ಜಂಬೂ ಸವಾರಿಗೆ ಭರದ ಸಿದ್ಧತೆ
* ನಾಗೇಂದ್ರ ಪ್ರಸಾದ್, ನಂಜನಗೂಡು
ಮೈಸೂರು : ಅತ್ತ ಬರ, ಇತ್ತ ಅಂತಾರಾಷ್ಟ್ರೀಯ ಭಯೋತ್ಪಾದನೆ ಭೀತಿ. ಈ ನಡುವೆಯೂ ವಿಶ್ವವಿಖ್ಯಾತ ಮೈಸೂರು ದಸರೆಯ ಜಂಬೂಸವಾರಿಗೆ ಸಿದ್ಧತೆಗಳು ಸಾಗಿವೆ. ಬರದ ಹಿನ್ನೆಲೆಯಲ್ಲಿ ಸರಳ ದಸರೆ ಆಚರಣೆಗೆ ಸರಕಾರ ನಿರ್ಧರಿಸಿದ್ದರೂ, ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಎಚ್ಚರ ವಹಿಸಲಾಗಿದೆ.
ಅಂತಾರಾಷ್ಟ್ರೀಯ ಭಯೋತ್ಪಾದನೆ - ಆಫ್ಘನ್ ವಿರುದ್ಧ ನಡೆಯುತ್ತಿರುವ ಸಮರದ ಹಿನ್ನೆಲೆಯಲ್ಲಿ ವಿದೇಶೀ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ದಸರೆಗೆ ತಿಂಗಳುಗಳ ಮುಂಚೆ ಬುಕ್ ಆಗುತ್ತಿದ್ದ ಮೈಸೂರು ಹೊಟೆಲ್, ಲಾಡ್ಜ್‌ಗಳ ಮಾಲಿಕರ ಪ್ರವಾಸಿಗರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಕಳೆದ ವರ್ಷ ವರನಟ ಡಾ. ರಾಜ್‌ಕುಮಾರ್ ಅಪಹರಣ ಹಿನ್ನೆಲೆಯಲ್ಲಿ ದಸರಾ ಉತ್ಸವ ಕಳೆಗುಂದಿತ್ತು. ಹೊಟೆಲ್, ವಸತಿಗೃಹಗಳು ಬೇಡಿಕೆ ಕಳೆದುಕೊಂಡಿದ್ದವು. ಈ ವರ್ಷ ಅಂತಾರಾಷ್ಟ್ರೀಯ ಭಯೋತ್ಪಾದನೆ ಹಾಗೂ ಬರದ ಕಾರ್ಮೋಡ ಮೈಸೂರು ದಸರೆಯ ಮೇಲೆ ಕವಿದಿದೆ.
ತಾಲೀಮು: ಈ ಮಧ್ಯೆ ಈಗಾಗಲೇ ಮೈಸೂರಿಗೆ ಆಗಮಿಸಿರುವ ಚಿನ್ನದ ಅಂಬಾರಿ ಹೊರುವ ಬಲರಾಮ ಸೇರಿದಂತೆ ರಾಜಗಾಂಭೀರ್ಯದಿಂದ ಬಲರಾಮನ ಹಿಂದೆ ಹೆಜ್ಜೆ ಹಾಕುವ ಆನೆಗಳ ಪರಿವಾರಕ್ಕೆ ಜಂಬೂ ಸವಾರಿ ಸಾಗುವ ರಸ್ತೆಗಳಲ್ಲಿ ಪೂರ್ವಭಾವಿ ನಡಿಗೆ ತಾಲೀಮು ನಡೆಯುತ್ತಿದೆ. ಹೆಚ್ಚೂಕಮ್ಮಿ ಒಂದು ಟನ್ ತೂಕದ ಚಿನ್ನದಂಬಾರಿ ಹೊರುವ ಬಲರಾಮನ ಬೆನ್ನಿನ ಮೇಲೆ ಅಷ್ಟೇ ತೂಕದ ಹೊರೆ ಇಟ್ಟು, ಬೆಳಗ್ಗೆ ಹಾಗೂ ಸಂಜೆ ಪೂರ್ವಭಾವಿ ಅಭ್ಯಾಸ ಮಾಡಿಸಲಾಗುತ್ತಿದೆ.
ಆನೆಗಳಿಗೆ ಮೈಸೂರಿನಲ್ಲಿ ರಾಜೋಪಚಾರ ನಡೆಯುತ್ತಿದೆ. ಗಾಡಿಗಟ್ಟಲೆ ಹಸಿರೆಲೆ ಅರಮನೆ ಆವರಣಕ್ಕೆ ಆಗಮಿಸುತ್ತಿದೆ. ಸ್ವಾದಿಷ್ಟ ಹಾಗೂ ಪೌಷ್ಟಿಕ ಆಹಾರವನ್ನು ಬೇಯಿಸಿ, ಆನೆಗಳಿಗೆ ನೀಡಲಾಗುತ್ತಿದೆ. ಆದರೆ, ಪ್ರಸಿದ್ಧ ಕಾರಂಜಿ ಕೆರೆ ಕಲುಷಿತಗೊಂಡಿರುವ ಕಾರಣ ಬಕಿಟ್, ಕೊಳವೆ ನೀರಿನ ಸ್ನಾನಕ್ಕೇ ಆನೆಗಳು ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅಕ್ಟೋಬರ್ 17ರಿಂದ ಶರನ್ನವರಾತ್ರಿ ಆರಂಭವಾಗಲಿದೆ. ಸಂಪ್ರದಾಯದಂತೆ ಅಂದಿನಿಂದಲೇ ಹಳೆ ಮೈಸೂರಿನ ಮಂದಿ ಮನೆಗಳಲ್ಲಿ ಪಟ್ಟದ ಬೊಂಬೆ ಸೇರಿದಂತೆ ಹಲವಾರು ಬಗೆಯ ಬೊಂಬೆಗಳನ್ನು ಅಂದವಾಗಿ ಜೋಡಿಸುತ್ತಾರೆ. ಹೆಣ್ಣು ಮಕ್ಕಳಿರುವವರ ಮನೆಯಲ್ಲಂತೂ ಬೊಂಬೆ ಹಬ್ಬದ ಸಡಗರ ಈಗಲೇ ಕಾಣುತ್ತಿದೆ.
ಪಟ್ಟದ ಬೊಂಬೆಗಳಿಗೆ ಹೊಸ ಉಡುಗೆ ತೊಡಿಸುವ ಕಾಯಕದಲ್ಲಿ ಗೃಹಿಣಿಯರು ತೊಡಗಿದ್ದಾರೆ. ಕೇವಲ ಗಂಡು ಮಕ್ಕಳಷ್ಟೇ ಇರುವ ಕೆಲವರು ಸರಸ್ವತಿ ಹಬ್ಬದ ದಿನದಿಂದ ತಮ್ಮ ಮನೆಯಲ್ಲಿ ಬೊಂಬೆಗಳನ್ನು ಕೂರಿಸುತ್ತಾರೆ. 21ರ ಭಾನುವಾರ ಸರಸ್ವತಿ ಹಬ್ಬ.
25ರಂದು ಮಹಾನವಮಿ /ಆಯುಧ ಪೂಜೆ. ಸಂಪ್ರದಾಯದಂತೆ ಅಂದು ವಾಹನಗಳಿಗೆ ವಿಜೃಂಭಣೆಯ ಅಲಂಕಾರ ನಡೆಯುತ್ತದೆ. ಮನೆಗಳಲ್ಲಿ ಇರುವ ಚಾಕು, ಕತ್ತರಿಗೂ ಪೂಜೆ ನಡೆಯುತ್ತದೆ. ಅಂಗಡಿ, ಕಾರ್ಖಾನೆಗಳಲ್ಲೂ ವಿಶೇಷ ಪೂಜೆ ಏರ್ಪಡಿಸಲಾಗುತ್ತದೆ. 26ರಂದು ವಿಜಯದಶಮಿ. ಜಂಬೂ ಸವಾರಿ.
ಆಯುಧ ಪೂಜೆಯ ಅಲಂಕಾರಕ್ಕಾಗಿ ಈಗಲೇ ಬಳೆ ಅಂಗಡಿಗಳಲ್ಲಿ ಬಣ್ಣಬಣ್ಣದ ಕಾಗದಗಳು, ಅಲಂಕಾರಗಳು, ಹೂ ಮಾಲೆಗಳು ಆಗಮಿಸಿವೆ. ಬೂದಗುಂಬಳ, ನಿಂಬೆಹಣ್ಣು ಮಾರುಕಟ್ಟೆಗೆ ಬರಲು ತವಕಿಸುತ್ತಿದೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications