ಬೆಂಗಳೂರು ಐಟಿ.ಕಾಂ ಮೇಳ ಈ ಬಾರಿ ಅದ್ದೂರಿ,ಇನ್ನಷ್ಟು ಆಕರ್ಷಕ
ಬೆಂಗಳೂರು : ಅಮೆರಿಕ ಮೇಲೆ ನಡೆದ ಉಗ್ರರ ದಾಳಿ ಹಾಗೂ ಅಪ್ಘನ್- ಅಮೆರಿಕ ಯುದ್ಧದ ಧಾವಂತದಲ್ಲಿ ಇಡೀ ಜಗತ್ತು ಮುಳುಗಿದ್ದರೂ, ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಷೋಕೇಸ್ ಆದ ವಾರ್ಷಿಕ ಐಟಿ ಹಬ್ಬ ಬೆಂಗಳೂರು ಐಟಿ.ಕಾಂ- 2001 ನಿಗದಿಯಾದಂತೆ ನವಂಬರ್ 1 ರಿಂದ ಜರುಗಲಿದೆ. ಕಳೆದ ವರ್ಷಕ್ಕಿಂತ ಈ ವರ್ಷದ ಉತ್ಸವ ಹೆಚ್ಚು ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಆಯೋಜಕರು.
ಸೋಮವಾರ ಸುದ್ದಿಗಾರರನ್ನು ಭೇಟಿ ಮಾಡಿದ ರಾಜ್ಯ ಐಟಿ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಅವರಿಗಂತೂ ಉತ್ಸವ ಯಶಸ್ಸು ಕಾಣುವ ಬಗೆಗೆ ಪೂರ್ಣ ವಿಶ್ವಾಸ. 15 ರಾಷ್ಟ್ರಗಳು ಉತ್ಸವದಲ್ಲಿ ಭಾಗವಹಿಸುತ್ತವೆ. ಆದರೆ, ಸೆಪ್ಟಂಬರ್ 11 ರಂದು ನಡೆದ ಅಮೆರಿಕಾ ಮೇಲಿನ ದಾಳಿಯ ಕಾರಣದಿಂದಾಗಿ ಐಟಿ ಮೇಳದಲ್ಲಿ ಪಾಲ್ಗೊಳ್ಳುವ ಅತಿಥಿಗಳ ಸಂಖ್ಯೆ ಕಡಿಮೆಯಾಗಬಹುದು ಎಂದರು ಕುಲಕರ್ಣಿ.
ಈ ಸಲದ ಉತ್ಸವ ಸಪ್ಪೆಯಾಗಿರುತ್ತದೆ ಎನ್ನುವ ಸುದ್ದಿಗಳೆಲ್ಲ ಕೇವಲ ವದಂತಿಗಳಷ್ಟೇ ಎಂದ ಅವರು, ಕಳೆದ ವರ್ಷದ ಮೇಳದಲ್ಲಿ 6 ವೈವಿಧ್ಯತೆಗಳು ಉತ್ಸವದಲ್ಲಿದ್ದರೆ ಈ ಸಲ ಇನ್ನೂ ಮೂರು ವಿಶಿಷ್ಟತೆಗಳು ಮೇಳವನ್ನು ಆಕರ್ಷಕವಾಗಿಸಲಿವೆ. ಭವಿಷ್ಯಕ್ಕಾಗಿ ಇನ್ನೂ ಹೆಚ್ಚು ಎನ್ನುವುದು ಈ ಬಾರಿಯ ಉತ್ಸವದ ಥೀಮ್ ಎಂದರು.
ಐಟಿ ಮೇಳವನ್ನು ರಾಜ್ಯ ಐಟಿ ಇಲಾಖೆಯಾಂದಿಗೆ ಎಸ್‌ಟಿಪಿಐ ಜಂಟಿಯಾಗಿ ಆಯೋಜಿಸುತ್ತಿದೆ. ಭಾರತದ ಸಾಫ್ಟ್‌ವೇರ್ ಉದ್ಯಮದ ಮೇಲೆ ಯುಎಸ್ ಸ್ಲೋಡೌನ್ ಪರಿಣಾಮಗಳ ಅಧ್ಯಯನ ನಡೆಸಲಾಗಿದೆ. ಫಲಿತಾಂಶವನ್ನು ಐಟಿ ಮೇಳದಲ್ಲಿ ಬಹಿರಂಗಪಡಿಸಲಾಗುವುದು ಎಂದರು- ಕುಲಕರ್ಣಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಎಸ್‌ಟಿಪಿಐ ನಿರ್ದೇಶಕ ಬಿ.ವಿ.ನಾಯ್ಡು .
ಕಳೆದ ವರ್ಷದ ಮೇಳದಲ್ಲಿ 200 ಮಿಲಿಯನ್ ಡಾಲರ್‌ಗಳ ವ್ಯವಹಾರ ಗಿಟ್ಟಿತ್ತು . ಈ ವರ್ಷದ ಮೇಳದ ವ್ಯವಹಾರ ಹಳೆಯ ದಾಖಲೆಗಳನ್ನು ಮುರಿಯಲಿದೆ. ಈ ವರ್ಷ ಮೈಕ್ರೋಸಾಫ್ಟ್ ಪ್ಲಾಟಿನಂ ಪ್ರಾಯೋಜಕ ಎಂದು ಕುಲಕರ್ಣಿ ಹೇಳಿದರು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications