ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಟುತ್ತಿದೆ ಕೈಗಡಿಯಾರ

By Staff
|
Google Oneindia Kannada News

(ಇನ್ಫೋ ಇನ್‌ಸೈಟ್‌)

Timex watchಬೆಂಗಳೂರು : ಯಾಂತ್ರಿಕ ಯುಗದಲ್ಲಿ ಗಡಿಯಾರ ಕಟ್ಟುವವರೂ ಕಡಿಮೆಯಾಗುತ್ತಿದ್ದಾರಾ? !

ಒಂದು ಸಮೀಕ್ಷೆ ಹೌದು ಎನ್ನುತ್ತಿದೆ. ಹಿಂದೆ ಕೈಗಡಿಯಾರ ಆಪದ್ಬಂಧು ಆಗಿತ್ತು. ಕಿಸೆಯಲ್ಲಿ ಚಿಕ್ಕಾಸೂ ಇಲ್ಲದಿದ್ದಾಗ ಯಾವುದೋ ಕಿರಾಣಿ ಅಂಗಡಿಯಲ್ಲಿ ಅಡ ಇಡಬಹುದಿತ್ತು. ಆದರೆ ಕೀಲಿ ಕೊಡುವ ಕಾಲ ಹಳತು. ಸೆಲ್‌ನಿಂದ ಕಾಲ ತೋರುವ ಕೈಗಡಿಯಾರಗಳ ಸಾವಿರಾರು ಮಾದರಿಗಳು ಫುಟ್‌ಪಾತಿನಲ್ಲೇ ಬಿಕರಿಗೆ ಬಿದ್ದಿವೆ. ಇನ್ನು ವಾಚು ಬದಲಿಸೋದು ಮದುವೆಗಾಗಿ. ಯಾರಿಗಾದರೂ ದುಬಾರಿ ಉಡುಗೊರೆ ಕೊಡಬಯಸಿದಾಗ ಕೂಡ ಗ್ರಾಹಕ ವಾಚಿನಂಗಡಿಗೆ ಹೋಗುತ್ತಾನೆ. ಅಷ್ಟು ಬಿಟ್ಟರೆ ಕೈಗಡಿಯಾರಕ್ಕಿದು ಕಾಲವಲ್ಲ. ಗಡಿಯಾರ ಕೈಗೆ ಭಾರವೆಂದಲ್ಲ ! ಸೆಲ್‌ಫೋನ್‌, ಕ್ಯಾಲ್‌ಕ್ಯುಲೇಟರ್‌, ಕಂಪ್ಯೂಟರ್‌ ಎಲ್ಲೆಲ್ಲೂ ಕಾಲಸೂಚಿಗಳೆ ತುಂಬಿರುವಾಗ ಕೈ ಗಡಿಯಾರ ಕುಂಟ್ತುತಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಪ್ರೆೃಸ್‌ವಾರ್‌ ಕೂಡ ಕೈಗಡಿಯಾರದ ಮಾರುಕಟ್ಟೆಯಲ್ಲಿ ಏನೇನೂ ಕೆಲಸ ಮಾಡುತ್ತಿಲ್ಲ. ಮಾರುಕಟ್ಟೆ ತೀರಾ ಹೀನಾಯ ಸ್ಥಿತಿಯಲ್ಲಿದೆ. ಎಚ್‌ಎಂಟಿ ಅಳುತ್ತಿದ್ದರೆ, ಟೈಟಾನ್‌ ತೆವಳುತ್ತಿದೆ. ಭಾರೀ ಭಾರೀ ದರದ ಚೆನ್ನಾಚೆನ್ನು ಕೈಗಡಿಯಾರಗಳನ್ನು ದಿಢೀರನೆ ಮಾರುಕಟ್ಟೆಗೆ ನುಗ್ಗಿಸಿ ಇತರೆ ಕಂಪನಿಗಳ ಉಸಿರು ಗಟ್ಟಿಸಿದ್ದು ಟೈಮೆಕ್ಸ್‌. ಈಗ ಅದೂ ಕೂಡ ಹೆಣಗಾಡುತ್ತಿದೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು ಸ್ವಾಮಿ.

2000- 2001ನೇ ವಿತ್ತವರ್ಷದಲ್ಲಿ ಟೈಮೆಕ್ಸ್‌ ಅನುಭವಿಸಿದ ನಷ್ಟ ಬರೋಬ್ಬರಿ 47 ಕೋಟಿ ರುಪಾಯಿ. ಈಗ ನಷ್ಟ ತುಂಬಿಕೊಳ್ಳುವುದು ಹಾಗಿರಲಿ, ನಷ್ಟ ತಗ್ಗಿಸಲೇ ಕಂಪನಿಯ ಅಧಿಕಾರಿಗಳು ಒದ್ದಾಟ ನಡೆಸಿದ್ದಾರೆ. ಅದಕ್ಕೆ ಮಂಗಳವಾರ ನಡೆದ ಈ ಸುದ್ದಿಗೋಷ್ಠಿಯೇ ಸಾಕ್ಷಿ...

ಪ್ರಸಕ್ತ ವಿತ್ತವರ್ಷದಲ್ಲಿ ನಷ್ಟದ ಪ್ರಮಾಣವನ್ನು ಅರ್ಧದಷ್ಟು ತಗ್ಗಿಸಿಕೊಳ್ಳಲಿದೆ ಎಂದು ಕಂಪನಿಯ ಮೇನೇಜಿಂಗ್‌ ಡೈರೆಕ್ಟರ್‌ ಕಪಿಲ್‌ ಕಪೂರ್‌ ಹೇಳಿದ್ದಾರೆ. ಭಾರತದಲ್ಲಿ ತನ್ನ ಕಂಪನಿಯ ಮಾರುಕಟ್ಟೆ ಪ್ರಸ್ತುತ ಪ್ರತಿಶತ 22ರಷ್ಟಿದೆ. ಇದನ್ನು ಪ್ರತಿಶತ 33ಕ್ಕೆ ಏರಿಸುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಭಾರತದ ಗ್ರಾಹಕರಿಗೆ ಹೊಸ ಮಾದರಿಯ ಕೈಗಡಿಯಾರಗಳನ್ನು ಮಾರುಕಟ್ಟೆಗೆ ತರುತ್ತಿದ್ದೇವೆ ಎಂದರು.

2000- 2001ನೇ ವಿತ್ತವರ್ಷದಲ್ಲಿ ಕಂಪನಿ 67 ಕೋಟಿ ರುಪಾಯಿ ಆದಾಯ ಮಾತ್ರ ಗಳಿಸಿತ್ತು. ಪ್ರಸ್ತುತ ವಿತ್ತವರ್ಷದ ಪ್ರಥಮ ತ್ರೆೃಮಾಸಿಕದಲ್ಲಿ ಕಂಪನಿಯ ಕೈಗಡಿಯಾರ ಮಾರಾಟ ವಹಿವಾಟು 73 ಪ್ರತಿಶತ ಹೆಚ್ಚಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಮಾರುಕಟ್ಟೆ ಷೇರನ್ನು ಪ್ರತಿಶತ 18ರಿಂದ ಪ್ರತಿಶತ 22ಕ್ಕೆ ಏರಿಸಿದ್ದೇವೆ ಎಂದು ಕಪೂರ್‌ ಹೇಳಿದರು.

ಹೊಸ ವಾಚು : ಈ ವಿಷಯವನ್ನು ಹೇಳುತ್ತಲೇ ಟೈಮೆಕ್ಸ್‌ನ ಅಂತರರಾಷ್ಟ್ರೀಯ ಗುಣ ಮಟ್ಟದ ‘ಮೆಟ್ರಿಕ್ಸ್‌ ಕಲೆಕ್ಷನ್‌’ ಎಂಬ ಹೊಸ ಮಾದರಿಯ ಕೈಗಡಿಯಾರಗಳನ್ನು ಅವರು ಮಾರುಕಟ್ಟೆಗೆ ಪರಿಚಯಿಸಿದರು. ಕೈಗಡಿಯಾರ ಬದಲಿಸುವ ಇರಾದೆ ನಿಮ್ಮದಾದರೆ ಒಮ್ಮೆ ಈ ಹೊಸ ಮಾದರಿಯನ್ನೂ ನೋಡಿಬನ್ನಿ.

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X