ಉಕ್ಕಿ ಹರಿಯುತಿಹಳು ಭೀಮೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ
ಬಿಜಾಪುರ: ಕೆಲವೇ ತಿಂಗಳುಗಳ ಹಿಂದೆ ಭೀಮೆ ಬತ್ತಿದ್ದಾಗ, ಬಿಜಾಪುರ ಜಿಲ್ಲೆ ಹಾಗೂ ಸುತ್ತಮುತ್ತಲ ಜನತೆ ಕುಡಿಯುವ ನೀರಿಗೂ ಪರದಾಡಿದ್ದು, ನಿಮಗೂ ಗೊತ್ತು. ಆಗ ಮಹಾರಾಷ್ಟ್ರದ ಉಜ್ಜಿನಿ ಜಲಾಶಯದಿಂದ ಭೀಮೆಗೆ ನೀರು ಬಿಡುವಂತೆ ಕರ್ನಾಟಕ ಸರಕಾರ ಮಹಾರಾಷ್ಟ್ರ ಸರಕಾರಕ್ಕೆ ಪದೇ ಪದೇ ಮನವಿ ಮಾಡಿತು.
ಉದ್ರಿಕ್ತ ರೈತರು ಹೋರಾಟವನ್ನೂ ಕೈಗೊಂಡರು. ಬ್ಯಾರೇಜ್ ಗೇಟೂ ಮುರಿದರು. ಕರ್ನಾಟಕದ ಮನವಿಯನ್ನು ಮನ್ನಿಸಿದ ಮಹಾರಾಷ್ಟ್ರ ನೀರೂ ಬಿಡುಗಡೆ ಮಾಡಿತು. ಗುಲ್ಬರ್ಗಾ, ಬಿಜಾಪುರ ಜಿಲ್ಲೆಗಳ ಜಲಕ್ಷಾಮ ನಿವಾರಿಸಲು ಬ್ಯಾರೇಜ್ ನಿರ್ಮಿಸುವ ಆಶ್ವಾಸನೆಯನ್ನೂ ನೀಡಿತು.
ಮೇ ತಿಂಗಳಿನಲ್ಲಿ ಬತ್ತಿದ್ದ ಭೀಮೆ ಇಂದು ತುಂಬಿ ಹರಿಯುತ್ತಿದೆ. ಬೇಸಿಗೆಯಲ್ಲಿ ಬೆಳೆದ ಪೈರಿಗೆ ನೀರೊದಗಿಸದ ಭೀಮೆ. ಈ ಹೊತ್ತು, ಬೆಳೆದು ನಿಂತಿರುವ ಫಸಲನ್ನು ಕೊಚ್ಚಿಕೊಂಡು ಹೋಗುತ್ತಿದೆ. ನೀರಿಗಾಗಿ ಅಂದು ಕಣ್ಣೀರು ಹಾಕಿದ ರೈತ ಇಂದು ಕೊಚ್ಚಿಹೋಗುತ್ತಿರುವ ಬೆಳೆಯನ್ನು ಕಂಡು ಕಣ್ಣೀರುಗರೆಯುತ್ತಾ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಕಳೆದ 10 ದಿನಗಳಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಪುಟ್ಟ ಹಳ್ಳ ಕೊಳ್ಳಗಳೆಲ್ಲಾ ತುಂಬಿದ್ದು, ಆ ನೀರು ಭೀಮೆಗೆ ಹರಿದುಬರುತ್ತಿರುವ ಕಾರಣ ಭೀಮೆ ಉಕ್ಕಿ ಹರಿಯುತ್ತಿದೆ. ಈ ಮಧ್ಯೆ ಇಂಡಿ ತಾಲೂಕಿನ ಗುಬ್ಬೇವಾಡದ ಬಳಿ ಮಹಾರಾಷ್ಟ್ರ ನಿರ್ಮಿಸಿರುವ ಹಿಳ್ಳಿ ಬ್ಯಾರೇಜ್ ಗೇಟ್ ಮುಚ್ಚಿರುವ ಕಾರಣ ನೀರು ಕರ್ನಾಟಕ ಗಡಿ ಭಾಗದ ಹಳ್ಳಿಗಳ ಹೊಲ ಗದ್ದೆಗಳಿಗೆ ನುಗ್ಗುತ್ತಿದೆ.
ಉಕ್ಕಿ ಹರಿಯುತಿಹ ನೀರಿನಿಂದ ದಡದಲ್ಲಿರುವ 25 ಎಕರೆ ಜಮೀನಲ್ಲಿ ಬೆಳೆದು ನಿಂತಿದ್ದ ಬಾಳೆ, ಕಬ್ಬು ಹಾಗೂ ಪಂಪ್‌ಸೆಟ್‌ಗಳು ಕೊಚ್ಚಿ ಹೋಗಿವೆ. ನೀರಿನ ರಭಸಕ್ಕೆ ತೋಟ, ಹೊಲ, ಗದ್ದೆಗಳ ಮಣ್ಣು ಕುಸಿಯುತ್ತಿದೆ. ಸುಮಾರು 50 ಲಕ್ಷ ಕ್ಕೂ ಹೆಚ್ಚು ಹಾನಿ ಆಗಿದೆ ಎಂದು ಅಂದಾಜು ಮಾಡಲಾಗಿದೆ.
ಭೂ ಕೊರೆತದಿಂದ ಜಮೀನಿನ ಪಕ್ಕದಲ್ಲಿ 30 ಅಡಿ ಆಳದ ಹೊಂಡ ನಿರ್ಮಾಣವಾಗಿದೆ. ಮಹಾರಾಷ್ಟ್ರ ನೀರಾವರಿ ಅಧಿಕಾರಿಗಳೊಂದಿಗೆ ಬಿಜಾಪುರ ಜಿಲ್ಲಾಧಿಕಾರಿ ರಾಕೇಶ್ ಸಿಂಗ್ ಮಾತುಕತೆ ನಡೆಸಿದ್ದಾರೆ. ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಜಿಲ್ಲೆಯ ರೈತರು ಒತ್ತಾಯಿಸುತ್ತಿದ್ದಾರೆ.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications