ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿಯ ನಾಲ್ಕನೇ ಕಂತು: ಕಾಬೂಲ್‌ ಮೇಲೆ ಬೆಂಕಿಯುಗುಳಿದ ಜೆಟ್‌

By Staff
|
Google Oneindia Kannada News

ಕಾಬೂಲ್‌: ಆಪ್ಘಾನಿಸ್ತಾನದ ಮೇಲೆ ಅಮೆರಿಕ ನಾಲ್ಕನೇ ಬಾರಿ ಬಾಂಬ್‌ ದಾಳಿ ನಡೆಸಿದ್ದು, ಕಾಬೂಲ್‌ ಮೇಲೆ ಜೆಟ್‌ ವಿಮಾನವೊಂದು ಬಾಂಬ್‌ದಾಳಿ ನಡೆಸಿದ ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳೀಯ ಮೂಲಗಳು ತಿಳಿಸಿವೆ.

ಕಾಬೂಲ್‌, ಕಂದಹಾರ್‌ ಮತ್ತು ಜಲಾಲಾಬಾದ್‌ ಮೇಲೆ ಅಮೆರಿಕಾದ ವಿಮಾನ ದಾಳಿ ನಡೆಸಿದ್ದು, ಈ ದಾಳಿಗೆ ಪ್ರತಿಯಾಗಿ ತಾಲಿಬಾನ್‌ ಪಡೆಗಳು ಪ್ರತಿದಾಳಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ತಾಲಿಬಾನ್‌ ವಿರುದ್ಧದ ದಾಳಿಯಲ್ಲಿ ಬ್ರಿಟನ್‌ನ ಜಲಾಂತರ್ಗಾಮಿ ಯುದ್ಧ ನೌಕೆಗಳು ಭಾಗವಹಿಸಿರುವುದಾಗಿ ಬ್ರಿಟನ್‌ ಪ್ರಧಾನಿ ಟೋನಿಬ್ಲೇರ್‌ ಹೇಳಿದ್ದಾರೆ.

ಪೆಂಟಗನ್‌ನಿಂದ ಯುದ್ಧ ಚಿತ್ರಗಳ ದೃಶ್ಯ ಸುರುಳಿ ಬಿಡುಗಡೆ

ಆಪ್ಘನಿಸ್ತಾನದ ವಿರುದ್ಧ ನಡೆಸಿದ ಬಾಂಬ್‌ ದಾಳಿಯ ಪ್ರಥಮ ಚಿತ್ರ ಸುರುಳಿಯನ್ನು ಪೆಂಟಗನ್‌ ಸೋಮವಾರ ಬಿಡುಗಡೆ ಮಾಡಿದೆ.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X