Get Updates
Get notified of breaking news, exclusive insights, and must-see stories!

ಕೃಷ್ಣ ಸರ್ಕಾರದ 2 ವರ್ಷದ ಸಾಧನೆಗಳೇನು?ಕಾಗೋಡು ತಿಮ್ಮಪ್ಪ ಹೇಳ್ತಾರೆ..

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ, ಎರಡು ವರ್ಷಗಳಲ್ಲಿ ಎಸ್‌.ಎಂ.ಕೃಷ್ಣ ನೇತೃತ್ವದ ಸರ್ಕಾರದ ಸಾಧನೆಗಳನ್ನು ಕುರಿತು ಕಾಗೋಡು ತಿಮ್ಮಪ್ಪ ಕೆಳಗಿನ ವಿವರಗಳನ್ನು ನೀಡಿದ್ದಾರೆ.

  1. ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತರಿಗಾಗಿ 166 ಹಾಸ್ಟೆಲ್‌ಗಳ ನಿರ್ಮಾಣ, ಹೆಚ್ಚುವರಿ 361 ಹಾಸ್ಟೆಲ್‌ಗಳ(119 ಕೋಟಿ ರು. ವೆಚ್ಚದಲ್ಲಿ) ನಿರ್ಮಾಣಕ್ಕೆ ಮಂಜೂರಾತಿ.
  2. ಆಶ್ರಯ ಯೋಜನೆಯಲ್ಲಿ 39, 331 ಹಾಗೂ ಅಂಬೇಡ್ಕರ್‌ ಹೌಸಿಂಗ್‌ ಸ್ಕೀಂ ಅಡಿಯಲ್ಲಿ 41,809 ಮನೆಗಳ ನಿರ್ಮಾಣ. ಬೆಳ್ಳಿ ಬೆಳಕು ಯೋಜನೆಯಡಿ, 123 ಕೋಟಿ ರುಪಾಯಿ ವೆಚ್ಚದಲ್ಲಿ 1803 ಮನೆಗಳ ನಿರ್ಮಾಣ.
  3. ಎಸ್‌ಸಿ, ಎಸ್‌ಟಿ ಅಭಿವೃದ್ಧಿ ನಿಗಮದ ವತಿಯಿಂದ 30,413 ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು 43 ಕೋಟಿ ರುಪಾಯಿ ಸಾಲ ಸೌಲಭ್ಯ. ಇದೇ ಕಾರಣಕ್ಕಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ 24,853 ಮಂದಿಗೆ 19 ಕೋಟಿ ರುಪಾಯಿಗಳ ಸಾಲ ಮಂಜೂರು ಮಾಡಿದ್ದರೆ, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ 9642 ಮಂದಿಗೆ 13.24 ಕೋಟಿ ರುಪಾಯಿಗಳ ಸಾಲ ನೆರವು ಒದಗಿಸಿದೆ.
  4. ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ, ರಾಜ್ಯದಲ್ಲಿನ 4494 ಎಸ್‌ಸಿ, ಎಸ್‌ಟಿ ಕುಟುಂಬಕ್ಕೆ ಸೇರಿದ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು 70.95 ಕೋಟಿ ರುಪಾಯಿ ವೆಚ್ಚ.
  5. 2582 ದೇವದಾಸಿಗಳಿಗೆ ಪುನರ್ವಸತಿ ಕಲ್ಪಿಸಲು 5.95 ರುಪಾಯಿ ಖರ್ಚು.
  6. ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ 4.59 ಕೋಟಿ ರುಪಾಯಿ ವೆಚ್ಚ.
ಅಂದಹಾಗೆ, ಅಕ್ಟೋಬರ್‌ 11 ರಂದು ಎಸ್‌.ಎಂ.ಕೃಷ್ಣ ಸರ್ಕಾರಕ್ಕೆ ಎರಡು ವರ್ಷ ತುಂಬಲಿದೆ. ತಿಮ್ಮನವರು ಕೊನೆಯದಾಗಿ ಹೇಳಿದ್ದು- ಮುಂದಿನ ವರ್ಷ ನಡೆಯುವ ಅಂತರರಾಷ್ಟ್ರೀಯ ಗುಲಾಬಿ ಅಭಿವೃದ್ಧಿ ಸಮ್ಮೇಳನದಜ ಆತಿಥ್ಯವನ್ನು ಕರ್ನಾಟಕ ವಹಿಸಲಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+