• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಮೂಲದ ನೈಪಾಲ್‌ಗೆ ಸಾಹಿತ್ಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ

By Staff
|

ಸ್ಟಾಕ್‌ಹೋಂ: ಭಾರತೀಯ ಮೂಲದ ಟ್ರಿನಿಡ್ಯಾಡ್‌ ಸಂಜಾತ ಇಂಗ್ಲಿಷ್‌ ಲೇಖಕ ವಿದ್ಯಾಧರ ಸೂರಜ್‌ಪ್ರಸಾದ್‌ ನೈಪಾಲ್‌ ಸಾಹಿತ್ಯ ಕ್ಷೇತ್ರದ ನೊಬೆಲ್‌ -2001 ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಸ್ವೀಡಿಷ್‌ ವಿಜ್ಞಾನ ಅಕಾಡಮಿಯ ಪತ್ರಿಕಾ ಹೇಳಿಕೆ ಈ ವಿಷಯ ತಿಳಿಸಿದೆ.

ನೂರಾರು ಅತ್ಯುನ್ನತ ಪ್ರಶಸ್ತಿ - ಪುರಸ್ಕಾರಗಳಿಗೆ ಪಾತ್ರರಾಗಿರುವ 69 ವರ್ಷ ವಯಸ್ಸಿನ ನೈಪಾಲ್‌ ಅವರ ಸಾಧನೆಗೆ ಸಾಹಿತ್ಯ ಜಗತ್ತಿನ ಪರಮೋಚ್ಚ ಪ್ರಶಸ್ತಿ ಸಂದಿದೆ. ಟ್ರಿನಿಡ್ಯಾಡ್‌ನಲ್ಲಿ ಜನಿಸಿದ ನೈಪಾಲ್‌ ಅವರ ತಂದೆ ಭಾರತೀಯ ನಾಗರಿಕ ಸೇವೆಯಲ್ಲಿ ಅಧಿಕಾರಿ ಆಗಿದ್ದವರು.

1950ರಿಂದಲೂ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ನೈಪಾಲ್‌, ತಮ್ಮ ಬದುಕಿನ ಬಹುಕಾಲವನ್ನು ವಿಶ್ವಪರ್ಯಟನೆಗೇ ಮೀಸಲಿಟ್ಟ ವರು. ಮೂಲತಃ ಶೋಧಕ ಪ್ರವೃತ್ತಿಯ ನೈಪಾಲ್‌ ಅವರ ಸಾಹಿತ್ಯ ಕೃಷಿಗೆ ಸ್ಫೂರ್ತಿಹಾಗೂ ಸಾಮಗ್ರಿ ದೊರೆತದ್ದು ಅವಿರತ ಪ್ರವಾಸದಿಂದಲೇ.

ಇವರ ಮೊದಲ ಮೇರು ಕೃತಿ ‘ಎ ಹೌಸ್‌ ಫಾರ್‌ ಮಿಸ್ಟರ್‌ ಬಿಸ್ವಾಸ್‌’. ಈ ಕೃತಿಯಲ್ಲಿ ಅವರು, ಭಾರತದಿಂದ ಕೆರೆಬಿಯನ್‌ಗೆ ವಲಸೆಹೋದವರು ತಮ್ಮ ನೆಲೆಗಳೊಂದಿಗಿನ ಸಂಬಂಧಗಳನ್ನು ಕಳಚಿಕೊಳ್ಳದೆ, ಬೇರೊಂದು ಸಂಸ್ಕೃತಿಗೆ ಒಗ್ಗಿಕೊಳ್ಳುವ ಪರಿಪಾಟಲುಗಳನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ.

ನೈಪಾಲರು ಸೃಷ್ಟಿಸಿದ ಕೆಲವು ಸಾಹಿತ್ಯಕ ಮೈಲುಗಲ್ಲುಗಳು....

 • The Mystic Masseur. London: Deutsch, 1957.
 • Miguel Street. London: Deutsch, 1959.
 • A House for Mr. Biswas. London: Deutsch, 1961.
 • The Middle Passage : Impressions of Five Societies British, French and Dutch in the West Indies and South America. London: Deutsch, 1962.
 • Mr Stone and the Knights Companion. London: Deutsch, 1963.
 • A Flag on the Island. London: Deutsch, 1967.
 • The Loss of El Dorado: A History. London: Deutsch, 1969.
 • In a Free State. London: Deutsch, 1971.
 • The Overcrowded Barracoon and Other Articles. London: Deutsch, 1972.
 • India : A Wounded Civilization. London: Deutsch, 1977.
 • A Bend in the River. London: Deutsch, 1979.
 • A Congo Diary. Los Angeles, CA: Sylvester

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more