ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.1ರಿಂದ ವಾಸ್ಕೋ ಎಕ್ಸ್‌ಪ್ರೆಸ್‌ ಹಾವೇರಿ, ತಿಪಟೂರಲ್ಲೂ ನಿಲ್ಲುತ್ತದೆ

By Staff
|
Google Oneindia Kannada News

ಬೆಂಗಳೂರು : ಯಶವಂತಪುರ ಹಾಗೂ ವಾಸ್ಕೋ ನಡುವೆ ವಾರಕ್ಕೆರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲುಗಾಡಿ (ಸಂಖ್ಯೆ - 7309 ಮತ್ತು 7310) ನವೆಂಬರ್‌ 1ರಿಂದ ತಿಪಟೂರು ಹಾಗೂ ಹಾವೇರಿ ರೈಲು ನಿಲ್ದಾಣಗಳಲ್ಲೂ ನಿಲ್ಲಲಿದೆ ಎಂದು ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಯಶವಂತಪುರ- ವಾಸ್ಕೋ ನಡುವೆ ಸಂಚರಿಸುವ ರೈಲುಗಾಡಿ ಸಂಖ್ಯೆ 7309 ಸಂಜೆ 6-24ಕ್ಕೆ ತಿಪಟೂರು ಹಾಗೂ ರಾತ್ರಿ 10-49ಕ್ಕೆ ಹಾವೇರಿ ತಲುಪಲಿದೆ. ಅಂತೆಯೇ ವಾಸ್ಕೋದಿಂದ ಯಶವಂತಪುರಕ್ಕೆ ಬರುವ ರೈಲುಗಾಡಿ ಸಂಖ್ಯೆ 7310 ಮುಂಜಾನೆ 3-34ಕ್ಕೆ ಹಾವೇರಿಯನ್ನೂ ಬೆಳಗ್ಗೆ 7-19ಕ್ಕೆ ತಿಪಟೂರನ್ನೂ ತಲುಪಲಿದೆ.

ತಿರುಮಲಕ್ಕೆ ಬಸ್‌ : ಬೆಂಗಳೂರು ದಕ್ಷಿಣ ಭಾಗದ ಜನರ ಅನುಕೂಲಕ್ಕಾಗಿ ಆಂಧ್ರಪ್ರದೇಶ ಪ್ರವಾಸೋದ್ಯಮ ನಿಗಮವು ಜಯನಗರದಿಂದ ಪ್ರತಿದಿನ ಸಾರಿಗೆ ಸೌಲಭ್ಯ ಕಲ್ಪಿಸಿದೆ. ರಾತ್ರಿ 9-30ಕ್ಕೆ ಜಯನಗರದಿಂದ ಹೊರಡುವ ಬಸ್‌ನಲ್ಲಿ ಪ್ರಯಾಣದರ ವಯಸ್ಕರಿಗೆ 900 ಮತ್ತು ಮಕ್ಕಳಿಗೆ 480.

ಜಯನಗರದಿಂದ ತಿರುಮಲಕ್ಕೆ ತೆರಳುವ ಈ ಬಸ್‌ ಸೇವೆ ಪಡೆಯಲಿಚ್ಛಿಸುವವರು ಎ.ಪಿ. ಟೂರ್ಸ್‌ ಅಂಡ್‌ ಟ್ರಾವಲ್ಸ್‌ , ನಂ. 59, 39ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 4ನೇ ಟಿ ಬ್ಲಾಕ್‌, ಜಯನಗರ, ಬೆಂಗಳೂರು -560041. ಅಥವಾ ದೂರವಾಣಿ ಸಂಖ್ಯೆ : 080- 6346997, 6642772 ಸಂಪರ್ಕಿಸಬಹುದು.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X