ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ: ಇಸ್ಲಾಂ ವಿರೋಧಿ ಅಮೆರಿಕಾಗೆ ಧಿಕ್ಕಾರ, ಜಿಹಾದ್‌ಗೆ ಜೈ

By Staff
|
Google Oneindia Kannada News

ಇಸ್ಲಮಾಬಾದ್‌ : ಪಾಕಿಸ್ತಾನದ ಪ್ರಭಾವಿ ಮುಸ್ಲಿ ಂ ಧಾರ್ಮಿಕ ನಾಯಕರು ಆಪ್ಘಾನಿಸ್ತಾನದ ವಿರುದ್ಧ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಆರಂಭಿಸಿರುವ ವೈಮಾನಿಕ ದಾಳಿಗೆ ತೀವ್ರ ವಿರೋಧ ಸೂಚಿಸಿದ್ದು , ಈ ದಾಳಿ ಇಸ್ಲಾಂ ವಿರೋಧಿಯಾದುದು ಎಂದು ಬಣ್ಣಿಸಿದ್ದಾರೆ. ಅಮೆರಿಕಾದ ವಿರೋಧ ವಿಶ್ವದ ವಿವಿಧೆಡೆ ವಾಸಿಸಿರುವ ಮುಸಲ್ಮಾನರೆಲ್ಲ ಒಟ್ಟುಗೂಡಬೇಕೆಂದು ವಿವಿಧ ಸಂಘಟನೆಗಳ ಧಾರ್ಮಿಕ ನಾಯಕರು ಕರೆ ನೀಡಿದ್ದಾರೆ.

ಕೆಲವು ಮುಸ್ಲಿಂ ಸಂಘಟನೆಗಳು ಆಪ್ಘನ್‌ ಸೋದರರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದು , ಜಿಹಾದ್‌ಗೆ ಬೆಂಬಲ ಘೋಷಿಸಿವೆ. ಮೂವತ್ತಕ್ಕೂ ಹೆಚ್ಚು ಧಾರ್ಮಿಕ ಹಾಗೂ ಭಯೋತ್ಪಾದಕ ಸಂಘಟನೆಗಳನ್ನು ಒಳಗೊಂಡಿರುವ ಲಾಹೋರ್‌ನಲ್ಲಿನ ಪ್ರಭಾವಿ ಸಂಸ್ಥೆಯಾದ ಆಪ್ಘನ್‌ ರಕ್ಷಣಾ ಸಮಿತಿ ಜಿಹಾದ್‌ಗೆ ಕರೆ ನೀಡಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ತನ್ನ ಸಹೋದರರನ್ನು ಬೆಂಬಲಿಸಬೇಕಾದುದು ಪ್ರತಿಯಾಬ್ಬ ಮುಸಲ್ಮಾನನ ಕರ್ತವ್ಯ ಎಂದು ಇಸ್ಲಾಂ ಮುಖಂಡ ರಿಯಾಜ್‌ ದುರ್ಹಾನ ಹೇಳಿದ್ದಾರೆ.

ತಾವು ಅಮೆರಿಕಾವನ್ನು ವಿರೋಧಿಸುವುದಾಗಿ ಹಾಗೂ ತಾಲಿಬಾನ್‌ಗೆ ನೈತಿಕ ಹಾಗೂ -ಪ್ರಾ-ಯೋ-ಗಿ-ಕ- ಬೆಂಬಲ ನೀಡು-ವು-ದಾಗಿ ಜಮಾತೆ-ಇ-ಇಸ್ಲಾಮಿಯ ಉಪಾಧ್ಯಕ್ಷ ಮುನಾವರ್‌ ಹಸ್ಸನ್‌ ಪ್ರಕಟಿಸಿದ್ದಾರೆ. ಅಮೆರಿಕವನ್ನು ಬೆಂಬಲಿಸುತ್ತಿರುವ ಮುಷರ್ರಫ್‌ ಅವರ ನಿಲುವನ್ನು ದೇಶದ ಮಿಲಿಟರಿ ಒಪ್ಪುವುದಿಲ್ಲ , ಮುಷರ್ರಫ್‌ ಅವರ ನಿಲುವು ಸೇನಾ ವಿರೋಧಿಯಾದುದು ಎಂದು ಹೇಳಿರುವ ಹಸ್ಸನ್‌, ಸೋಮವಾರ ದೇಶಾದ್ಯಂತ ವಿರೋಧಿ ರ್ಯಾಲಿಗಳಿಗೆ ಕರೆ ನೀಡಿದ್ದಾರೆ. ಮುಜಾಹುದ್ದೀನ್‌ ಸಂಘಟನೆ ಕೂಡ ಜಿಹಾದ್‌ಗೆ ಬೆಂಬಲ ಘೋಷಿಸಿದೆ.

ಪೇಷಾವರದಲ್ಲಿ ಅಮೆರಿಕಾ ವಿರೋಧಿ ಅಲೆ

ತಾಲಿಬಾನ್‌ ಮೇಲಿನ ದಾಳಿಯನ್ನು ವಿರೋಧಿಸಿ, ಪೇಷಾವರದಲ್ಲಿನ ರೋಷತಪ್ತ ಉದ್ರಿಕ್ತರು ಅಮೆರಿಕಾ ವಿರುದ್ಧ ಸೋಮವಾರ ರ್ಯಾಲಿ ನಡೆಸಿದರು. ಅಮೆರಿಕಾವನ್ನು ಭಯೋತ್ಪಾದಕ ಎಂದು ಘೋಷಿಸಿದ ಉದ್ರಿಕ್ತರು, ಒಸಾಮ ಒಸಾಮ ಎಂದು ಲ್ಯಾಡೆನ್‌ಗೆ ಬೆಂಬಲ ಸೂಚಿಸಿದರು.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X