ಆನ್‌ಲೈನ್ ಲಾಟರಿ ಎಂದರೇನು? ಆಡುವುದು ಹೇಗೆ?
ಬೆಂಗಳೂರು : ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ಆನ್‌ಲೈನ್ ಕಂಪ್ಯೂಟರ್ ಲಾಟರಿಗೆ ಕರ್ನಾಟಕ ಸರಕಾರ ಸಮ್ಮತಿ ನೀಡಿದೆ. ಈ ಆನ್‌ಲೈನ್ ಲಾಟರಿ ಎಂದರೇನು? ಲಾಟರಿ ಆಡುವುದು ಹೇಗೆ?
ಆನ್‌ಲೈನ್ ಲಾಟರಿ ಕಂಪ್ಯೂಟರ್ ಮುಂದೆ ಕುಳಿತು ಆಡುವ ಲಾಟರಿ. ಈ ಲಾಟರಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಯಾವುದಾದರೂ ಕಂಪ್ಯೂಟರ್ ಲಾಟರಿ ಕೇಂದ್ರಕ್ಕೆ ಬಂದು 1ರಿಂದ 49ರ ಒಳಗಿನ ಆರು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಗ್ರಾಹಕ ಬಯಸಿದ ಅಂಕಿಗಳು ಕಂಪ್ಯೂಟರ್ ಜಾಲದ ಮೂಲಕ ಮೂಲ ಕಂಪ್ಯೂಟರ್‌ಗೆ ತಲುಪುತ್ತದೆ. ಮೂಲ ಕಂಪ್ಯೂಟರ್ ಒಪ್ಪಿಗೆ ನೀಡಿದ ನಂತರ ಆ ಅಂಕಿಗಳನ್ನು ಒಳಗೊಂಡ ಲಾಟರಿ ಟಿಕೆಟ್ ಹೊರಗೆ ಬರುತ್ತದೆ ಮತ್ತು ಆ ಟಿಕೆಟ್ ಆ ವ್ಯಕ್ತಿಯ (ಗ್ರಾಹಕನ) ಹೆಸರಿನಲ್ಲಿ ದಾಖಲಾಗುತ್ತದೆ. ನಿರ್ದಿಷ್ಟ ಅವಧಿಯ ನಂತರ ಡ್ರಾ ಮಾಡಲಾಗುತ್ತದೆ. ಲಾಟರಿ ಡ್ರಾ ಮಾಡುವಾಗ ಆ ಅವಧಿಯಲ್ಲಿ ಟಿಕೆಟ್ ಮಾರಾಟದಿಂದ ಸಂಗ್ರಹವಾದ ಮೊತ್ತವನ್ನು ಲಕ್ಷ್ಯದಲ್ಲಿಟ್ಟುಕೊಂಡು ಬಹುಮಾನದ ಮೊತ್ತವನ್ನು ನಿರ್ಧರಿಸಲಾಗುವುದು.
ಆರು ಅಂಕಿಗಳ ಪೈಕಿ ಮೂರು ಅಂಕಿಗಳು ಡ್ರಾನಲ್ಲಿ ಬಂದರೆ, ಅದಕ್ಕೆ ಇಂತಿಷ್ಟು ಮೊತ್ತ ಎಂದು ನಿಗದೆ ಮಾಡಿದರೆ ಮತ್ತು ಆರೂ ಅಂಕಿಗಳು ತಾಳೆಯಾದರೆ ಜಾಕ್‌ಪಾಟ್ ಬಹುಮಾನವೂ ಲಭಿಸುತ್ತದೆ. ಪ್ರತಿ ಟಿಕೆಟ್ ದರ 20 ರುಪಾಯಿಗಳು.
ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಶೇ.1ರಿಂದ 5ರಷ್ಟು ಮಂದಿ ತಮ್ಮ ಆದಾಯದ ಹೆಚ್ಚುವರಿ ಮೊತ್ತವನ್ನು ಲಾಟರಿ ಆಡಲು ವಿನಿಯೋಗಿಸುತ್ತಾರೆ ಎಂದು ರಾಜ್ಯ ಸರಕಾರ ಅಂದಾಜು ಮಾಡಿದೆ. ಇದರಿಂದಾಗಿ 5 ವರ್ಷದ ಅವಧಿಯಲ್ಲಿ ಸರಕಾರದ ಆದಾಯದ ಪಾಲು ಶೇ.21ರಿಂದ 25ರವರೆಗೆ ಹೋಗುವ ನಿರೀಕ್ಷೆ ಇದೆ.
ಆರಂಭದಲ್ಲಿ ರಾಜ್ಯ ಸರಕಾರ ಶೇ.21ರಷ್ಟು ಲಾಭವನ್ನೂ, ಗುತ್ತಿಗೆ ಸಂಸ್ಥೆ ಶೇ.34ರಷ್ಟು ಲಾಭ ಪಡೆಯಲಿದೆ. ಗುತ್ತಿಗೆ ಸಂಸ್ಥೆಯ ಆದಾಯ ಹಂತಹಂತವಾಗಿ ಕಡಿಮೆ ಅಗಿ ಶೇ.25ಕ್ಕೆ ನಿಲ್ಲುತ್ತದೆ. ಅಂತೆಯೇ ರಾಜ್ಯ ಸರಕಾರದ ಲಾಭ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ಶೇ.25ಕ್ಕೆ ಬರುತ್ತದೆ.
(ಇನ್‌ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications