ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ್ಯಂಥ್ರಾಕ್ಸ್‌ ರೋಗಾಣು ಎಂದರೆ ಭಾರತಕ್ಕೇನೇನೂ ಭಯವಿಲ್ಲ

By Staff
|
Google Oneindia Kannada News

ಬೆಂಗಳೂರು : ಆ್ಯಂಥ್ರಾಕ್ಸ್‌ ರೋಗಾಣು ವಿರುದ್ಧ ಹೋರಾಡುವ ಸಾಕಷ್ಟು ರೋಗ ನಿರೋಧಕಗಳನ್ನು ಭಾರತ ಅಭಿವೃದ್ಧಿಪಡಿಸಿರುವುದರಿಂದ ಸಂಭವನೀಯ ಜೈವಿಕ ಭಯೋತ್ಪಾದಕತೆಯ ಬಗೆಗೆ ಭಯ ಪಡುವ ಅಗತ್ಯವಿಲ್ಲವೆಂದು ಔಷಧಿ ನಿಯಂತ್ರಣ ಇಲಾಖೆ ಹಾಗೂ ರಾಜ್ಯ ಆರೋಗ್ಯ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಹಲವಾರು ವರ್ಷಗಳಿಂದ ವಿಶ್ವದ ಹಲವು ಭಾಗಗಳಲ್ಲಿ , ಆ್ಯಂಥ್ರಾಕ್ಸ್‌ ವಿರುದ್ಧದ ಚಿಕಿತ್ಸೆಯಲ್ಲಿ ರೋಗ ನಿರೋಧಕಗಳು ಪರಿಣಾಮಕಾರಿಯಾಗಿವೆ. ದೇಶದಲ್ಲಿ ಆ್ಯಂಥ್ರಾಕ್ಸ್‌ ಗುಣಪಡಿಸುವ ರೋಗ ನಿರೋಧಕಗಳು ಸಾಕಷ್ಟು ಸಂಖ್ಯೆಯಲ್ಲಿ ದೊರಕುತ್ತಿವೆ ಎಂದು ಔಷಧಿ ನಿಯಂತ್ರಣ ಅಧಿಕಾರಿಯಾಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪ್ರಸ್ತುತ ಆ್ಯಂಥ್ರಾಕ್ಸ್‌ ಪ್ರಕರಣಗಳ ಚಿಕಿತ್ಸೆಯಲ್ಲಿ ಅಮೆರಿಕಾ ಬಳಸುತ್ತಿರುವ ಸಿಪ್ರೋಫ್ಲಾಕ್ಸಸಿನ್‌ ದೇಶಾದ್ಯಂತ ವಿವಿಧ ಬ್ರಾಂಡ್‌ ಹೆಸರುಗಳಲ್ಲಿ ಲಭ್ಯವಿದೆ. ಇದರೊಂದಿಗೆ ಇತರ ರೋಗ ನಿರೋಧಕಗಳಾದ ಸ್ಟ್ರೆಪ್ಟೋಮೈಸಿನ್‌(ಪೆನ್ಸಿಲಿನ್‌ ಸಂಯೋಜನೆಯಾಂದಿಗೆ), ಎರಿತ್ರೋಮೈಸಿನ್‌, ಟೆಟ್ರಾಸೈಕ್ಲಿನ್‌, ವ್ಯಾನಿಕೊಮೈಸಿನ್‌, ಆಕ್ಸಾಸಿಲಿನ್‌, ಮೆಥಿಸಿಲಿನ್‌ ಹಾಗೂ ನಫ್‌ಸಿಲಿನ್‌ಗಳು ಕೂಡ ಲಭ್ಯವಿವೆ ಎಂದು ಔಷಧ ನಿಯಂತ್ರಣ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X