Get Updates
Get notified of breaking news, exclusive insights, and must-see stories!

ಪಾಕ್‌ ವಾಯು ನೆಲೆಯಲ್ಲಿ ಗಸ್ತು ತಿರುಗುತ್ತಿವೆ ಅಮೆರಿಕ ವಿಮಾನಗಳು

ಇಸ್ಲಾಮಾಬಾದ್‌ : ಅಮೆರಿಕದ ಎಫ್‌-18 ಫೈಟರ್‌ ಏರ್‌ಕ್ರಾಫ್ಟ್‌ ಗಳು ಪಾಕಿಸ್ತಾನದ ವಾಯು ನೆಲೆಯಲ್ಲಿ ದಾಳಿಯ ಸಲುವಾಗಿ ಹಾರಾಟದಲ್ಲಿ ತೊಡಗಿವೆ ಎಂದು ಪಾಕಿಸ್ತಾನ್‌ ಅಬ್ಸರ್‌ವರ್‌ ವರದಿಗಳು ಹೇಳಿವೆ. ಪಾಕಿಸ್ತಾನ ಒದಗಿಸಿರುವ ವಾಯು ನೆಲೆಯಲ್ಲಿ ಅ.4ರಿಂದಲೇ ಅಮೆರಿಕ ಜೆಟ್‌ ವಿಮಾನಗಳು ಯುದ್ಧ ತಾಲೀಮಿನಲ್ಲಿ ತೊಡಗಿವೆ.

ಅಮೆರಿಕದ ವಿಮಾನಗಳು ಪಾಕಿಸ್ತಾನದ ವಾಯು ನೆಲೆಯನ್ನು ಬಳಸಿಕೊಳ್ಳುತ್ತಿರುವುದರಿಂದ ಪಾಕ್‌ ವಾಯುಪಡೆಯಲ್ಲಿ ಆಂತಕ ಮನೆ ಮಾಡಿದೆ. ಶುಕ್ರವಾರ ಕೂಡ ತನಗೆ ನೀಡಲಾಗಿರುವ ವಾಯು ಪ್ರದೇಶದಲ್ಲಿ ಅಮೆರಿಕ ವಿಮಾನಗಳು ಗಸ್ತು ತಿರುಗಿದವು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಆಫ್ಘನ್‌ ಗಡಿ ಪ್ರದೇಶವಾದ ಪೇಶಾವರ್‌ ಸುತ್ತ ವಿಮಾನಗಳು ಸುತ್ತುತ್ತಿವೆ. ಆದರೆ, ಈ ವಿಮಾನಗಳು ಆಫ್ಘನ್‌ ವಿರುದ್ಧದ ದಾಳಿಗೆ ತೆರಳಿದ್ದವೆ ಅಥವಾ ಗಸ್ತಿನಲ್ಲಿ ತೊಡಗಿದ್ದವೆ ಎಂಬುದನ್ನು ವರದಿ ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಪಾಕ್‌ ಸೇನಾಧಿಕಾರಿಗಳೂ ತತ್‌ಕ್ಷಣದಲ್ಲಿ ಲಭ್ಯವಾಗಿಲ್ಲ.

ಈ ಮಧ್ಯೆ ಅಮೆರಿಕದ ವಾಯುಪಡೆಯ ನೇತೃತ್ವ ವಹಿಸಿರುವ ಪ್ರಾಧಿಕಾರಕ್ಕೆ ಪಾಕಿಸ್ತಾನವು ವೈಮಾನಿಕ ಹಾರಟ ನಡೆಸದಂತೆ ನಿಷೇಧಿಸಿರುವ ಸ್ಥಳಗಳ ಬಗ್ಗೆ ಸೂಚನೆ ನೀಡಿದ್ದು, ಮೂರು ವಾಯುನೆಲೆಗಳನ್ನು ಒದಗಿಸಿದೆ. ಜಕೋಬಾಬಾದ್‌ನ ಷೇಬಾಜ್‌, ಕ್ವೆಟ್ಟಾದ ಸುಮುಂಗ್ಲಿ, ಉತ್ತರ ಭಾಗದ ಸ್ಕರ್ದು ವಾಯು ನೆಲೆ ಬಳಸಿಕೊಳ್ಳುವಂತೆ ಅಮೆರಿಕ ಪ್ರಾಧಿಕಾರಕ್ಕೆ ತಿಳಿಸಲಾಗಿದೆ ಎಂದೂ ಪತ್ರಿಕೆ ಹೇಳಿದೆ.

ಅಗತ್ಯ ಬಿದ್ದಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಈ ನೆಲೆಗಳಲ್ಲಿ ಹಾರಾಟ ನಡೆಸಲು, ಇಂಧನ ತುಂಬಿಸಿಕೊಳ್ಳಲು ಮತ್ತು ಇಳಿಯಲು ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ. ತೀವ್ರ ನಿಗಾ ಪಡೆ, ರೆಡಾರ್‌ ಜೋಡಣೆಯ ಸಿದ್ಧತೆಗಳೂ ನಡೆದಿವೆ.

  • ಈ ಮಧ್ಯೆ ಭಾರತ ಪ್ರಾಯೋಜಿತ ಮತ್ತು ಇತರೆ ಸಾಧನಗಳ ಮೂಲಕ ಭಯೋತ್ಪಾದನೆ ಹತ್ತಿಕ್ಕಲು ತನ್ನ ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ ಅವರು ಮನವಿ ಮಾಡಿದ್ದಾರೆ.
  • ಅಮೆರಿಕದ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಅವರು ಆಫ್ಘಾನಿಸ್ತಾನಕ್ಕೆ ಕಡೆಯ ಎಚ್ಚರಿಕೆ ನೀಡಿದ್ದು, ಕಾಲ ಮೀರುತ್ತಿದೆ. ಲಾಡೆನನ್ನು ಒಪ್ಪಿಸಿ ಇಲ್ಲ ಯುದ್ಧಕ್ಕೆ ಸಿದ್ಧರಾಗಿ ಎಂದು ತಾಲಿಬಾನ್‌ಗೆ ಹೇಳಿದ್ದಾರೆ.
  • ರೇಡಿಯೋದಲ್ಲಿ ಮಾಡಿದ ಪ್ರಸಾರ ಭಾಷಣದಲ್ಲಿ ಬುಷ್‌ ಅವರು ತಮ್ಮ ಹೋರಾಟ ತಾಲಿಬಾನ್‌ ಹಾಗೂ ತಾಲಿಬಾನ್‌ನಿಂದ ಆಶ್ರಯಪಡೆದಿರುವ ಶಂಕಿತ ಭಯೋತ್ಪಾದಕರ ವಿರುದ್ಧವೇ ವಿನಾ ಆಫ್ಘನ್‌ ನಾಗರಿಕರ ವಿರುದ್ಧ ಅಲ್ಲ ಎಂದು ತಮ್ಮ ಮಿತ್ರರಾಷ್ಟ್ರಗಳಿಗೆ ಹಾಗೂ ಸಾಗರೋತ್ತರ ಶತ್ರುಗಳಿಗೆ ತಿಳಿಸಿದ್ದಾರೆ.
  • ನಾವು ಆಫ್ಘನ್‌ ಜನತೆಗೆ ಸ್ನೇಹ ಹಾಗೂ ನೆರವಿನ ಹಸ್ತಚಾಚಿದ್ದೇವೆ ಎಂದೂ ಬುಷ್‌ ಹೇಳಿದ್ದಾರೆ.
  • ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಜಾಗತಿಕ ಸಮರದಲ್ಲಿ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಗಡಿಯಾಚೆಯ ಭಯೋತ್ಪಾನೆಯನ್ನೂ ಸೇರಿಸಿಕೊಳ್ಳುವಂತೆ ಪ್ರಧಾನಿ ವಾಜಪೇಯಿ ಒತ್ತಾಯಿಸಿದ್ದಾರೆ.
  • ಸೆ.11ರ ಘಟನಾವಳಿಗಳ ಹಿನ್ನೆಲೆಯಲ್ಲಿ ತಾಲಿಬಾನ್‌ ಆಶ್ರಯಿತ ಭಯೋತ್ಪಾದಕರನ್ನು ಹತ್ತಿಕ್ಕುವುದು ಸಂಘಟಿತ ಭಯೋತ್ಪಾದನೆ ವಿರುದ್ಧದ ಸಮರದ ಮೊದಲ ಆದ್ಯತೆ ಆಗಿದೆ ಎಂದು ಬ್ಲೇರ್‌ ಹೇಳಿದ್ದಾರೆ.
  • ತಮ್ಮ ಹಾಗೂ ಬ್ಲೇರ್‌ ಅವರೊಂದಿಗಿನ ಮಾತುಕತೆ ಫಲಪ್ರದವಾಗಿದೆ ಎಂದೂ ವಾಜಪೇಯಿ ಹೇಳಿದ್ದಾರೆ.
  • ಜಮ್ಮು-ಕಾಶ್ಮೀರ ಗಡಿಯಲ್ಲಿ ವಿಧ್ವಂಸಕ ಕೃತ್ಯ ಹತ್ತಿಕ್ಕಲು ಕಟ್ಟೆಚ್ಚರದಿಂದಿರುವಂತೆ ಭಾರತದ ಸೇನಾಪಡೆಗಳಿಗೆ ಸೂಚಿಸಲಾಗಿದೆ.
  • ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುವಂತೆ ವಾಜಪೇಯಿ ಅವರು ನೀಡಿದ ಆಹ್ವಾನವನ್ನು ಬ್ಲೇರ್‌ ಒಪ್ಪಿಕೊಂಡಿದ್ದಾರೆ.
(ಪಿ.ಟಿ.ಐ)

ವಾರ್ತಾಸಂಚಯ
ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+