ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಕಾರ್ಯ ಮುಕ್ತಾಯ ; 250 ಭಾರತೀಯರು ಇನ್ನೂ ನಾಪತ್ತೆ

By Staff
|
Google Oneindia Kannada News

ನ್ಯೂಯಾರ್ಕ್‌: 250 ಮಂದಿ ಭಾರತೀಯರು ಸೇರಿ 4979 ಮಂದಿ ಇನ್ನೂ ನಾಪತ್ತೆಯಾಗಿರುವಾಗಲೇ, ಸೆಪ್ಟಂಬರ್‌ 11 ರಂದು ಭಯೋತ್ಪಾದಕರ ದಾಳಿಗೆ ತುತ್ತಾದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ರಕ್ಷಣಾ ಕಾರ್ಯಗಳನ್ನು ಕೊನೆಗೊಳಿಸಿರುವುದಾಗಿ ಫೆಡರಲ್‌ ಪ್ರಾಧಿಕಾರಗಳು ಘೋಷಿಸಿವೆ.

ಈವರೆಗೂ 393 ದೇಹಗಳನ್ನು ಅವಶೇಷಗಳಡಿಯಿಂದ ತೆಗೆಯಲಾಗಿದ್ದು , ಅವುಗಳಲ್ಲಿ 335 ದೇಹಗಳನ್ನು ಗುರುತು ಹಿಡಿಯಲಾಗಿದೆ. ಅವಶೇಷಗಳಡಿ ಯಾರೂ ಜೀವಂತವಾಗುಳಿದಿರುವ ಸಾಧ್ಯತೆಗಳಿಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ, ನಾಪತ್ತೆಯಾಗಿರುವವರ ಸಂಬಂಧಿಕರು ಮಾತ್ರ ಅಧಿಕಾರಿಗಳನ್ನು ಪೀಡಿಸುತ್ತಲೇ ಇದ್ದಾರೆ. ಪ್ರಸ್ತುತ ಪರ್ವತದೋಪಾದಿ ರಾಶಿ ಬಿದ್ದಿರುವ ಮಿಲಿಯನ್‌ ಟನ್‌ಗಟ್ಟಲೆ ಅವಶೇಷಗಳನ್ನು ಸ್ಥಳಾಂತರಿಸುವ ಕೆಲಸದಲ್ಲಿ ಸ್ಥಳೀಯ ಪ್ರಾಧಿಕಾರಗಳು ತೊಡಗಿಕೊಂಡಿವೆ. ಅವಶೇಷಗಳನ್ನು ಸಾಗಿಸುವ ಕಾರ್ಯ ಒಂದು ವರ್ಷ ಹಿಡಿಯಬಹುದೆಂದು ಅಂದಾಜು ಮಾಡಲಾಗಿದೆ.

ಪರಿಹಾರ ಕಾಮಗಾರಿ ಮುಕ್ತಾಯವಾಗಿರುವುದಾಗಿ ಫೆಡರಲ್‌ ಪ್ರಾಧಿಕಾರಗಳು ಪ್ರಕಟಿಸಿದ್ದರೂ, ಅಗ್ನಿಶಾಮಕ ದಳ ಹಾಗೂ ಪೊಲೀಸರ ನೆರವಿನಿಂದ ರಕ್ಷಣಾ ಕಾರ್ಯಗಳು ಮುಂದುವರಿಯುವುದಾಗಿ ನ್ಯೂಯಾರ್ಕ್‌ ಮೇಯರ್‌ ರುಡಿ ಗಿಯುಲಿಯಾನಿ ತಿಳಿಸಿದ್ದಾರೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X