ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ್‌ ಹಾಗೂ ತಾಲಿಬಾನ್‌ ಯೋಧರ ನಡುವೆ ಗುಂಡಿನ ಚಕಮಕಿ

By Staff
|
Google Oneindia Kannada News

ಇಸ್ಲಾಮಾಬಾದ್‌ : ಪಾಕಿಸ್ತಾನೀ ಪಡೆಗಳು ಹಾಗೂ ತಾಲೀಬಾನ್‌ ಯೋಧರ ನಡುವೆ ಗುರುವಾರ ಅರ್ಧ ತಾಸಿನ ಕಾಲ ಗುಂಡಿನ ಚಕಮಕಿ ನಡೆದಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪಾಕ್‌- ಆಫ್ಘಾನಿಸ್ತಾನ್‌ ಗಡಿ ಭಾಗದಲ್ಲಿರುವ ತೋರ್‌ಮಾಂಡಿಯಲ್ಲಿ ಪಾಕಿಸ್ತಾನದ ಅರೆ ಮಿಲಿಟರಿ ಪಡೆ ಹಾಗೂ ತಾಲೀಬಾನ್‌ ಯೋಧರು ಬಂದೂಕಿನಿಂದ ಪರಸ್ಪರ ಗುಂಡು ಹಾರಿಸಿದರು. ಅರ್ಧ ಗಂಟೆ ಕಾಲ ನಡೆದ ಗುಂಡಿನ ದಾಳಿಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವಾರ ಗಡಿ ಪ್ರದೇಶ, ನಾವಾದಲ್ಲೂ ಇದೇ ರೀತಿ ಗುಂಡಿನ ಚಕಮಕಿ ನಡೆದಿತ್ತು. ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ತಾಲಿಬಾನ್‌ ನಡು-ವೆ ಇದೀಗ ಶತ್ರು ಭಾವನೆ ಬೆಳೆದಿದೆ. ಅಮೆರಿಕಾವನ್ನು ಪಾಕ್‌ ಬೆಂಬಲಿಸಿರುವುದೇ ಇದಕ್ಕೆ ಕಾರಣ. ತಾಲಿಬಾನ್‌ ಜೊತೆ ರಾಜತಾಂತ್ರಿಕ ಸಂಬಂಧ ಇಟ್ಟುಕೊಂಡಿರುವ ಏಕೈಕ ರಾಷ್ಟ್ರ ಪಾಕಿಸ್ತಾನವಾಗಿ-ದೆ. ಆದರೆ ಈಗ ಅದು ಮುರಿದುಬೀ-ಳು-ತ್ತಿ-ರು-ವ ಲಕ್ಷಣಗಳು ನಿಚ್ಚಳವಾಗುತ್ತಿವೆ.

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X