Get Updates
Get notified of breaking news, exclusive insights, and must-see stories!

ಏಳು ಯಕ್ಷಗಾನ ಪ್ರಸಂಗಗಳಿಗೆ ಸೆಷನ್ಸ್‌ ನ್ಯಾಯಾಲಯದಿಂದ ತಡೆಯಾಜ್ಞೆ

ಉಡುಪಿ : ಡಾ. ಶಿವರಾಮ ಕಾರಂತರು ನಿರ್ದೇಶಿಸಿದ್ದ ಯಕ್ಷರಂಗದ ಏಳು ಪ್ರಸಂಗಗಳನ್ನು ಪ್ರದರ್ಶಿಸಬಾರದೆಂದು ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರ ತಂಡಕ್ಕೆ ಮಂಗಳೂರಿನ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಈ ಕುರಿತ ಮುಂದಿನ ವಿಚಾರಣೆ ನವೆಂಬರ್‌ ಏಳರಂದು ನಡೆಯಲಿದೆ. ನ್ಯಾಯಾಧೀಶ ಎಂ. ಎಸ್‌. ಬಾಲಕೃಷ್ಣ ಅವರು ಬುಧವಾರ ನೀಡಿದ ಆದೇಶದಲ್ಲಿ ಕಾರಂತರು ನಿರ್ದೇಶಿಸಿದ ಭೀಷ್ಮ ವಿಜಯ, ಅಭಿಮನ್ಯು ವಧೆ, ಕನಕಾಂಗಿ, ನಳ ದಮಯಂತಿ, ಚಿತ್ರಾಂಗದೆ, ಪಂಚವಟಿ ಹಾಗೂ ಗಯ ಚರಿತ್ರೆ ಪ್ರಸಂಗಗಳನ್ನು ಪ್ರದರ್ಶಿಸಬಾರದು ಎಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ.

ಡಾ. ಕಾರಂತರು ತಮ್ಮ ಉಯಿಲಿನಲ್ಲಿ, ಈ ಪ್ರಸಂಗಗಳ ಸಂಪೂರ್ಣ ಹಕ್ಕನ್ನು ಬಿ. ಮಾಲಿನಿ ಮಲ್ಯ ಅವರಿಗೆ ನೀಡಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರವು ಕಳೆದ ತಿಂಗಳು ಅಭಿಮನ್ಯು ವಧೆ ಪ್ರಸಂಗವನ್ನು ದೆಹಲಿಯಲ್ಲಿ ಪ್ರಸ್ತುತಪಡಿಸಿತ್ತು. ಈ ಬಗ್ಗೆ ಮಾಲಿನಿ ಮಲ್ಯ ಅವರು ಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿ ದಾವೆ ಹೂಡಿದ್ದರು. ಈ ದಾವೆಯಲ್ಲಿ ಯಕ್ಷಗಾನ ಕೇಂದ್ರವನ್ನು ನಡೆಸುತ್ತಿರುವ ಮಣಿಪಾಲ ಎಜುಕೇಷನ್‌ ಹಾಗೂ ಎಂಜಿಎಂ ಕಾಲೇಜು ಟ್ರಸ್ಟ್‌ಗಳ ಅಧ್ಯಕ್ಷರನ್ನೂ ಪ್ರತಿವಾದಿಗಳೆಂದು ಗುರುತಿಸಲಾಗಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+