ಇನ್ಫೋಸಿಸ್ ತ್ರೆೃಮಾಸಿಕ ವರದಿ: ಐಟಿ ಷೇರ್ ಮಾರ್ಕೆಟ್ನಲ್ಲಿ ಸಂಚಲನ
ನವದೆಹಲಿ : ಇನ್ಫೋಸಿಸ್ನ ಪ್ರಸಕ್ತ ವಿತ್ತ ವರ್ಷದ ದ್ವಿತೀಯ ತ್ರೆೃಮಾಸಿಕ ವರದಿ ಹೊರಬಿದ್ದ ನಂತರ ಷೇರು ಮಾರುಕಟ್ಟೆ ಸಾಕಷ್ಟು ಚೇತರಿಸಿಕೊಂಡಿದೆ. ಪರಿಣಾಮ ಸ್ಥಳೀಯ ಹಾಗೂ ವಿದೇಶೀ ಷೇರು ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ ದೆಹಲಿ ಸ್ಟಾಕ್ ಎಕ್ಸ್ಚೇಂಜ್ (ಡಿಎಸ್ಇ) ನಲ್ಲಿನ ಸೂಚ್ಯಂಕದಲ್ಲಿ ಶುಕ್ರವಾರ 3.11ಪಾಯಿಂಟ್ಗಳಷ್ಟು ಏರಿಕೆ ಕಂಡುಬಂದಿತು.
ಅರ್ಧ ತಾಸಿನ ವಹಿವಾಟಿನಲ್ಲಿ ಸೂಚ್ಯಂಕ 783.25 ಮುಟ್ಟಿತು. ಕಳೆದೊಂದು ತಿಂಗಳಿಂದ ಪೆಚ್ಚು ಮೋರೆ ಮಾಡಿಕೊಂಡಿದ್ದ ಷೇರು ದಲ್ಲಾಳಿಗಳು ಶುಕ್ರವಾರ ಖುಷಿಯಾಗಿದ್ದರು. ಹಿಂದೂಸ್ಥಾನ್ ಲಿವರ್, ಬೋನಸ್ ಡಿಬೆಂಚರು ಪ್ರಕಟಿಸಿದ್ದು , ಇನ್ಫೋಸಿಸ್ ತ್ರೆೃಮಾಸಿಕ ವರದಿ ಮಾರುಕಟ್ಟೆಗೆ ಪೂರಕವಾದ ಹಲವಾರು ಅಂಶಗಳನ್ನು ಒಳಗೊಂಡಿದ್ದು ಷೇರು ಮಾರುಕಟ್ಟೆಗೆ ಉಸಿರು ಮರಳಿದೆ.
ಅಮೆರಿಕೆಯ ನಾಸ್ದಾಕ್ ಸೂಚ್ಯಂಕ ಕೂಡ ಗುರುವಾರ ರಾತ್ರಿ 4.62 ಪ್ರತಿಶತ ಏರಿತು. ಉಗ್ರರು ದಾಳಿ ನಡೆಸಿದ ಒಂದು ತಿಂಗಳ ನಂತರ ಇದೇ ಮೊದಲ ಬಾರಿಗೆ ಷೇರು ಮಾರುಕಟ್ಟೆಗೆ ಜೀವಬಂದಿರುವುದು. ಕಳೆದೊಂದು ತಿಂಗಳಿಂದ ನಷ್ಟ ಅನುಭವಿಸುತ್ತಲೇ ಬಂದಿದ್ದ ವಾಲ್ಸ್ಟ್ರೀಟ್ನಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಇನ್ಫೋಸಿಸ್ ಟೆಕ್ನಾಲಜೀಸ್, ಡಿಎಸ್ಕ್ಯು ಸಾಫ್ಟ್ವೇರ್, ಹಿಮಾಚಲ್ ಫ್ಯುಚರಿಸ್ಟಿಕ್, ಗ್ಲೋಬಲ್ ಟೆಲಿಫಿಲ್ಮ್ ಹಾಗೂ ರಿkುೕ ಟೆಲಿಫಿಲ್ಮ್ ಷೇರುಗಳಿಗೆ ಸಾಕಷ್ಟು ಬೆಲೆ ದೊರೆಯುತ್ತಿದೆ. ಷೇರು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವುದೆಂದರೆ ರಿಲಯನ್ಸ್ ಗ್ರೂಪ್ಸ್.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications