‘ಅಬ್ಕಾರಿಸಿಬ್ಬಂದಿ ಇರುವುದು ದೊರೆಮನೆ ಕಾವಲು ಕಾಯಲಿಕ್ಕಲ್ಲ’
ಬೆಂಗಳೂರು : ನೀರಾವನ್ನು ಅಮೃತ ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಇದನ್ನು ತಡೆಯಲು ರಾಜ್ಯ ಸರಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ರಾಜ್ಯ ರೈತ ಸಂಘ ಹೇಳಿದೆ.
ರೈತ ಸಂಘದ ಅಧ್ಯಕ್ಷ ಪ್ರೊ. ನಂಜುಂಡ ಸ್ವಾಮಿ ಗುರುವಾರದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ನೀರಾಕ್ಕೆ ಅಮೃತ ಎಂಬ ಟ್ರೇಡ್ ಮಾರ್ಕ್ ಬಳಸಲು ನಿರ್ಧರಿಸಲಾಗಿದೆ. ಇದು ಮದ್ಯ ಅಲ್ಲ. ರಾಜ್ಯ ಸರಕಾರ ಅಬ್ಕಾರಿ ಕಾಯ್ದೆಯಡಿ ನೀರಾವನ್ನು ಸೇರಿಸಿರುವುದು ತಪ್ಪು ಎಂದು ಸರಕಾರದ ಕ್ರಮವನ್ನು ಟೀಕಿಸಿದರು.
ನೀರಾವನ್ನು ಶುದ್ಧ ಮೂಲರೂಪದಲ್ಲಿಯೇ ಆರು ತಿಂಗಳು ಕಾಲ ಕಾಪಾಡಿಕೊಂಡು ಬರಬಹುದು ಎಂದಾದ ಮೇಲೆ ಅದು ಮದ್ಯ ಹೇಗಾಗುತ್ತದೆ ಎಂದು ಸ್ವಾಮಿ ಪ್ರಶ್ನಿಸಿದರು. ನೀರಾ ಹೆಸರಿನಲ್ಲಿ ಅಮಲು ರಾಸಾಯನಿಕ ಬೆರೆಸಿ ಮಾರಾಟ ಮಾಡಲು ಅವಕಾಶವಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರಾವನ್ನು ಸರಕಾರ ನಿಷೇಧಿಸಿರುವುದನ್ನು ಪ್ರಸ್ತಾಪಿಸಿ, ಅಬ್ಕಾರಿ ಇಲಾಖೆ ಇರುವುದೇ ಇಂತಹ ಅಪರಾಧಗಳನ್ನು ಪತ್ತೆ ಹಚ್ಚುವುದಕ್ಕೆ. ದೊರೆಗಳ ಮನೆಯ ಕಾವಲು ಕಾಯುವುದಕ್ಕಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಟ್ರೇಡ್ ಮಾರ್ಕ್ ಆಗಲೀ ಟ್ರೇಡ್ ನೇಮ್‌ಗಳಾಗಲೀ ಇಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದನ್ನು ತಡೆಯುವ ಪ್ರಯತ್ನವನ್ನೇಕೆ ಸರಕಾರ ಮಾಡುತ್ತಿಲ್ಲ ಎಂದ ನಂಜುಂಡ ಸ್ವಾಮಿ ಅವರು, ಅಮೃತ ಬ್ರಾಂಡ್‌ನಡಿ ಮಾರಾಟವಾಗುವ ನೀರಾದ ಬೆಲೆ ವಿವರಗಳನ್ನೂ ತಿಳಿಸಿದರು. ಒಂದು ಲೀಟರ್ ನೀರಾ ಬೆಲೆ 40 ರೂಪಾಯಿ. 200 ಮತ್ತು 300 ಮಿ.ಲೀ.ನ ಬಾಟಲಿಗಳಲ್ಲಿ ನೀರಾ ಮಾರಾಟ ಮಾಡಲಾಗುವುದು ಎಂದು ವಿವರಿಸಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications