ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ವಿಮಾನ ಹೊಡೆದುರುಳಿಸಿದ್ದು ಉಕ್ರೇನಿ ಕ್ಷಿಪಣಿ- ಅಮೆರಿಕ

By Staff
|
Google Oneindia Kannada News

ವಾಷಿಂಗ್ಟನ್‌ : ಉಕ್ರೇನಿಯನ್ನರು ಹಾರಿಸಿದ ಕ್ಷಿಪಣಿ ದಾಳಿಯಿಂದ ರಷ್ಯಾದ ವಿಮಾನ ಕಪ್ಪು ಸಮುದ್ರಕ್ಕೆ ಸಿಡಿದು ಬಿದ್ದಿತು ಎಂದು ಅಮೆರಿಕಾದ ಬೇಹುಗಾರಿಕಾ ಉಪಗ್ರಹದ ಮಾಹಿತಿ ಸ್ಪಷ್ಟಪಡಿಸಿದೆ.

ವಾಷಿಂಗ್ಟನ್‌ ಪೋಸ್ಟ್‌ ಈ ವಿಷಯವನ್ನು ಪ್ರಕಟಿಸಿದೆ. ಉಕ್ರೇನಿ ಮಿಲಿಟರಿ ದಳದವರು ಹಾರಿಬಿಟ್ಟ ಎಸ್‌- 200 ಕ್ಷಿಪಣಿ ಪ್ರಯಾಣಿಕರ ವಿಮಾನಕ್ಕೆ ನುಗ್ಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅಮೆರಿಕಾದ ಅಧಿಕಾರಿಯಾಬ್ಬರು ತಿಳಿಸಿದ್ದಾರೆ. ಕೆಲವರು ಎಸ್‌ಎ- 12 ಕ್ಷಿಪಣಿ ವಿಮಾನಕ್ಕೆ ದಾಳಿಯಿಟ್ಟಿತೆಂದು ಹೇಳುತ್ತಿದ್ದಾರೆ.

ಅಮೆರಿಕಾದ ಈ ಮಾಹಿತಿಯನ್ನು ಉಕ್ರೇನಿಯಾ ಆಡಳಿತ ಅಲ್ಲಗಳೆದಿದೆ. ಮಿಲಿಟರಿ ಚಟುವಟಿಕೆಗಳು ನಡೆಯುವ ವಾಯುನೆಲೆಯಲ್ಲಿ ಪ್ರಯಾಣಿಕ ವಿಮಾನಗಳು ಹಾರುವುದಿಲ್ಲ. ಹೀಗಾಗಿ ತನ್ನ ದೇಶದ ಕ್ಷಿಪಣಿ ದುರಂತಕ್ಕೆ ಕಾರಣವಲ್ಲ ಎಂದು ಉಕ್ರೇನ್‌ ಪ್ರತಿಕ್ರಿಯೆ ನೀಡಿದೆ. 76 ಮಂದಿ ಸಾವಪ್ಪಿದ್ದು, ಇವರಲ್ಲಿ ಬಹುತೇಕರು ಇಸ್ರೇಲಿಗಳಾಗಿದ್ದರು. ಇದರಲ್ಲಿ ಭಯೋತ್ಪಾದಕರ ಕೈವಾಡ ಇರುವ ಶಂಕೆಯನ್ನು ರಷ್ಯಾ ಹಾಗೂ ಇಸ್ರೇಲ್‌ ಈಗಲೂ ವ್ಯಕ್ತಪಡಿಸುತ್ತಿವೆ.

(ಪಿಟಿಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X