ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂ ನಿವೃತ್ತಿ ಯೋಜನೆ ರಾಜ್ಯ ಸರಕಾರದ ಮುಂದಿಲ್ಲ: ಕೃಷ್ಣ

By Staff
|
Google Oneindia Kannada News

ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಘೋಷಿಸುವ ಯಾವುದೇ ಪ್ರಸ್ತಾಪ ಸದ್ಯಕ್ಕೆ ರಾಜ್ಯ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದ್ದಾರೆ. ಆದರೆ, ಹಾಲಿ ಇರುವ ಸಿಬ್ಬಂದಿಯನ್ನು ಕಡಿತಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸ್ಪಂದನ ರಹಿತ ಹಾಗೂ ಅಸಮರ್ಥ ಸಿಬ್ಬಂದಿ ಪಡೆಯನ್ನು ನಿಯಂತ್ರಿಸಲು ಕರ್ನಾಟಕ ಲೋಕಸೇವೆಯ ನೇಮಕಾತಿ (ಕೆಸಿಎಸ್‌ಆರ್‌) ನಿಯಮಗಳಿಗೆ ಶೀಘ್ರವೇ ತಿದ್ದುಪಡಿ ತರಲಾಗುವುದು ಎಂದು ಪಿ.ಟಿ.ಐ.ಗೆ ನೀಡಿರುವ ಸಂದರ್ಶನದಲ್ಲಿ ಕೃಷ್ಣ ಹೇಳಿದ್ದಾರೆ.

ಕರ್ನಾಟಕ ಲೋಕ ಸೇವೆ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಸೂಚಿಸಲು ನೇಮಿಸಲಾಗಿದ್ದ ಸಂಪುಟದ ಉಪಸಮಿತಿಯು ತನ್ನ ವರದಿ ನೀಡಿದೆ. ನಾವು ಸಂಬಳದ ಮೊತ್ತವನ್ನು ಹೇಗೆ ಕಡಿಮೆ ಮಾಡುವುದು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ಕೃಷ್ಣ ಹೇಳಿದರು. ಸರಕಾರವು ಸಾಲ ಸೇವೆಗಳು ಮತ್ತು ಪಿಂಚಣಿಯ ವೆಚ್ಚವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸುವುದಿಲ್ಲ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಸ್ವಯಂ ನಿವೃತ್ತಿ ಯೋಜನೆಯ ವಿವರಗಳನ್ನು ತಾವು ಅಧ್ಯಯನ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಮಾಡಿಕೊಳ್ಳುವ ಹೊಸ ನೇಮಕಾತಿಗಳು ರಾಜ್ಯ ಸಚಿವ ಸಂಪುಟದ ಸಮರ್ಥನೆಗೆ ಒಳಪಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಖಾಸಗೀಕರಣ ಪ್ರಯತ್ನವೂ ವಿಫಲವಾಗಿ, ಮುಚ್ಚಲಾಗುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮಾತ್ರ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದು ಕೃಷ್ಣ ಹೇಳಿದರು. ಅಗತ್ಯ ಸೇವೆಗಳಾದ ಆರೋಗ್ಯ, ಪ್ರಾಥಮಿಕ ಶಿಕ್ಷಣ ಮತ್ತು ಪೊಲೀಸ್‌ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತದೆ ಇದೆ ಎಂದೂ ವಿವರಿಸಿದರು.

(ಪಿ.ಟಿ.ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X