ಒಸಾಮನಿಗೂ ಬಿನ್‌ಲ್ಯಾಡೆನ್ ವಂಶಕ್ಕೂ ಸಂಬಂಧವಿಲ್ಲ-ಒಸಾಮನ ತಮ್ಮ!
ಬೋಸ್ಟನ್ : ಎಲ್ಲಾ ದೊಡ್ಡ ಕುಟುಂಬಗಳಲ್ಲೂ ಯಾರಾದರೊಬ್ಬರು ದುಷ್ಕರ್ಮಿಗಳಿದ್ದೇ ಇರುತ್ತಾರೆ. ಹಾಗಂತ ಅವರು ಮಾಡುವ ತಪ್ಪಿಗೆ ಇಡೀ ವಂಶದ ಹೆಸರಿಗೇ ಮಸಿ ಹಚ್ಚುವುದು ಸರಿಯಲ್ಲ. ಒಸಾಮ ಬಿನ್ ಲ್ಯಾಡೆನ್ ಅಮೆರಿಕಾದ ಅವಳಿ ಕಟ್ಟಡ ಹಾಗೂ ಸೇನಾ ಸಮುಚ್ಚಯ ಉರುಳಿಸಿದ್ದಾನೆ ಎಂಬ ಗುಮಾನಿಯಿದೆ. ಈ ಕಾರಣಕ್ಕಾಗಿ ನಮ್ಮ ವಂಶದ ಹೆಸರನ್ನು ಹೈಜಾಕ್ ಮಾಡಿರುವುದು ಸರಿಯೇ ಎಂದು ಗಂಭೀರವಾಗಿ ಪ್ರಶ್ನಿಸುತ್ತಾರೆ ಅಬ್ದುಲ್ಲಾ ಮೊಹಮ್ಮದ್ ಬಿನ್ ಲ್ಯಾಡೆನ್. ಬದುಕುಳಿದಿರುವ ಒಸಾಮನ 50 ಸಂಬಂಧಿಗಳಲ್ಲಿ ಅಬ್ದುಲ್ಲಾ ಕಿರಿಯವ. ಒಸಾಮನ ಸೋದರ.
ಮೂವತ್ತೆೈದರ ಹರೆಯದ ಅಬ್ದುಲ್ಲಾ ಕಳೆದೊಂದು ದಶಕ ಕಳೆದಿರುವುದು ಬೋಸ್ಟನ್‌ನಲ್ಲಿ. ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಡಾಕ್ಟೊರೇಟ್ ಪದವಿಗಳನ್ನೂ ಬುಟ್ಟಿಗೆ ಹಾಕಿಕೊಂಡಿರುವ ಈತ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಚಂಡ ಬುದ್ಧಿವಂತ! ಒಸಾಮ, ಕುಟುಂಬದ ಕೊಂಡಿ ಕಳಚಿಕೊಂಡು ವರ್ಷಗಳೇ ಉರುಳಿವೆ. ಆದರೆ ಆತ ಮಾಡಿರುವ, ಮಾಡುತ್ತಿರುವ ಪಾಪಗಳ ಹೇಳಲು ಬಳಸುತ್ತಿರುವ ಹೆಸರು ‘ಬಿನ್ ಲ್ಯಾಡೆನ್’. ಒಸಾಮ ಇಲ್ಲದ ಈ ‘ಬಿನ್ ಲ್ಯಾಡೆನ್’ ತಮ್ಮ ವಂಶದ ಹೆಸರು ಎಂದು ಅಬ್ದುಲ್ಲಾ ವಿಷಾದದಿಂದ ಹೇಳುತ್ತಾರೆ.
ಸುದ್ದಿಸಂಸ್ಥೆಯಾಂದಕ್ಕೆ ಅಬ್ದುಲ್ಲಾ ಕೊಟ್ಟಿರುವ ಹೇಳಿಕೆಯ ಸಾರ ಹೀಗಿದೆ...
- ನಾನು ಕೊನೆ ಬಾರಿ ಒಸಾಮನನ್ನು ನೋಡಿದ್ದು 1988ರಲ್ಲಿ.
- ಕಟ್ಟಡ ಕಟ್ಟುವ ಕೆಲಸ ಮಾಡುತ್ತಿದ್ದ ನಮ್ಮದು 5 ಬಿಲಿಯನ್ ಡಾಲರ್ ಆಸ್ತಿ. ಒಸಾಮ ಇದಕ್ಕೆ ಆಗಲೇ ಗುಡ್ ಬೈ ಹೇಳಿದ್ದ.
- ಒಸಾಮ ತನ್ನ ಜೀವಿತದ ಬಹು ಕಾಲ ಕಳೆದಿರುವುದು ಆಫ್ಘಾನಿಸ್ತಾನದಲ್ಲೇ .
- 1990 ಇರಬಹುದು. ನನಗೆ ವ್ಯಕ್ತಿಶಃ ಒಸಾಮ ಸರಿಯಾಗಿ ಗೊತ್ತಿರಲಿಲ್ಲ. ಮನೆಯವರು ಇರಾದೆ ಬದಲಾಯಿಸಿಕೊಳ್ಳುವಂತೆ ಅವನನ್ನು ಪದೇ ಪದೇ ಒತ್ತಾಯಿಸಿದ್ದರು. ಯಾರ ಮಾತೂ ಒಸಾಮ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಪರಿಣಾಮ ಅವನು ಕುಟುಂಬದ ವಹಿವಾಟಿಗೆ ಪರಕೀಯನಾದ.
- ಬೋಸ್ಟನ್ ಜೊತೆ ಬಿನ್ ಲ್ಯಾಡೆನ್ ಕುಟುಂಬ ಸಂಪರ್ಕ ಬೆಳೆಸಿದ್ದು 1970ರ ದಶಕದಲ್ಲಿ. ಆಗ ನನ್ನ ಒಬ್ಬ ಹಿರಿಯಣ್ಣ ಸಿವಿಲ್ ಎಂಜಿನಿಯರಿಂಗ್ ಓದಲು ಇಲ್ಲಿಗೆ ಬಂದರು. ನಂತರ 1980ರ ದಶಕದ ಕೊನೆಯಲ್ಲಿ ನಾರ್ದ್‌ಈಸ್ಟನ್ ವಿಶ್ವವಿದ್ಯಾಲಯದಲ್ಲಿ ಓದಲು ಇನ್ನೊಬ್ಬ ಅಣ್ಣ ಬಂದರು.
- ಕೇಂಬ್ರಿಜ್ ವಿಶ್ವವಿದ್ಯಾಲಯ ನನಗೆ ಮನೆಯಂತೆಯೇ ಆಗಿದೆ. ಆದರೆ ಸೆಪ್ಟೆಂಬರ್ 11ರ ಅಮೆರಿಕಾ ದಾಳಿಯ ನಂತರ ನನಗೆ ಎಲ್ಲವೂ ಬಂದ್. ಹಾಯ್ ಬಾಯ್ ಅನ್ನುತ್ತಿದ್ದವರಿಗೆಲ್ಲಾ ಈಗ ನಾನು ಅಪರಿಚಿತನಂತೆ ಆಗಿಬಿಟ್ಟಿದ್ದೇನೆ. ಕ್ರೆಡಿಟ್ ಕಾರ್ಡ್ ಕೂಡ ಬಳಸುವಂತಿಲ್ಲ.
ಬಿನ್ ಲ್ಯಾಡೆನ್ ಮನೆತನ ಹಾರ್ವರ್ಡ್ ಹಾಗೂ ಟಫ್ಟ್ಸ್ ವಿಶ್ವವಿದ್ಯಾಲಯಗಳಿಗೆ ಸಾಕಷ್ಟು ದೇಣಿಗೆ ಕೊಟ್ಟಿದೆ. ಆಕ್ಸ್‌ಫರ್ಡ್ ಸೆಂಟರ್ ಫಾರ್ ಇಸ್ಲಾಮಿಕ್ ಸ್ಟಡೀಸ್‌ನಲ್ಲಿ ಫೆಲೋಷಿಪ್ ಕೂಡ ಕೊಡುತ್ತಿದೆ. ಮಿಡ್ಲ್ ಈಸ್ಟ್ ಪಾಲಿಸಿ ಕೌನ್ಸಿಲ್‌ಗೆ ಪ್ರತಿವರ್ಷ ಸಾವಿರಾರು ಡಾಲರ್ ಧನ ಸಹಾಯ ಮಾಡುತ್ತಿದೆ.
ದಾಳಿಗೆ ತುತ್ತಾದ ಸಹಸ್ರಾರು ಜನರಿಗೆ ನಮ್ಮ ಬಿನ್ ಲ್ಯಾಡೆನ್ ವಂಶದ ಸಾಂತ್ವನವಿದೆ. ಬಿನ್ ಲ್ಯಾಡೆನ್ ಕುಟುಂಬ ಹಾಗೂ ಸೌದಿ ಬಿನ್ ಲ್ಯಾಡೆನ್ ಸಮೂಹಕ್ಕೂ ಒಸಾಮ ಅಥವಾ ಆತನ ಯಾವುದೇ ಸಹಚರರಿಗೂ ಯಾವುದೇ ಸಂಪರ್ಕ ಇಲ್ಲ. ಒಸಾಮನ ಹುಚ್ಚಾಟಗಳಿಗೆ ಕುಟುಂಬ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ. ಹಣವನ್ನೂ ಕೊಡುತ್ತಿಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಹೇಳುವ ಅಬ್ದುಲ್ಲಾ ದೃಷ್ಟಿಯಲ್ಲಿ ಒಸಾಮ ಯಃಕಶ್ಚಿತ್ ‘ಬ್ಲ್ಯಾಕ್‌ಶೀಪ್’ ಅಷ್ಟೆ !
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications