Get Updates
Get notified of breaking news, exclusive insights, and must-see stories!

3ನೇ ದಿನ ರಾತ್ರಿಯೂ ಮುಂದುವರಿದಿದೆ ವೈಮಾನಿಕ ದಾಳಿ

ಇಸ್ಲಾಮಾಬಾದ್‌ : ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಅಮೆರಿಕ ನೇತೃತ್ವದ ಪಡೆಗಳು ಸತತ ಮೂರನೇ ದಿನ ರಾತ್ರಿಯೂ ಆಫ್ಘಾನಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ವಾಯು ದಾಳಿ ಆರಂಭಿಸಿವೆ. ಭಾರತೀಯ ಕಾಲಮಾನ 8.30 ಗಂಟೆಯಲ್ಲಿ ಮತ್ತೆ ದಾಳಿ ಆರಂಭವಾಗಿದ್ದು, ರಾತ್ರಿಯಿಡೀ ದಾಳಿ ನಡೆಯುವ ಸಾಧ್ಯಗಳಿವೆ.

ಆಫ್ಘಾನಿಸ್ತಾನದ ಹೃದಯ ಭಾಗದಲ್ಲಿ ದಾಲಿ ಮುಂದುವರಿದಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಕಾಬೂಲ್‌ವರದಿ : ಅಮೆರಿಕ ನಡೆಸಿದ ಹೊಸ ದಾಳಿಯಲ್ಲಿ ಕನಿಷ್ಠ 35 ನಾಗರಿಕರು ಸಾವನ್ನಪ್ಪಿದ್ದಾರೆ ಇಲ್ಲವೆ ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನದ ಮಿಲಿಟರಿ ಆಡಳಿತ ತಾಲಿಬಾನ್‌ ಮಂಗಳವಾರ ಪ್ರಕಟಿಸಿದೆ. ತಾಲಿಬಾನ್‌ ವರಿಷ್ಠ ಮುಲ್ಲಾ ಮೊಹಮದ್‌ ಉಮರ್‌ನ ವಕ್ತಾರ ಅಬ್ದುಲ್‌ ಹೈ ಮುತ್‌ಮೀನ್‌ ಈ ವಿಷಯ ತಿಳಿಸಿದ್ದಾರೆ.

ಅಕ್ಟೋಬರ್‌ 8ರ ರಾತ್ರಿ ಮತ್ತು 9ರಂದು ಬೆಳಗ್ಗೆ ಅಮೆರಿಕ ನಡೆಸಿದ ಹೊಸ ದಾಳಿಯಲ್ಲಿ ಈ ಸಾವು ನೋವು ಉಂಟಾಗಿದೆ. ಆದರೆ, ತಾಲಿಬಾನ್‌ ಸೇನಾಪಡೆಯ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್‌ 8ರಂದು ರಾತ್ರಿ ಮತ್ತು 9ರಂದು ನಡೆದ ದಾಳಿಗಳಿಂದಾಗಿ ಆಪ್ಘನ್‌ ರಾಜಧಾನಿ ಕಾಬೂಲ್‌ನಲ್ಲಿ ಸ್ಫೋಟಗಳ ಸರಮಾಲೆಯೇ ನಡೆದಿದೆ. ದಾಳಿ ಕಾಬೂಲ್‌ನಗರವನ್ನು ಛಿದ್ರಛಿದ್ರಗೊಳಿಸಿದೆ. ಅಮೆರಿಕವು ಮಂಗಳವಾರ ಮೊದಲ ಬಾರಿಗೆ ಹಗಲು ಹೊತ್ತಿನಲ್ಲೂ ದಾಳಿ ನಡೆಸಿದೆ. ಇದರೊಂದಿಗೆ ಅಮೆರಿಕದಿಂದ ಮೂರನೇ ಹಂತದ ದಾಳಿ ನಡೆದಂತಾಗಿದೆ. ಈ ಮಧ್ಯೆ

  • ತನ್ನ ಎಲ್ಲ ವಿಮಾನಗಳು ದಾಳಿ ನಡೆಸಿ ಯಶಸ್ವಿಯಾಗಿ ವಾಪಸಾಗಿವೆ. ತಾಲಿಬಾನ್‌ ತನ್ನ ಯಾವ ವಿಮಾನವನ್ನೂ ಹೊಡೆದುರುಳಿಸಿಲ್ಲ ಎಂದು ಅಮೆರಿಕ ಪುನರುಚ್ಚರಿಸಿದೆ.
  • ಅಮೆರಿಕ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿಗೆ ತಾಲಿಬಾನ್‌ ವಾಯುಪಡೆಯ ಮುಖ್ಯಸ್ಥ ಬಲಿಯಾಗಿದ್ದಾನೆ ಎಂದು ಇರಾನ್‌ ಸುದ್ದಿ ಸಂಸ್ಥೆ ಹೇಳಿದೆ. ಅ.8ರಂದು ನಡೆದ ದಾಳಿಯಲ್ಲಿ ಆಫ್ಘನ್‌ ಏರ್‌ ಕಮಾಂಡರ್‌ ಅಕ್ತರ್‌ ಮೊಹಮದ್‌ ಮನ್ಸೂರ್‌ ಬಲಿಯಾಗಿದ್ದಾರೆ.
  • ಅಮೆರಿಕದ ವಿಶೇಷ ಪಡೆಗಳು ಮಂಗಳವಾರ ಆಫ್ಘನ್‌ನ ಸಂಭವನೀಯ ಜೈವಿಕ ಯುದ್ಧದ ವಿರುದ್ಧ ಪ್ರತಿರೋಧಕ ಸಿಂಪರಣೆ ಮಾಡಿಕೊಂಡಿವೆ.
  • ಅಮೆರಿಕ ಮತ್ತು ಬ್ರಿಟನ್‌ ಜೊತೆಗೂಡಿ ಆಫ್ಘನ್‌ ಮೇಲೆ ನಡೆಸುತ್ತಿರುವ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬೆಂಬಲಿಸಿದೆ.
  • ಆಫ್ಘನ್‌ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕ ಪಡೆಗಳು, ಕ್ಷಿಪಣಿಯ ಜೊತೆಗೆ ಆಹಾರದ ಪೊಟ್ಟಣಗಳನ್ನೂ ನಿರಾಶ್ರಿತರಿಗಾಗಿ ಎಸೆಯುತ್ತಿವೆ.
  • ಅಮೆರಿಕ ದಾಳಿ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪ್ರತಿಭಟನೆ ಪ್ರಕೋಪಕ್ಕೆ ಹೋಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರ ಧಾರ್ಮಿಕ ನಾಯಕರನ್ನು ಗೃಹಬಂಧನದಲ್ಲಿಟ್ಟಿದೆ.
  • ವಾಯುದಾಳಿ ಕೆಲವೇ ದಿನಗಳು ಮಾತ್ರ ನಡೆಯುತ್ತದೆ ಎಂದು ಅಮೆರಿಕ ಹೇಳಿದ್ದು, ಭಯೋತ್ಪಾದಕರ ನೆಲೆಗಳ ಮೇಲೆ ಮುಂದಿನ ವಾರದಿಂದ ಭೂಕಾರ್ಯಾಚರಣೆ ನಡೆಯುತ್ತದೆ ಎಂಬ ಸುಳಿವು ನೀಡಿದೆ.
  • ಕಾಬೂಲ್‌, ಕಂದಹಾರ್‌, ಜಲಾಲಾಬಾದ್‌ ವಾಯು ದಾಳಿಯಿಂದ ತತ್ತರಿಸಿದ್ದು, ಜನ ಗಂಟು ಮೂಟೆ ಕಟ್ಟಿ, ದಿಕ್ಕಾಪಾಲಾಗಿ ಓಡುತ್ತಿದ್ದಾರೆ.
  • ಲಾಡೆನ್‌ನನ್ನು ಜೀವಂತ ಹಿಡಿಯಲು ಇಲ್ಲವೆ ಹೆಣವನ್ನಾಗಿಸಲು ಪ್ರತಿಜ್ಞೆ ಮಾಡಿರುವ ಅಮೆರಿಕ, ಲಾಡೆನ್‌ ಸಾವಿನಿಂದ ಭಯೋತ್ಪಾದನೆ ವಿರುದ್ಧ ಸಮರ ನಿಲ್ಲುವುದಿಲ್ಲ ಎಂದು ಸಾರಿದೆ.
  • ಮುಲ್ಲಾ ಮೊಹಮದ್‌ ಒಮರ್‌ ಮನೆ ಮೇಲೆ ದಾಳಿ ನಡೆದಿದ್ದು, ಒಮರ್‌ ಸುರಕ್ಷಿತವಾಗಿದ್ದಾರೆ.
(ಪಿಟಿಐ/ಎಎಫ್‌ಪಿ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+