ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಅಮೆರಿಕನ್ನರೇ, ಮೈಯ್ಯೆಲ್ಲಾ ಕಣ್ಣಾಗಿರಿ- ಬುಷ್‌ ಆಡಳಿತ

By Staff
|
Google Oneindia Kannada News

ವಾಷಿಂಗ್ಟನ್‌ : ಆಪ್ಘಾನಿಸ್ತಾನದ ವಿರುದ್ಧ ಅಧಿಕೃತ ಯುದ್ಧವನ್ನು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ , ಸಂಭವನೀಯ ಅಮೆರಿಕ ವಿರೋಧಿ ಭಯೋತ್ಪಾದಕ ಕೃತ್ಯಗಳ ವಿರುದ್ಧ ಮೈಯ್ಯೆಲ್ಲಾ ಕಣ್ಣಾಗಿರುವಂತೆ ಬುಷ್‌ ಆಡಳಿತ ಅನಿವಾಸಿ ಅಮೆರಿಕನ್ನರಿಗೆ ಎಚ್ಚರಿಕೆ ನೀಡಿದೆ.

ಪ್ರಸ್ತುತ ಆಪ್ಘಾನಿಸ್ತಾನದಲ್ಲಿರುವ ಅಮೆರಿಕನ್ನರು ತಕ್ಷಣವೇ ದೇಶವನ್ನು ತೊರೆಯುವಂತೆ ಹಾಗೂ ವಿಶ್ವದ ಇತರ ಭಾಗಗಳಲ್ಲಿರುವ ಅಮೆರಿಕನ್ನರು ಪ್ರಚಲಿತ ಘಟನೆಗಳನ್ನು ನಿಕಟವಾಗಿ ಗಮನಿಸುವಂತೆ, ಮತ್ತು ಹತ್ತಿರದ ಅಮೆರಿಕನ್‌ ರಾಯಭಾರಿ ಕಚೇರಿಯಾಂದಿಗೆ ಸಂಪರ್ಕ ಹೊಂದುವಂತೆ ರಾಜ್ಯ ಇಲಾಖೆ ತಿಳಿಸಿದೆ.

ಅಂತರರಾಷ್ಟ್ರೀಯ ಭಯೋತ್ಪಾದಕತೆಯನ್ನು ಹತ್ತಿಕ್ಕಲು ಅಮೆರಿಕ ತೆಗೆದುಕೊಂಡಿರುವ ಕ್ರಮಗಳು ಭಯೋತ್ಪಾದಕರನ್ನು ಕೆರಳಿಸಿವೆ. ಇದರಿಂದಾಗಿ ಅಮೆರಿಕ ವಿರೋಧಿ ಭಾವನೆಗಳು ಬಲವಾಗುತ್ತಿವೆ. ಇಂಥ ಸಂದರ್ಭದಲ್ಲಿ ಅಮೆರಿಕನ್ನರು ಸಂಭನೀಯ ಭಯೋತ್ಪಾದಕತೆಯ ವಿರುದ್ಧ ಕಟ್ಟೆಚ್ಚರದಿಂದ ಇರಬೇಕು ಎಂದು ಪ್ರಕಟಣೆ ತಿಳಿಸಿದೆ.

ಅಮೆರಿಕ ವಿರುದ್ಧ ಲ್ಯಾಡೆನ್‌ನಿಂದ ಜಿಹಾದ್‌ ಘೋಷಣೆ

ಅಮೆರಿಕ ವಿರುದ್ಧ ಧರ್ಮಯುದ್ಧ ಘೋಷಿಸಿರುವ ಲ್ಯಾಡೆನ್‌, ಅಮೆರಿಕದ ವಿರುದ್ಧ ಇನ್ನಷ್ಟು ದಾಳಿಗಳನ್ನು ಕೈಗೊಳ್ಳುವ ಇಂಗಿತವನ್ನು ಭಾನುವಾರ ಬಿಡುಗಡೆಯಾದ ವಿಡಿಯಾ ಟೇಪೊಂದರಲ್ಲಿ ವ್ಯಕ್ತಪಡಿಸಿದ್ದಾನೆ.

ಸೆಪ್ಟಂಬರ್‌ 8 ರಂದು ವಾಷಿಂಗ್ಟನ್‌ ಹಾಗೂ ನ್ಯೂಯಾರ್ಕ್‌ ಮೇಲೆ ನಡೆದ ದಾಳಿ, ಅದರ ದುಷ್ಕೃತ್ಯಕ್ಕೆ ದೇವರು ನೀಡಿದ ಶಿಕ್ಷೆ ಎಂದು ಲ್ಯಾಡೆನ್‌ ಬಣ್ಣಿಸಿದ್ದಾನೆ. ಅಮೆರಿಕಾಗೆ ಶಿಕ್ಷೆ ನೀಡಿದ ದೇವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದೂ ಲ್ಯಾಡೆನ್‌ ಹೇಳಿದ್ದಾನೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X