Get Updates
Get notified of breaking news, exclusive insights, and must-see stories!

ಕಾಶ್ಮೀರ ಭಯೋತ್ಪಾದಕತೆ ಕುರಿತು ಭಾರತಕ್ಕೆ ಮುಷರ್ರಫ್‌ ಪಾಠ!

ಇಸ್ಲಮಾಬಾದ್‌ : ಕಾಶ್ಮೀರದಲ್ಲಿ ನಡೆಯುತ್ತಿರುವುದು ಸ್ವಾತಂತ್ರ್ಯ ಹೋರಾಟವೇ ಹೊರತು ಭಯೋತ್ಪಾದಕತೆಯಲ್ಲ ಎಂದು ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್‌ ಪರ್ವೇಜ್‌ ಮುಷರ್ರಫ್‌ ಸ್ಪಷ್ಟ ಮಾತುಗಳಲ್ಲಿ ನವದೆಹಲಿಗೆ ತಿಳಿಸಿದ್ದಾರೆ.

ಭಾರತ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಷರ್ರಫ್‌ ಹೇಳಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುವ ನೆಲೆಗಳಿವೆ ಎನ್ನುವ ಭಾರತದ ಆರೋಪದ ಬಗ್ಗೆ ಮುಗುಮ್ಮಾಗಿ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನಕ್ಕೆ ತನ್ನ ಗಡಿಗಳನ್ನು ರಕ್ಷಿಸುವುದು ಗೊತ್ತಿದೆ ಎಂದರು.

ಪ್ಯಾಲೈಸ್ಟೈನ್‌ ಹಾಗೂ ಕಾಶ್ಮೀರ ಸಮಸ್ಯೆಗಳಿಗೆ ತಾಳೆ ಹಾಕುವ ಪ್ರಯತ್ನಗಳನ್ನು ಖಂಡಿಸಿದ ಅವರು, ಆಪ್ಘಾನಿಸ್ತಾನ ಹಾಗೂ ಕಾಶ್ಮೀರದಲ್ಲಿನ ಘಟನೆಗಳಿಗೆ ಪರಸ್ಪರ ಸಂಪರ್ಕ ಇರುವುದನ್ನು ನಿರಾಕರಿಸಿದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+