ವಿಎಚ್‌ಪಿ, ಭಜರಂಗದಳ ನಿಷೇಧಕ್ಕೆ ಎಸ್.ಎಂ. ಕೃಷ್ಣ ಒತ್ತಾಯ
ಬೆಂಗಳೂರು: ಇತ್ತೀಚೆಗೆ ನಿಷೇಧಿಸಲಾದ ‘ಸಿಮಿ’ಯಂತೆಯೇ ಭಜರಂಗದಳ ಹಾಗೂ ವಿಎಚ್‌ಪಿಗಳನ್ನೂ ಪರಿಗಣಿಸಿ, ಆ ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಎಲ್ಲ ಮೂಲಭೂತವಾದಿ ಸಂಘಟನೆಗಳನ್ನೂ ಒಂದೇ ರೀತಿ ಕಾಣಬೇಕು. ಈ ನಿಟ್ಟಿನಲ್ಲಿ ಸಿಮಿಗೆ ಆದ ಶಾಸ್ತಿಯೇ ಎಲ್ಲ ಮೂಲಭೂತ ಸಂಘಟನೆಗಳಿಗೂ ಆಗಬೇಕು ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಮೂಲಭೂತವಾದಿ ಸಂಘಟನೆಗಳಾದ ಭಜರಂಗದಳ ಮುಂತಾದವುಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು ಮತ್ತು ನಿಷೇಧಿಸಬೇಕು ಎಂದು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕೃಷ್ಣ ಒತ್ತಾಯಿಸಿದ್ದಾರೆ.
ವಿಎಚ್‌ಪಿಯನ್ನು ಕೂಡ ನೀವು ಒಂದು ಮೂಲಭೂತವಾದಿ ಸಂಘಟನೆ ಎಂದು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ ‘ಹೌದು’ ಎಂದು ಉತ್ತರಿಸಿರುವ ಮುಖ್ಯಮಂತ್ರಿಗಳು, ವಿಶ್ವಹಿಂದೂ ಪರಿಷತ್ ಕೂಡ ಮೂಲಭೂತವಾದಿ ನಿಲುವುಗಳನ್ನೇ ಪ್ರತಿನಿಧಿಸುತ್ತದೆ ಎಂದರು. ಗೃಹ ಸಚಿವಾಲಯವು ಎಲ್ಲ ಮೂಲಭೂತವಾದಿ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿ, ಅದಕ್ಕೆ ಪೂರಕವಾದ ದಾಖಲೆ ಪತ್ರ ಒದಗಿಸುವಂತೆ ರಾಜ್ಯಗಳಿಗೂ ಸೂಚಿಸಬೇಕು ಎಂದರು.
ಆನಂತರ ಕಠಿಣ ಕ್ರಮಗಳ ಮೂಲಕ ರಾಷ್ಟ್ರದಲ್ಲಿರುವ ಎಲ್ಲ ಮೂಲಭೂತವಾದಿ ಸಂಘಟನೆಗಳನ್ನೂ ಹತ್ತಿಕ್ಕಬಹುದು ಎಂದು ಕೃಷ್ಣ ಅಭಿಪ್ರಾಯಪಟ್ಟರು. ಸಿಮಿಯ ಕಾರ್ಯಾಚರಣೆ ಕರ್ನಾಟಕದಲ್ಲಿ ಸೀಮಿತವಾಗಿತ್ತು ಎಂದೂ ಕೃಷ್ಣ ಪ್ರಶ್ನೆಯಾಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.
ಅಧ್ಯಯನ: ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಅಮೆರಿಕದ ಎಫ್.ಬಿ.ಐ. ಮಾದರಿಯಲ್ಲಿ ಬೇಹುಗಾರಿಕೆ ದಳ ರಚಿಸುವ ಪ್ರಸ್ತಾಪವನ್ನು ಕೇಂದ್ರ ಮುಂದಿಟ್ಟಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೃಷ್ಣ , ನಾನು ಅಂಥ ಯಾವುದೇ ಪ್ರಸ್ತಾವವನ್ನು ನೋಡಿಲ್ಲ, ಆದರೆ, ಈ ಸಂಬಂಧದ ವರದಿ ಓದಿರುವೆ ಎಂದರು.
ಇಂತಹ ಒಂದು ಬೇಹುಗಾರಿಕೆ ದಳ ರಚನೆಯನ್ನು ನೀವು ಬೆಂಬಲಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ‘ಮೊದಲು ತಾವು ಪ್ರಸ್ತಾವನೆಯನ್ನು ಸಮಗ್ರವಾಗಿ ಅಧ್ಯಯನ ಮಾಡಲು ಬಯಸುವುದಾಗಿ’ ಕೃಷ್ಣ ಹೇಳಿದರು.
(ಪಿ.ಟಿ.ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications