ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಯುದ್ಧ : ರಾಜ್ಯ ಸಾಫ್ಟ್‌ವೇರ್‌ ಉದ್ಯಮದ ಮೇಲೆಪರಿಣಾಮ ಇಲ್ಲ’

By Staff
|
Google Oneindia Kannada News

ಬೆಂಗಳೂರು : ಅಮೆರಿಕ ನೇತೃತ್ವದಲ್ಲಿ ಆಫ್ಘಾನಿಸ್ತಾನದ ಮೇಲೆ ನಡೆಯುತ್ತಿರುವ ಭಯೋತ್ಪಾದನೆ ವಿರುದ್ಧದ ಸಮರದಿಂದ ಕರ್ನಾಟಕದ ಸಾಫ್ಟ್‌ವೇರ್‌ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ತಮಗೂ ಮೊದಲು ಈ ಕಳವಳ ಇತ್ತು, ಆದರೆ, ಕರ್ನಾಟಕದಲ್ಲಿ ಬಹಳಷ್ಟು ನುರಿತ ಸಾಫ್ಟ್‌ವೇರ್‌ ತಜ್ಞರಿದ್ದು, ಕಾರ್ಮಿಕ ವೆಚ್ಚವೂ ಇಲ್ಲಿ ಕಡಿಮೆ ಇದೆ. ಹೀಗಾಗಿ ನಾವು ಅಗತ್ಯ ಪ್ರಮಾಣದಲ್ಲಿ ಸಾಫ್ಟ್‌ವೇರ್‌ ರಫ್ತು ಮಾಡಬಹುದಾಗಿದೆ ಎಂದು ಅವರು ಸಂಜೆ ಪತ್ರಿಕೆಯಾಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಂದರ್ಶನದಲ್ಲಿ ಮುಖ್ಯಮಂತ್ರಿ ಕೃಷ್ಣ ಹೇಳಿದ್ದು:

  • ಒಂದರಿಂದ ನಾಲ್ಕನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮ ಶಿಕ್ಷಣ ಜಾರಿ ಮಾಡುವ ಬಗ್ಗೆ ಹೈಕೋರ್ಟ್‌ನಲ್ಲಿರುವ ಪ್ರಕರಣದಲ್ಲಿ ಆದಷ್ಟು ಬೇಗ ವಾದ ಮಂಡಿಸುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ಸೂಚಿಸಲಾಗುವುದು.
  • ಹುಬ್ಬಳ್ಳಿಯಲ್ಲಿ ನೈಋತ್ಯ ವಲಯ ರೈಲ್ವೆ ಕಚೇರಿ ಪ್ರಾರಂಭಿಸುವುದು ಸೂಕ್ತ.
  • ಕೃಷಿ ವಿ.ವಿ.ಯ ಜಿ.ಕೆ.ವಿಕೆಯಲ್ಲಿ ಜೈವಿಕ ತಂತ್ರಜ್ಞಾನ ಪಾರ್ಕ್‌ ಆರಂಭಿಸುವ ನಿರ್ಧಾರ ಕೈಗೊಂಡಿದ್ದು, ನಾನೆ.
  • ಆನ್‌ಲೈನ್‌ ಲಾಟರಿ ಜಾರಿಗೆ ತರಲು ಸರಕಾರ ಬದ್ಧವಾಗಿದೆ. ಆನ್‌ಲೈನ್‌ ಲಾಟರಿ ವಿರೋಧಿಸುವುದರಲ್ಲಿ ಅರ್ಥವೇ ಇಲ್ಲ. ಆನ್‌ಲೈನ್‌ ಲಾಟರಿ ಬೇಡ ಎನ್ನುವುದಾದರೆ, ಎಂ.ಎಸ್‌.ಐ.ಎಲ್‌. ಲಾಟರಿ ಹಾಗೂ ರೇಸ್‌ ಕೂಡ ಇರಬಾರದು.
  • ಪಶು ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದು.
  • ರಾಜ್ಯದ ರೈತರ ಬದುಕು ಹಸನಾಗಿಸಲು ಮತ್ತು ಪಹಣಿಗಾಗಿ ಅಲೆಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು.
(ಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X