Get Updates
Get notified of breaking news, exclusive insights, and must-see stories!

ಏಷ್ಯಾ ಫೆಸಿಕ್‌ನ ಪ್ರಮುಖ ಐಟಿ ಮಾರುಕಟ್ಟೆ ಸಿಂಗಪುರ್‌ಗೆ ಇನ್ಫೋಸಿಸ್‌

ಬೆಂಗಳೂರು: ದೇಶದ ಸಿಲಿಕಾನ್‌ ವ್ಯಾಲಿಯ ಮುಕುಟಪ್ರಾಯ ಹಾಗೂ ಮಾಹಿತಿ ತಂತ್ರಜ್ಞಾನ ವಲಯದ ಸೇವಾಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದಿರುವ ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌, ಇದೀಗ ತನ್ನ ಕಚೇರಿಯನ್ನು ಸಿಂಗಪುರ್‌ನಲ್ಲಿ ತೆರೆದಿದೆ.

ಸಿಂಗಪುರ್‌ನ ಎಲ್ಲ ಪ್ರಮುಖ ಉದ್ಯಮ ವಲಯಗಳಿಗೆ ಶ್ರೇಷ್ಠ ದರ್ಜೆಯ ಕನ್ಸಲ್ಟಿಂಗ್‌ ಸೇವೆಗಳನ್ನು ಒದಗಿಸಲಿದೆ ಹಾಗೂ ತನ್ನ ಗ್ರಾಹಕರ ವಾಣಿಜ್ಯಕ್ಕೆ ತಂತ್ರಜ್ಞಾನದ ಲೇಪವನ್ನು ಇನ್ಫೋಸಿಸ್‌ ನೀಡಲಿದೆ ಎಂದು ಶುಕ್ರವಾರ ಹೊರಡಿಸಿರುವ ಕಂಪನಿಯ ಪ್ರಕಟಣೆ ತಿಳಿಸಿದೆ.

ಸೀಮೋಲ್ಲಂಘನದ ಖುಷಿಯಲ್ಲಿರುವ ಇನ್ಫೋಸಿಸ್‌ ಈಗಾಗಲೇ ತೋಷಿಬಾ, ಅಮೆರಿಕನ್‌ ಎಕ್ಸ್‌ಪ್ರೆಸ್‌, ಮೈಕ್ರೋಸಾಫ್ಟ್‌ , ಡಿಎಚ್‌ಎಲ್‌ ಮತ್ತು ಟೆಲ್‌ಸ್ಟ್ರಾ ಕಾರ್ಪೊರೇಷನ್‌ ಸೇರಿದಂತೆ ಹಲವಾರು ಜಾಗತಿಕ ಹುದ್ದರಿಗಳೊಂದಿಗೆ ಕೈ ಜೋಡಿಸಿದೆ. ಈ ಅಂತರರಾಷ್ಟ್ರೀಯ ಸಂಪರ್ಕಗಳು ಕೂಡ ಇನ್ಫೋಸಿಸ್‌ಗೆ ತನ್ನ ಸಿಂಗಪುರ್‌ ಗ್ರಾಹಕರನ್ನು ತೃಪ್ತಿಗೊಳಿಸಲು ಸಹಕಾರಿಯಾಗಲಿದೆ.

ಏಷ್ಯಾ ಫೆಸಿಫಿಕ್‌ ವಲಯದಲ್ಲಿ ಸಿಂಗಪುರನ್ನು ಪ್ರಮುಖ ಐಟಿ ಮಾರುಕಟ್ಟೆಯಾಗಿ ಗುರ್ತಿಸಲಾಗಿದ್ದು, ಶ್ರೇಷ್ಠ ದರ್ಜೆಯ ಕಾರ್ಯಕ್ಷಮತೆಯನ್ನು ಹೊಂದಿರುವ ಇನ್ಫೋಸಿಸ್‌ ಜಾಗತಿಕ ಮಟ್ಟದಲ್ಲಿ ತನ್ನ ಗುಣಮಟ್ಟವನ್ನು ಸಾಬೀತುಪಡಿಸಲಿದೆ. ಸಿಂಗಪುರ್‌ನಲ್ಲಿನ ಕಾರ್ಪೊರೇಷನ್‌ಗಳಿಗೆ ಅತ್ಯುತ್ತಮ ಗುಣಮಟ್ಟವನ್ನು ಇನ್ಫೋಸಿಸ್‌ ಸೇರ್ಪಡೆ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+