ಆನ್‌ಲೈನ್ ಲಾಟರಿ ಆರಂಭಿಸಲು ಕೃಷ್ಣ ಸರಕಾರದ ಅಸ್ತು
ಬೆಂಗಳೂರು : ದೇಶದಲ್ಲೇ ಪ್ರಪ್ರಥಮ ಬಾರಿಗೆ ಆನ್‌ಲೈನ್ ಲಾಟರಿ ನಡೆಸಲು ಕರ್ನಾಟಕ ರಾಜ್ಯ ಸರಕಾರ ತನ್ನ ಒಪ್ಪಿಗೆ ನೀಡಿದೆ. ಈ ಸಂಬಂಧ ಅಂತರ್ಜಾಲ ನಿರ್ಮಿಸಲು ಮುಂಬೈ ಮೂಲದ ರಿkುೕ ಗುಂಪಿನ ಅಲ್ಟ್ರಾ ಎಂಟರ್‌ಟೈನ್‌ಮೆಂಟ್ ಸಲ್ಯುಷನ್ಸ್ ಪ್ರೆೃ ಲಿಮಿಟೆಡ್‌ಗೆ ಅದು ಅನುಮತಿ ನೀಡಿದೆ. ಶುಕ್ರವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಆನ್‌ಲೈನ್ ಕಂಪ್ಯೂಟರ್ ಲಾಟರಿ ವ್ಯವಸ್ಥೆಯ ಬಗ್ಗೆ ವಿರೋಧ ಪಕ್ಷಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದವು. ಆದಾಗ್ಯೂ ಐದು ವರ್ಷಗಳಲ್ಲಿ ಒಟ್ಟು 1096 ಕೋಟಿ ರುಪಾಯಿ ಆದಾಯ ತಂದುಕೊಡುವ ಈ ವ್ಯವಸ್ಥೆಗೆ ಸರಕಾರ ಅಸ್ತು ಎಂದಿದೆ. ಈ ವಿಷಯವನ್ನು ಸಭೆಯ ಬಳಿಕ ವಾರ್ತಾ ಸಚಿವ ನಾಣಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಆನ್‌ಲೈನ್ ಲಾಟರಿ ವ್ಯವಸ್ಥೆಯಲ್ಲಿ ಅಲ್ಟ್ರಾ ಸಂಸ್ಥೆಯು 537 ಕೋಟಿ ರುಪಾಯಿ ತೊಡಗಿಸುತ್ತಿದೆ. ಸರಕಾರ ಯಾವುದೇ ಹಣ ಹೂಡುತ್ತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ವ್ಯವಸ್ಥೆಯಿಂದಾಗಿ ಮೊದಲ ವರ್ಷ ಸರಕಾರಕ್ಕೆ 100 ಕೋಟಿ ರುಪಾಯಿ, 2ನೇ ವರ್ಷ 140 ಕೋಟಿ, 3ನೇ ವರ್ಷ 190 ಕೋಟಿ ರುಪಾಯಿ, 4ನೇ ವರ್ಷ 275 ಕೋಟಿ ರುಪಾಯಿ ಮತ್ತು 5ನೇ ವರ್ಷ 385 ಕೋಟಿ ರುಪಾಯಿ ಆದಾಯ ದೊರಕಲಿದೆ ಎಂದರು.
ಅಲ್ಟ್ರಾ ಸಂಸ್ಥೆಯು ಮೊದಲ ಹಂತದಲ್ಲಿ 337 ಕೋಟಿ ಆನಂತರ 200 ಕೋಟಿ ಬಂಡವಾಳ ತೊಡಗಿಸುತ್ತಿದೆ. ಕೇವಲ ರಾಜ್ಯದಲ್ಲಷ್ಟೇ ಅಲ್ಲದೆ ಹೊರರಾಜ್ಯದಲ್ಲೂ 10,000 ಕಂಪ್ಯೂಟರ್ ಕೇಂದ್ರ ತೆರೆದು, ಜನರಿಗೆ ಲಾಟರಿ ಆಡಲು ಅದು ಸೌಲಭ್ಯ ಕಲ್ಪಿಸುತ್ತದೆ. ಸರಕಾರ ಕೇವಲ ಲಾಟರಿ ಟಿಕೆಟ್ ಮುದ್ರಿಸಲಿದೆ, ಅದರ ಮೇಲೆ ರಾಜ್ಯ ಹಣಕಾಸು ಕಾರ್ಯದರ್ಶಿಗಳ ಸಹಿ ಇರುತ್ತದೆ ಎಂದು ಶಿವಣ್ಣ ಹೇಳಿದರು.
ಉದ್ಯೋಗ ಸೃಷ್ಟಿ: ಈ ಯೋಜನೆಯಿಂದಾಗಿ 25 ಸಾವಿರ ಉದ್ಯೋಗ ಸೃಷ್ಟಿ ಆಗಲಿದೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಆನ್‌ಲೈನ್ ಲಾಟರಿ ಯೋಜನೆ ಜಾರಿಗೆ ಬರಲಿದೆ. ಇದರ ಜೊತೆಗೆ ಹಾಲಿ ಇರುವ ಲಾಟರಿಯೂ ಮುಂದುವರಿಯುತ್ತದೆ ಎಂದರು.
ಲಾಟರಿಯ ಬಹುಮಾನ ಮೊತ್ತವನ್ನೂ ರಾಜ್ಯವೇ ಕೊಡಲಿದೆ. ಇದಕ್ಕಾಗಿ ರಾಜ್ಯಕ್ಕೆ ಬರುವ ಆದಾಯದಲ್ಲಿ ಶೇಕಡಾ 50ರಷ್ಟನ್ನು ಬಹುಮಾನ ಮೊತ್ತಕ್ಕೆ ತೆಗೆದಿರಿಸಲಾಗುವುದು. ವಾರಕ್ಕೊಮ್ಮೆ ಡ್ರಾ ನಡೆಸಲಾಗುವುದು ಎಂದೂ ಶಿವಣ್ಣ ವಿವರಿಸಿದರು.
(ಇನ್‌ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications