ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಭಯೋತ್ಪಾದಕತೆ ಜೊತೆ ಅಮೆರಿಕ ರಾಜಿ- ಜಸ್ವಂತ್‌ಸಿಂಗ್‌

By Staff
|
Google Oneindia Kannada News

ನವದೆಹಲಿ : ಭಯೋತ್ಪಾದಕತೆಯನ್ನು ಪಾಕಿಸ್ತಾನ ಹುಟ್ಟುಹಾಕುತ್ತಿದೆ ಎನ್ನುವುದನ್ನು ಭಯೋತ್ಪಾದಕತೆಯನ್ನು ದಮನ ಮಾಡಲು ಹೊರಟಿರುವ ಅಮೆರಿಕಾ ಕಡೆಗಣಿಸಿದೆ. ಇಂಥ ರಾಜಿಗಳಿಂದ ಭಯೋತ್ಪಾದಕತೆಯನ್ನು ಹತ್ತಿಕ್ಕುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್‌ ಸಿಂಗ್‌ ಹೇಳಿದ್ದಾರೆ.

ಬಿಬಿಸಿಯ ಹಾರ್ಡ್‌ಟಾಕ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಜಸ್ವಂತ್‌ಸಿಂಗ್‌, ಪಾಕಿಸ್ತಾನ ಅಂತರರಾಷ್ಟ್ರೀಯ ಭಯೋತ್ಪಾದಕತೆಯ ಭಾಗವಾಗಿದ್ದು, ಈ ವಿಷಯವನ್ನು ಪ್ರಸ್ತುತ ಇಸ್ಲಮಾಬಾದನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿರುವ ಅಮೆರಿಕ ಕಡೆಗಣಿಸಿದೆ ಎಂದು ಆಪಾದಿಸಿದರು.

ಅಮೆರಿಕ ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಪ್ರಸ್ತುತದಲ್ಲಿ ಯಾವುದು ಅತ್ಯುತ್ತಮವಾದುದು ಎನ್ನುವುದನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು. ದೇಶದ ಸಹನೆ ಮೀರುತ್ತಿದೆ ಎನ್ನುವ ಕೆಲವು ನಾಯಕರ ಹೇಳಿಕೆಗಳ ಕುರಿತ ಪ್ರಶ್ನೆಯಾಂದಕ್ಕೆ ಪ್ರತಿಕ್ರಿಯಿಸಿದ ಜಸ್ವಂತ್‌, ನವದೆಹಲಿ ಬಹಳಷ್ಟು ಪ್ರಚೋದಕ ಹಾಗೂ ಸೂಕ್ಷ್ಮ ಸಂದರ್ಭಗಳಲ್ಲಿ ಅಗಾಧ ತಾಳ್ಮೆ ಪ್ರದರ್ಶಿಸಿದೆ ಎಂದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X