಹೆಸರಿನ ನಾಲ್ಕು ಬಾಂಬರ್‌ಗಳನ್ನು ಭಾರತ ಗುತ್ತಿಗೆಯ ಮೇಲೆ ಪಡೆಯುವ ಕುರಿತು ಅಟಲ್‌ ಭೇಟಿಯ ಕಾಲದಲ್ಲಿ ಒಪ್ಪಂದಕ್ಕೆ ಬರಲಾಗುವುದು ಎಂದು ಕ್ಲೆಬನೊವ್‌ ಹೇಳಿದರು.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X