ಬೆಂಗಳೂರಿನಲ್ಲಿ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ಉದಯ
ಬೆಂಗಳೂರು : ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ದುರಂತದ ಬಳಿಕ ಅಮೆರಿಕಕ್ಕೆ ನರ್ಸ್‌ಗಳ ಅಗತ್ಯವಿದ್ದು, ಭಾರತದಿಂದ ಅಮೆರಿಕೆಗೆ ತೆರಳುವ ವೈದ್ಯ ಸಿಬ್ಬಂದಿಗೆ ಪ್ರವೇಶ ಪರೀಕ್ಷೆ ನಡೆಸುವ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿ(ಎನ್‌ಎಎಚ್‌ಎಸ್) ನಗರದಲ್ಲಿ ಆರಂಭವಾಗಿದೆ.
ವೈದ್ಯರು, ನರ್ಸ್‌ಗಳು ಮತ್ತು ಆರೋಗ್ಯ ನಿರ್ವಹಣಾ ಅಧಿಕಾರಿಗಳನ್ನು ಎನ್‌ಎಎಚ್‌ಎಸ್ ಒಳಗೊಂಡಿದೆ. ವಿದೇಶಗಳಿಗೆ ತೆರಳ ಬಯಸುವ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡುವ ಕೆಲಸವನ್ನು ಈ ಅಕಾಡೆಮಿ ಮಾಡಲಿದೆ. ಈವರೆಗೆ ಅಮೆರಿಕಾದಲ್ಲಿ ಕೆಲಸ ಮಾಡಲು ತೆರಳುವ ಅಧಿಕಾರಿಗಳಿಗೆ ಕೊಲಂಬೊ, ಕರಾಚಿ, ಬ್ಯಾಂಕಾಕ್‌ನಲ್ಲಿ ಮಾತ್ರ ತರಬೇತಿ ಮತ್ತು ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು.
ಲಾರ್ಡ್ ಆಸ್ಪತ್ರೆಯ ಡಾ. ಜೊಸೆಫ್ ಬೆನವೆನ್ ಅಕಾಡೆಮಿಯ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಅಮೆರಿಕಾಕ್ಕೆ ತೆರಳಬಯಸುವ ನರ್ಸ್‌ಗಳು ಭಾರತದಲ್ಲಿಯೇ ಪರೀಕ್ಷೆ ಬರೆಯಬಹುದು. ಈ ಪರೀಕ್ಷಾ ಕೇಂದ್ರ ಬರುವ ವರ್ಷದ ಮಾರ್ಚ್‌ನಿಂದ ಕೆಲಸ ಆರಂಭಿಸಲಿದೆ ಎಂದು ಜೊಸೆಫ್ ತಿಳಿಸಿದ್ದಾರೆ.
ಭವಿಷ್ಯದಲ್ಲಿ ಅಮೆರಿಕಾಗೆ ಸುಮಾರು ಎರಡು ಲಕ್ಷ ಮಂದಿ ನರ್ಸ್‌ಗಳ ಅವಶ್ಯಕತೆ ಇದೆ ಎಂದು ಹೇಳಿದೆ. ಸಾಫ್ಟವೇರ್ ಇಂಜಿನಿಯರ್‌ಗಳಿಗೆ ಬೇಡಿಕೆ ಇದ್ದಷ್ಟೇ ನರ್ಸ್‌ಗಳಿಗೂ ಅಲ್ಲಿ ಬೇಡಿಕೆ ಇದೆ. ಪ್ರಸ್ತುತ ಅಮೆರಿಕಾದಲ್ಲಿ ಪರಿಣತಿ ಹೊಂದಿದ ವೈದ್ಯರು ಮತ್ತು ಅಧಿಕಾರಿಗಳು ಅಕಾಡೆಮಿಯಲ್ಲಿ ವಿದೇಶಕ್ಕೆ ತೆರಳಬಯಸುವವರಿಗೆ ತರಬೇತಿ ನೀಡಲಿದ್ದಾರೆ. ಅಕಾಡೆಮಿಯು ಅಮೆರಿಕಾದ ಕೆಲವು ಕಂಪೆನಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಿಂದ ಇಲ್ಲಿ ತರಬೇತಿ ಪಡೆದವರು ಅಮೆರಿಕಾದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭವಾಗುತ್ತದೆ ಎಂದು ಜೊಸೆಫ್ ಹೇಳಿದ್ದಾರೆ.
ತರಬೇತಿಯ ಹೊರತಾಗಿ ಅಕಾಡೆಮಿಯು ನರ್ಸಿಂಗ್, ನಿರ್ವಹಣೆ ಮತ್ತು ವೈದ್ಯಕೀಯ ಕಾನೂನುಗಳ ತರಬೇತಿಯನ್ನೂ ನಿರಂತರವಾಗಿ ನೀಡುವುದನ್ನು ಮುಂದುವರೆಸಲಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications