Get Updates
Get notified of breaking news, exclusive insights, and must-see stories!

ಅಮೆರಿಕಕ್ಕೆ ತಕ್ಕ ಉತ್ತರ ಕೊಡುತ್ತೇವೆ: ತಾಲಿಬಾನ್‌ ಸಚಿವ ಸಂಪುಟ

US fighter planes are prepared for take off from aboard the USS Enterpriseಇಸ್ಲಾಮಾಬಾದ್‌ : ಅಮೆರಿಕ ನೇತೃತ್ವದ ಪಡೆಗಳ ದಾಳಿಗೆ ತಕ್ಕ ಉತ್ತರ ನೀಡುವುದಾಗಿ ತಾಲಿಬಾನ್‌ ಹೇಳಿದೆ. ಭಾನುವಾರದ ದಾಳಿಯ ಹಿನ್ನೆಲೆಯಲ್ಲಿ ತನ್ನ ನಿಲುವು ಬದಲಾಯಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಸೋಮವಾರ ನಡೆದ ತುರ್ತು ಸಂಪುಟ ಸಭೆಯಲ್ಲಿ ಹೋರಾಟದ ನಿರ್ಧಾರ ಕೈಗೊಳ್ಳಲಾಗಿದೆ.

ಒಸಾಮಾ ಬಿನ್‌ ಲಾಡೆನ್‌ನನ್ನು ರಕ್ಷಿಸುವ ತನ್ನ ನಿಲುವಿಗೆ ತಾಲಿಬಾನ್‌ ಅಂಟುಕೊಂಡಿದೆ ಎಂದು ವರದಿಗಳು ಹೇಳಿವೆ. ಅಮೆರಿಕ ಮತ್ತು ಬಿಟ್ರನ್‌ನ ದಾಳಿ ವಿರುದ್ಧ ಉಗ್ರ ಹೋರಾಟಕ್ಕೆ ತಾನು ಸಿದ್ಧವಾಗಿರುವುದಾಗಿ ತಾಲಿಬಾನ್‌ ಪ್ರಕಟಿಸಿದೆ ಎಂಬ ಸುದ್ದಿ ಆಫ್ಘನ್‌ ಇಸ್ಲಾಮಿಕ್‌ ಪ್ರೆಸ್‌ನಲ್ಲಿ ವರದಿಯಾಗಿದೆ.

ಸೋಮವಾರದ ಸಭೆಯಲ್ಲಿ ಮಿಲಿಟರಿ ಕಾರ್ಯಾಚರಣೆ ಮತ್ತು ರಾಜಕೀಯ ತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಮಿಲಿಟರಿ ಪಡೆಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಪುನರ್‌ ನಿಯೋಜನೆ ಮಾಡಲಾಗಿದೆ. ನಾವೂ ಪ್ರತಿದಾಳಿಯ ತಂತ್ರಗಳನ್ನು ರೂಪಿಸಿದ್ದೇವೆ ಎಂದು ತಾಲಿಬಾನ್‌ ವಕ್ತಾರರು ಹೇಳಿದ್ದಾರೆ.

  • ತಾಲಿಬಾನ್‌ ತನ್ನ ಯಾವುದೇ ವಿಮಾನವನ್ನೂ ಹೊಡೆದುರುಳಿಸಿಲ್ಲ ಎಂದು ಅಮೆರಿಕಾ ಹೇಳಿದೆ.
  • ತನ್ನ ನೇತೃತ್ವದಲ್ಲಿ ಬ್ರಿಟನ್‌ನೊಂದಿಗೆ ಸೇರಿ ನಡೆಸಿದ ಕಾರ್ಯಾಚರಣೆ ಸಂಪೂರ್ಣ ಫಲಪ್ರದವಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ ಫೀಲ್ಡ್‌ ಪ್ರಕಟಿಸಿದ್ದಾರೆ.
  • ಆಫ್ಘನ್‌ ಮೇಲೆ ನಡೆದಿರುವ ದಾಳಿಗೆ ಪ್ರತಿದಾಳಿ ನಡೆಸುವುದಾಗಿ ತಾಲಿಬಾನ್‌ ಆಡಳಿತ ಅಮೆರಿಕ ಮತ್ತು ಮಿತ್ರರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ. ಭಾನುವಾರದ ದಾಳಿಯ ಸಮಯದಲ್ಲಿ ಒಂದು ಅಮೆರಿಕದ ವಿಮಾನವನ್ನು ಹೊಡೆದುರುಳಿಸಿರುವುದಾಗಿಯೂ ಅದು ಘೋಷಿಸಿದೆ.
  • ಭಾನುವಾರ ತನ್ನ ನೆಲದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಒಟ್ಟು 30 ಆಫ್ಘನ್‌ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆಫ್ಘನ್‌ ಅಧಿಕೃತವಾಗಿ ಪ್ರಕಟಿಸಿದೆ.
  • ಭಯೋತ್ಪಾದಕರು ಮತ್ತೆ ಅಮೆರಿಕ ಮೇಲೆ ದಾಳಿ ಮಾಡಬಹುದೆಂಬ ಸುಳಿವಿನ ಹಿನ್ನೆಲೆಯಲ್ಲಿ ಅಮೆರಿಕಾದ್ಯಂತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.
  • ಯುದ್ಧ ಪರಿಸ್ಥಿತಿಯ ಅಧ್ಯಯನಕ್ಕೆ ತೆರಳುತ್ತಿದ್ದ 6 ಮಂದಿ ವಿಶ್ವಸಂಸ್ಥೆ ವೀಕ್ಷಕರಿದ್ದ ಹೆಲಿಕಾಪ್ಟರ್‌ ಅನ್ನು ಚೆಚೆನ್‌ ಬಂಡುಕೋರರು ಹೊಡೆದುರುಳಿಸಿದ್ದಾರೆ. ಈ ಘಟನೆಯಲ್ಲಿ 9 ಜನರು ಬಲಿಯಾಗಿದ್ದಾರೆ.
  • ಎಲ್ಲ ವಿಧದ ಭಯೋತ್ಪಾದನೆಯನ್ನೂ ಖಂಡಿಸಿರುವ ಚೀನಾ, ಭಯೋತ್ಪಾದಕರ ನೆಲೆಗಳ ಮೇಲೆ ಮಾತ್ರ ದಾಳಿ ಮಾಡುವಂತೆ ಅಮೆರಿಕೆಗೆ ಹೇಳಿದೆ.
  • ಆಪ್ಘನ್‌ ಮೇಲೆ ನಡೆಯುತ್ತಿರುವ ಯುದ್ಧವನ್ನು ಮುಸ್ಲಿಂ ರಾಷ್ಟ್ರಗಳು ಪ್ರತಿಭಟಿಸಬೇಕು ಎಂದು ಸದ್ದಾಂ ಹುಸೇನ್‌ ಕರೆ ನೀಡಿದ್ದಾರೆ.
  • ಆಫ್ಘನ್‌ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ನಾಗಸಾಕಿಯ ಮೇಯರ್‌ ಇಟ್‌ಕೋ ಇಟೋ ಎಚ್ಚರಿಕೆ ನೀಡಿದ್ದಾರೆ.
  • ಇದು ತಾಲಿಬಾನ್‌ನ ಸ್ವಯಂಕೃತ ಅಪರಾಧ. ಸುಂದರ ಆಫ್ಘನ್‌ ಸ್ಮಶಾಣವಾಗಲು ತಾಲಿಬಾನ್‌ ಕಾರಣ ಎಂದು ಪದಚ್ಯುತ ದೊರೆ ಮೊಹಮ್ಮದ್‌ ಜಾಹಿರ್‌ ಶಾ ಹೇಳಿದ್ದಾರೆ.
  • ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ವಾಯವ್ಯ ಪಾಕಿಸ್ತಾನ ಭಾಗದ ಎಲ್ಲ ವಿದ್ಯಾಸಂಸ್ಥೆಗಳನ್ನೂ ಅನಿರ್ದಿಷ್ಟಕಾಲದವರೆಗೆ ಮುಚ್ಚಲಾಗಿದೆ ಎಂದು ವರದಿಗಳು ಹೇಳಿವೆ.
(ಎಎಫ್‌ಪಿ/ಪಿಟಿಐ/ಇನ್‌ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+