ಬಾಂಬ್ ದಾಳಿಗೆ ತತ್ತರಿಸಿದ ಆಪ್ಘಾನಿಸ್ತಾನ, ಸಾವು ನೋವು ಸಂಭವ
ಇಸ್ಲಮಾಬಾದ್: ಆಪ್ಘಾನಿಸ್ತಾನದ ಮೇಲೆ ಭಾನುವಾರ ರಾತ್ರಿಯಿಂದ ಅಮೆರಿಕ- ಬ್ರಿಟನ್ ಪಡೆಗಳು ನಡೆಸುತ್ತಿರುವ ಬಾಂಬ್ ದಾಳಿಯಲ್ಲಿ ಆಪ್ಘನ್ ನಾಗರಿಕರು ಸಾವಿಗೀಡಾಗಿದ್ದಾರೆಂದು ಪಾಕಿಸ್ತಾನದಲ್ಲಿನ ತಾಲಿಬಾನ್ ರಾಯಭಾರಿ ಹೇಳಿದ್ದಾರೆ.
ಇದೊಂದು ಭಾರೀ ದಾಳಿ. ಈ ದಾಳಿಯಲ್ಲಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ರಾಯಭಾರಿ ಅಬ್ದುಲ್ ಸಲಾಂ ಝಹೀಫ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಆಪ್ಘಾನಿಸ್ತಾನದ ಯಾವ ಭಾಗದಲ್ಲಿ ಸಾವು ನೋವುಗಳು ಸಂಭವಿಸಿವೆ ಎಂದು ಅವರು ಸ್ಪಷ್ಟಪಡಿಸಿಲ್ಲ .
ಕಂದಹಾರ್ನಲ್ಲಿ ವಿಮಾನ ನಿಯಂತ್ರಣ ಗೋಪುರಕ್ಕೆ ಹಾನಿ
ಅಮೆರಿಕ- ಬ್ರಿಟನ್ಗಳು ನಡೆಸಿರುವ ಬಾಂಬ್ ದಾಳಿಯಲ್ಲಿ ಕಂದಹಾರ್ನ ವಿಮಾನ ನಿಯಂತ್ರಣ ಗೋಪುರಕ್ಕೆ ಭಾರೀ ಹಾನಿ ಸಂಭವಿಸಿದೆ. ಆಪ್ಘಾನಿಸ್ತಾನದ ಮೇಲೆ ಈವರೆಗೆ ಕನಿಷ್ಠ 50 ಕ್ಷಿಪಣಿಗಳನ್ನು ಉಡಾಯಿಸಿದ್ದು , ಇವುಗಳ ಸದ್ದು ಇಸ್ಲಾಮಾಬಾದ್ವರೆಗೂ ಕೇಳಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ.
ಮುಲ್ಲಾ ಮೊಹಮದ್ ಓಮರ್ ಮನೆಯ ಮೇಲೂ ದಾಳಿ
ತಾಲಿಬಾನ್ನ ಮುಖ್ಯಸ್ಥ ಮುಲ್ಲಾ ಮೊಹಮದ್ ಓಮರ್ ನಿವಾಸದ ಮೇಲೂ ಅಮೆರಿಕ- ಬ್ರಿಟನ್ ಬಾಂಬ್ ದಾಳಿಯನ್ನು ನಡೆಸಿವೆ. ಆದರೆ, ಓಮರ್ಗೆ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ದಾಳಿಗೆ ಸ್ಪೇನ್, ಇರಾಕ್ ವಿರೋಧ
ಆಪ್ಘನಿಸ್ತಾನ ವಿರುದ್ಧ ವೈಮಾನಿಕ ದಾಳಿ ಆರಂಭಿಸಿರುವ ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಕ್ರಮಕ್ಕೆ ಸ್ಪೇನ್ ಹಾಗೂ ಇರಾಕ್ಗಳು ತಮ್ಮ ವಿರೋಧ ವ್ಯಕ್ತಪಡಿಸಿವೆ. ಆದರೆ, ಜಪಾನ್ ಬಾಂಬ್ ದಾಳಿಯನ್ನು ಸಮರ್ಥಿಸಿದೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications