Get Updates
Get notified of breaking news, exclusive insights, and must-see stories!

ಮುಂದಿನ ವಾರ ಅಮೆರಿಕಾ ಸೆಕ್ರೆಟರಿ ಆಫ್‌ ಸ್ಟೇಟ್‌ ಪೊವೆಲ್‌ ಭಾರತಕ್ಕೆ

ವಾಷಿಂಗ್ಟನ್‌ : ಆಫ್ಘಾನಿಸ್ತಾನದ ಮೇಲೆ ಭಾನುವಾರ ಪ್ರಾರಂಭವಾಗಿರುವ ದಾಳಿಗೆ ಸಂಪೂರ್ಣ ಬೆಂಬಲ ಪಡೆಯುವ ಸಲುವಾಗಿ ಅಮೆರಿಕಾ ಕಾರ್ಯದರ್ಶಿ (ಸೆಕ್ರೆಟರಿ ಆಫ್‌ ಸ್ಟೇಟ್‌) ಕೊಲಿನ್‌ ಪೊವೆಲ್‌ ಮುಂದಿನ ವಾರ ಭಾರತ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.

ಇಲಾಖಾ ಕಚೇರಿ ಮೂಲಗಳು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಪ್ರಯಾಣದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಅಕ್ಟೋಬರ್‌ 17 ಹಾಗೂ 18ರಂದು ಶಾಂಘೖನಲ್ಲಿ ನಡೆಯಲಿರುವ ಏಷ್ಯಾ- ಪೆಸಿಫಿಕ್‌ ಆರ್ಥಿಕ ಸಹಕಾರಿ ಸಂಘದ ವಿದೇಶಾಂಗ ಸಚಿವರ ಸಭೆಗೆ ಮುನ್ನ ಪೊವೆಲ್‌ ಭಾರತ ಹಾಗೂ ಪಾಕ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಯಾಕೆಂದರೆ ಆ ಸಭೆಯಲ್ಲಿ ಪೊವೆಲ್‌ ಹಾಜರಿ ಖಾತರಿಯಾಗಿದೆ.

ಜೈಷ್‌-ಇ-ಮೊಹಮ್ಮದ್‌ಗೂ ಗುರಿ : ಆಫ್ಘಾನಿಸ್ತಾನದ ಮೇಲೆ ದಾಳಿ ಘೋಷಿಸುವ ಮುನ್ನ ಅಮೆರಿಕಾ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಭಾರತದ ಪ್ರಧಾನಿ ಎ.ಬಿ.ವಾಜಪೇಯಿ ಅವರ ಜೊತೆ 15 ನಿಮಿಷಗಳ ಮಾತುಕತೆ ನಡೆಸಿದರು. ಅಮೆರಿಕಾ ಗುರಿಯಿಟ್ಟಿರುವ ಉಗ್ರರಲ್ಲಿ ಜೈಷ್‌-ಇ-ಮೊಹಮ್ಮದ್‌ ಕೂಡ ಒಬ್ಬ ಎಂದು ಬುಷ್‌, ವಾಜಪೇಯಿ ಅವರಿಗೆ ತಿಳಿಸಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+