Get Updates
Get notified of breaking news, exclusive insights, and must-see stories!

ಟಾಪ್‌-10 ಗೆ ಸೇರುವ ಗುರಿಯಾಂದಿಗೆ ಆಸ್ಟ್ರೇಲಿಯಾಕ್ಕೆ ಕಾಲಿಟ್ಟ ವಿಪ್ರೋ

ಬೆಂಗಳೂರು: 660 ಮಿಲಿಯನ್‌ ಡಾಲರ್‌ಗಳ ಜಾಗತಿಕ ಐಟಿ ಸೇವೆಗಳ ವ್ಯವಹಾರದ ವಿಪ್ರೋ ಲಿಮಿಟೆಡ್‌ ಇದೀಗ ಆಸ್ಟ್ರೇಲಿಯಾಕ್ಕೆ ಕಾಲಿಟ್ಟಿದೆ. ಸಿಡ್ನಿಯನ್ನು ಕೇಂದ್ರವಾಗಿರಿಸಿಕೊಂಡು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ಗಳಲ್ಲಿ ವಿಪ್ರೋ ತನ್ನ ಚಟುವಟಿಕೆಗಳನ್ನು ನಡೆಸಲಿದೆ.

ವಿಪ್ರೋದ ಆಸ್ಟ್ರೇಲಿಯಾ ಪ್ರವೇಶ, ಜಾಗತಿಕ ಐಟಿ ಕಂಪನಿಗಳ ಟಾಪ್‌-10 ಲಿಸ್ಟ್‌ನಲ್ಲಿ ಸೇರ್ಪಡೆಗೊಳ್ಳುವ ತನ್ನ ಮಹತ್ವಾಕಾಂಕ್ಷೆಗೆ ಅನುಗುಣವಾಗಿದೆ ಎಂದು ವಿಪ್ರೋದ ಪ್ರಕಟಣೆ ತಿಳಿಸಿದೆ. ಬಿಜಿನೆಸ್‌ ನ್ಯೂಸ್‌ನ 4 ನೇ ವರ್ಷದ ವಾರ್ಷಿಕ ಪಟ್ಟಿಯ ಪ್ರಕಾರ, ಐಟಿ ಸೇವೆಗಳನ್ನು ಒದಗಿಸುವ ಸಂಸ್ಥೆಗಳಲ್ಲಿ ವಿಪ್ರೋ, ಪ್ರಸ್ತುತ ಟಾಪ್‌-20 ಲಿಸ್ಟ್‌ನಲ್ಲಿದೆ.

ವಿಪ್ರೋ ಇನ್ಫೋಟೆಕ್‌ನ ಅಧ್ಯಕ್ಷ ಸುರೇಶ್‌ ವಸ್ವಾನಿ ಅವರು ಗುರುವಾರ ಸಿಡ್ನಿಯಲ್ಲಿ ವಿಪ್ರೋದ ಚಟುವಟಿಕೆಗಳಿಗೆ ಚಾಲನೆ ನೀಡಿ, ಜಾಗತಿಕ ಟಾಪ್‌-10 ಲಿಸ್ಟ್‌ನಲ್ಲಿ ಸೇರ್ಪಡೆಗೊಳ್ಳುವ ಗುರಿಯನ್ನು ವಿಪ್ರೋ ಹೊಂದಿದೆ ಎಂದರು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+