Get Updates
Get notified of breaking news, exclusive insights, and must-see stories!

ಅಮೆರಿಕನ್‌ ಸೈನಿಕನೊಬ್ಬನನ್ನು ಹಿಡಿದುಕೊಟ್ಟವರಿಗೆ 50 ಸಾವಿರ ಡಾಲರ್‌ಗಳು !

ಕಾಬೂಲ್‌ : ಆಫ್ಘಾನ್‌ ಪ್ರದೇಶದಲ್ಲಿ ಕಂಡು ಬರುವ ಒಬ್ಬ ಅಮೆರಿಕನ್‌ ಸೈನಿಕನನ್ನು ಹಿಡಿದು ಕೊಟ್ಟಲ್ಲಿ 50 ಸಾವಿರ ಡಾಲರ್‌ಗಳ ಬಹುಮಾನವನ್ನು ಒಸಾಮಾ ಬಿನ್‌ ಲ್ಯಾಡೆನ್‌ನ ಅಲ್‌ ಖೈದಾ ಬಳಗ ಘೋಷಿಸಿದೆ.

ಪ್ರಾದೇಶಿಕ ಪತ್ರಿಕೆ ಔಸಾಫ್‌ ಶುಕ್ರವಾರ ಈ ವಿಷಯವನ್ನು ವರದಿ ಮಾಡಿದೆ. ಅಮೆರಿಕನ್‌ ಮಿಲಿಟರಿ ಸಮವಸ್ತ್ರವನ್ನು ತಂದು ಕೊಟ್ಟರೆ 3 ಸಾವಿರ ಡಾಲರ್‌, ಹಾಗೂ ಅಮೆರಿಕನ್‌ ಗನ್‌ ಪತ್ತೆ ಹಚ್ಚಿ ತಂದಲ್ಲಿ ಒಂದುವರೆ ಸಾವಿರ ಡಾಲರ್‌ ಬಹುಮಾನ ನೀಡಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ಇಸ್ಲಾಮಿಕ್‌ ಆಂದೋಲನಗಳನ್ನು , ಅದರಲ್ಲಿಯೂ ತಾಲಿಬಾನ್‌ ಆಡಳಿತವನ್ನು ಬೆಂಬಲಿಸುವ ಈ ದೈನಿಕ ಲ್ಯಾಡೆನ್‌ ಬಳಗದ ಅನಾಮಿಕ ವಕ್ತಾರರ ಮೂಲವನ್ನು ಉಲ್ಲೇಖಿಸಿ ಬಹುಮಾನ ಘೋಷಣೆಯ ವಿಷಯವನ್ನು ವರದಿ ಮಾಡಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+