ಕರ್ನಾಟಕದಲ್ಲಿ ಸಾಕಷ್ಟು ಮಳೆಯಾಗಿದೆಯಂತೆ, ಆದರೆ ಬೆಳೆಯಾಗಿದೆಯಾ?
ನವದೆಹಲಿ : ರಾಜ್ಯ ಬರದಿಂದ ತತ್ತರಿಸುತ್ತಿದೆ ಎಂದು ಸರಕಾರ ಬಾಯಿ ಬಡಿದುಕೊಳ್ಳುತ್ತಿದ್ದರೂ, ಉತ್ತರ ಕರ್ನಾಟಕ ಸೇರಿದಂತೆ ಶಿವಮೊಗ್ಗದ ಮಂದಿಯೂ ಕಡಿಮೆಯಾಗಿರುವ ಮಳೆಗೆ ಶಾಪ ಹಾಕುವಷ್ಟು ರೋಸಿ ಹೋಗಿದ್ದರೂ, ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಮಳೆಯ ಪ್ರಮಾಣ ಸಹಜ ಸ್ಥಿತಿಯಲ್ಲಿದೆ ಎಂದು ವರದಿ ಮುಂದಿಟ್ಟು ತಣ್ಣಗೆ ಕುಳಿತಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಮಳೆ ಒಂದಿಷ್ಟು ಕಡಿಮೆಯಾಗಿದ್ದರೂ ಅಂತಹ ತತ್ವಾರವೇನೂ ತಂದಿಟ್ಟಿಲ್ಲ. ಸರಾಸರಿ ಲೆಕ್ಕದಲ್ಲಿ ದೇಶದಲ್ಲಿ ಶೇ 92ರಷ್ಟು ಮಳೆಯಾಗಿದೆ. ದೇಶದ ಆಗ್ನೇಯ ಭಾಗ ಮತ್ತು ನೈರುತ್ಯ ಭಾಗದಲ್ಲಿ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಮಳೆ ಬಿದ್ದಿದೆ.
ರಾಜ್ಯದ ಉತ್ತರ ಒಳನಾಡು , ದಕ್ಷಿಣ ಒಳನಾಡು ಪ್ರದೇಶ ಮತ್ತು ಕರಾವಳಿಯಲ್ಲಿ ಸರಾಸರಿ ಮಳೆಗಿಂತ ಅನುಕ್ರಮವಾಗಿ ಶೇ 15, 8 ಹಾಗೂ 6ರಷ್ಟು ಕಡಿಮೆಯಾಗಿದೆ. ಇದು ಹವಾಮಾನ ಇಲಾಖೆಗೆ ಕನಿಷ್ಠ ಮಳೆ ಎಂದು ಘೋಷಿಸುವಷ್ಟು ತೀರಾ ಕಡಿಮೆಯೇನಲ್ಲ. 2000-2001ನೇ ಇಸವಿಯಲ್ಲಿ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಶೇ 25ಕ್ಕಿಂತ ಕಡಿಮೆ ಮಳೆ ಬಿದ್ದ ಪ್ರದೇಶ ಯಾವುದೂ ಇಲ್ಲ. ಮಾನ್ಸೂನ್ನ ಕೊನೆಗೆ 35 ಹವಾಮಾನ ಉಪವಿಭಾಗಗಳಲ್ಲಿ 30 ವಿಭಾಗಗಳ ಶೇ 86ರಷ್ಟು ಪ್ರದೇಶಗಳು ಮಳೆ ಕಂಡಿವೆ. ಅಂದರೆ ಸುಮಾರು ಶೇ. 68 ಜಿಲ್ಲೆಗಳು ಸಾಕಷ್ಟು ಮಳೆ ಪಡೆದಿವೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications