Get Updates
Get notified of breaking news, exclusive insights, and must-see stories!

ಆಪ್ಘಾನಿಸ್ತಾನ ತೊಂದರೆಗೆ ಸಿಲುಕಿದೆ, ನಾನೇನೂ ಮಾಡುವಂತಿಲ್ಲ-ಮುಷರ್ರಫ್‌

ಇಸ್ಲಾಮಾಬಾದ್‌: ಜಾಗತಿಕ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ಬೆಂಬಲ ನೀಡುತ್ತಿದೆಯೇ ಹೊರತು, ಆಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನಕ್ಕೆ ಯಾವುದೇ ದ್ವೇಷ ಭಾವನೆಯಿಲ್ಲ ಎಂದು ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಷರ್ರಫ್‌ ಪುನರುಚ್ಚರಿಸಿದ್ದಾರೆ.

ಸೋಮವಾರ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸೆಪ್ಟೆಂಬರ್‌ 11ರ ನ್ಯೂಯಾರ್ಕ್‌ ದುರಂತವನ್ನು ಪಾಕಿಸ್ತಾನ ಖಂಡಿಸುತ್ತದೆ ಮಾತ್ರವಲ್ಲ , ಜಾಗತಿಕ ಭಯೋತ್ಪಾದನೆಯನ್ನು ಪಾಕಿಸ್ತಾನ ಯಾವತ್ತೂ ಬೆಂಬಲಿಸುವುದಿಲ್ಲ . ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಪಾಕಿಸ್ತಾನದ ಬೆಂಬಲವನ್ನು ಜಗತ್ತಿನ ಇತರ ರಾಷ್ಟ್ರಗಳು ಪ್ರಶಂಸಿವೆ ಎಂದರು.

ಭಯೋತ್ಪಾದನೆ ವಿರುದ್ಧದ ಸಮರದಿಂದಾಗಿ ಅಫ್ಘಾನಿಸ್ತಾನಕ್ಕೆ ನಷ್ಟವಾಗುತ್ತಿರುವುದು ಸತ್ಯ. ಆದರೆ ಈ ದುರಂತವನ್ನು ತಪ್ಪಿಸಲು ಪ್ರತಿನಿಧಿಗಳ ತಂಡವೊಂದನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ ಸಂಧಾನದ ಪ್ರಯತ್ನವನ್ನು ಪಾಕಿಸ್ತಾನ ತನ್ನ ಕೈಲಾದಷ್ಟು ಮಾಡಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮುಷರ್ರಫ್‌ ವಿಷಾದಿಸಿದರು.

ಪಾಕಿಸ್ತಾನಕ್ಕೆ ತನ್ನ ಜವಾಬ್ದಾರಿಯ ಅರಿವಿದೆ, ಭಾರತ ಸುಮ್ಮನಿರಲಿ

ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನದ ಮೇಲೆ ಯಾವ ಆರೋಪಗಳನ್ನೂ ಮಾಡುವುದು ಸರಿಯಲ್ಲ ಎಂದ ಮುಷರ್ರಫ್‌, ಈ ಸಮಯವನ್ನು ಭಾರತ ದುರುಪಯೋಗ ಪಡಿಸಿಕೊಳ್ಳಬಾರದು ಎಂದರು. ಪಾಕಿಸ್ತಾನಕ್ಕೆ ತನ್ನ ಜವಾಬ್ದಾರಿಯ ಅರಿವಿದೆ ಎಂದು ಅವರು ಹೇಳಿದರು.

ಯುದ್ಧ ಸಮಯದಲ್ಲಿ ಪಾಕಿಸ್ತಾನದ ಯೋಜನೆಗಳ ಬಗೆಗೆ ಮುಷರ್ರಫ್‌ ವಿವರಿಸಿ, ಈ ನಿಟ್ಟಿನಲ್ಲಿ ಪಾಕಿಸ್ತಾನದ ಜನತೆಯ ಬೆಂಬಲವನ್ನು ಕೋರಿದರು.

ಮುಷರ್ರಫ್‌ ಮಾತಿನ ನಾಲ್ಕಂಶಗಳು-

  • ಪ್ರಸ್ತುತ ನಡೆಯುತ್ತಿರುವ ದಾಳಿ ಅಫ್ಘಾನಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆಯೇ ಹೊರತು ಅಲ್ಲಿನ ಪ್ರಮುಖ ಪಟ್ಟಣಗಳ ಮೇಲಲ್ಲ. ಭಯೋತ್ಪಾದಕರ ನೆಲೆಯನ್ನು ನಾಶ ಮಾಡುವ ಉದ್ದೇಶವನ್ನಿಟ್ಟುಕೊಂಡೇ ಕಾಂದಹಾರ್‌, ಕಾಬೂಲ್‌ ಮತ್ತು ಜಲಾಲಬಾದ್‌ ಮೇಲೆ ಬಾಂಬ್‌ ದಾಳಿ ನಡೆಸಲಾಗುತ್ತಿದೆ. ಇದು ಭಯೋತ್ಪಾದನೆಯ ವಿರುದ್ಧದ ಸಮರವೇ ಹೊರತು ಆಫ್ಘಾನಿಸ್ತಾನದ ಮೇಲಿನ ಯುದ್ಧವಲ್ಲ.
  • ಆಫ್ಘಾನಿಸ್ತಾನದ ಆಂತರಿಕ ಸ್ಥಿತಿಗಳ ಬಗ್ಗೆ ಪಾಕಿಸ್ತಾನಕ್ಕೆ ಅರಿವಿದೆ. ಆದ್ದರಿಂದ ಯುದ್ಧಾನಂತರ ಅಫ್ಘಾನ್‌ನ ಶಾಂತಿ ಮತ್ತು ಸಾರ್ವಭೌಮತ್ವ ಕಾಪಾಡಲು ಪಾಕಿಸ್ತಾನ ಎಲ್ಲ ರೀತಿಯ ನೆರವು ನೀಡಲು ತಯಾರಾಗಿದೆ. ಆದರೆ ಪ್ರಸ್ತುತ ಯುದ್ಧ ಪರಿಕರಗಳನ್ನಾಗಲೀ, ಬಾಂಬ್‌ ದಾಳಿಗಳಿಗಾಗಲೀ ನೆರವು ನೀಡುವಷ್ಟು ಸಂಪನ್ಮೂಲ ಪಾಕಿಸ್ತಾನದ ಬಳಿ ಇಲ್ಲ.
  • ಯುದ್ಧ ನಡೆಯುತ್ತಿದ್ದರೂ ಅಫ್ಘಾನಿಸ್ತಾನಕ್ಕೆ ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಗಿದೆ.
  • ಯುದ್ಧ ಭಯದಿಂದ ಅಫ್ಘಾನ್‌ ಬಿಟ್ಟು ಪಾಕಿಗೆ ಬಂದ ಅನೇಕ ನಿರಾಶ್ರಿತರ ಪುನರ್ವಸತಿ ಕಾರ್ಯ ಆದಷ್ಟು ಶೀಘ್ರದಲ್ಲಿ ಅಫ್ಘಾನ್‌ನಲ್ಲಿ ನಡೆಯಬೇಕಾಗಿದೆ. ಈ ಬಗ್ಗೆ ತಾವು ಈಗಾಗಲೇ ಜಗತ್ತಿನ ಇತರ ರಾಷ್ಟ್ರ ನಾಯಕರ ಬಳಿ ಮಾತುಕತೆ ನಡೆಸಿದ್ದು, ಬ್ರಿಟನ್‌ನ ಟೋನಿ ಬ್ಲೇರ್‌ ಮತ್ತು ಅಮೆರಿಕಾದ ಅಧ್ಯಕ್ಷ ಬುಷ್‌ ಬಳಿಯೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.
(ಇನ್ಫೋ ವಾರ್ತೆ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+