Get Updates
Get notified of breaking news, exclusive insights, and must-see stories!

ಶಾಂತಿ ಬೇಕು! ಅಮೆರಿಕಾದಲ್ಲಿ ಕುಡಿಯಾಡೆದ ಯುದ್ಧವಿರೋಧಿ ಸೊಲ್ಲು

ನ್ಯೂಯಾರ್ಕ್‌ : ತಾಲಿಬಾನ್‌ ಮೇಲೆ ಅಮೆರಿಕ ಹೂಡಿರುವ ಯುದ್ಧಕ್ಕೆ ಅಮೆರಿಕಾದಲ್ಲೂ ಪ್ರತಿಭಟನೆ ವ್ಯಕ್ತವಾಗುತ್ತಿದ್ದು , ಮಂಗಳವಾರ ನ್ಯೂಯಾರ್ಕ್‌ ಟೈಂಸ್‌ ವೃತ್ತದ ಬಳಿ ಭಾರೀ ಸಂಖ್ಯೆಯ ಅಮೆರಿಕನ್‌ ಪ್ರತಿಭಟನಕಾರರು ಯುದ್ಧ ವಿರೋಧಿ ಪ್ರದರ್ಶನ ನಡೆಸಿದರು.

ಯುದ್ಧದಿಂದ ಏನನ್ನೂ ಗಳಿಸಲು ಸಾಧ್ಯವಿಲ್ಲ ಎಂಬ ಘೋಷಣೆಗಳನ್ನು ಕೂಗಿದ ಪ್ರದರ್ಶನಕಾರರು , ಆಪ್ಘಾನಿಸ್ತಾನದ ಮೇಲಿನ ಬಾಂಬ್‌ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಅಧ್ಯಕ್ಷ ಬುಷ್‌ ಅವರನ್ನು ಒತ್ತಾಯಿಸಿದರು. ತಾಲಿಬಾನ್‌ ಮೇಲಿನ ದಾಳಿಯನ್ನು ಭವಿಷ್ಯದ ಜನಾಂಗ ಕ್ಷಮಿಸುವುದಿಲ್ಲ . ನಮಗಿಂದು ಬೇಕಾದುದು ಶಾಂತಿ ಎಂದು ಪ್ರದರ್ಶನಕಾರರು ಪ್ರತಿಪಾದಿಸಿದರು.

ಪಾಕಿಸ್ತಾನದಲ್ಲಿ ಮುಂದುವರಿದ ಪ್ರತಿಭಟನೆ, ಹಿಂಸಾಚಾರ

ಆಪ್ಘಾನಿಸ್ತಾನದ ಮೇಲೆ ಅಮೆರಿಕ ಹಾಗೂ ಬ್ರಿಟನ್‌ ಪಡೆಗಳು ನಡೆಸುತ್ತಿರುವ ವಾಯುದಾಳಿಯನ್ನು ವಿರೋಧಿಸಿ ಪಾಕಿಸ್ತಾನದಲ್ಲಿ ಮಂಗಳವಾರವೂ ಪ್ರತಿಭಟನೆಗಳು ಮುಂದುವರಿದಿವೆ. ಹಲವಾರು ನಗರಗಳಲ್ಲಿ ಅಮೆರಿಕ ವಿರೋಧಿ ಪ್ರದರ್ಶನಗಳು ನಡೆದಿದ್ದು , ಹಿಂಸಾಚಾರವೂ ಸಂಭವಿಸಿದೆ.

ಕೆಲವು ಪ್ರದೇಶಗಳಲ್ಲಿ ಪೊಲೀಸ್‌ ಹಾಗೂ ಉದ್ರಿಕ್ತ ಪ್ರದರ್ಶನಕಾರರ ನಡುವೆ ಘರ್ಷಣೆಗಳೂ ನಡೆದಿವೆ. ನಗರವೊಂದರಲ್ಲಿ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿದ್ದು , 7 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

(ಏಜೆನ್ಸೀಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+