ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯನ್‌ ವಿಮಾನ ಸಿಡಿದು ಕಪ್ಪು ಸಮುದ್ರಕ್ಕೆ: ಭಯೋತ್ಪಾದಕರ ಕೈವಾಡ ಶಂಕೆ?

By Staff
|
Google Oneindia Kannada News

ಮಾಸ್ಕೋ: ಕನಿಷ್ಠ 77 ಮಂದಿ ಪ್ರಯಾಣಿಕರನ್ನು ಒಳಗೊಂಡಿದ್ದ ರಷ್ಯಾದ ಟುಪೊಲೆವ್‌ ಟಿಯು-154 ವಿಮಾನ ಗಾಳಿಯಲ್ಲಿ ಸ್ಫೋಟಗೊಂಡು ಆನಂತರ ಕಪ್ಪು ಸಮುದ್ರ(Black Sea)ದಲ್ಲಿ ಬಿದ್ದಿದ್ದು , ಈ ಕೃತ್ಯದ ಹಿಂದೆ ಭಯೋತ್ಪಾದಕರ ಕೈವಾಡ ಇರಬಹುದೆಂದು ಶಂಕಿಸಲಾಗಿದೆ.

ರಷ್ಯಾದ ದಕ್ಷಿಣ ಭಾಗದ ಅಡ್ಲರ್‌ ಸೀ ರೆಸಾರ್ಟ್‌ ಪ್ರದೇಶಕ್ಕೆ 180 ಕಿಮೀ ದೂರದಲ್ಲಿ ರೇಡಾರ್‌ ಕಣ್ಣಿನಿಂದ ತಪ್ಪಿಸಿಕೊಂಡಿರುವ ಸಿಬಿರ್‌ ಏರ್‌ಲೈನ್ಸ್‌ಗೆ ಸೇರಿದ ಈ ವಿಮಾನದಲ್ಲಿದ್ದ ಬಹುತೇಕ ಮಂದಿ ಇಸ್ರೇಲಿಗಳಾಗಿದ್ದು , ಅವರು ಸೈಬೇರಿಯನ್‌ ಪಟ್ಟಣ ನೊವೊಸಿಬಿರ್ಸ್‌ಕ್‌ಗೆ ತೆರಳುತ್ತಿದ್ದರು ಎಂದು ಇಟಾರ್‌ ಟಸ್ಸ್‌ ವರದಿ ಮಾಡಿದೆ.

ರಷ್ಯಾದ ಸೆಕ್ಯುರಿಟಿ ಸರ್ವೀಸ್‌ ಎಫ್‌ಎಸ್‌ಬಿ ಈ ದುರಂತವನ್ನು ಭಯೋತ್ಪಾದಕರ ಕೃತ್ಯವೆಂದು ಶಂಕಿಸಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು, ರಾಷ್ಟ್ರೀಯ ಭದ್ರತಾ ಸಮಿತಿಯ ಸೆಕ್ರೆಟರಿ ಜನರಲ್‌ ರುಷಾಯಿಲೊ ಅವರ ನೇತೃತ್ವದಲ್ಲಿ ತನಿಖೆಗೆ ಸಮಿತಿಯಾಂದನ್ನು ನೇಮಿಸಿದ್ದಾರೆ ಎಂದು ಎನ್‌ಟಿವಿ ಚಾನಲ್‌ ತಿಳಿಸಿದೆ.

ವಾಷಿಂಗ್ಟನ್‌ ಹಾಗೂ ನ್ಯೂಯಾರ್ಕ್‌ಗಳ ಮೇಲೆ ಭಯೋತ್ಪಾದಕರ ದಾಳಿ ನಡೆದ ಮೂರು ವಾರಗಳಲ್ಲಿ ಈ ಘಟನೆ ಸಂಭವಿಸಿರುವುದು ಹಲವಾರು ಸಂದೇಹಗಳಿಗೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ರಷ್ಯಾದ ಆಡಳಿತ ಪ್ರಾಧಿಕಾರಗಳು, ಮಿಲಿಟರಿ ಸೇರಿದಂತೆ ಎಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು, ದುರಂತ ಸಂಭವಿಸಿದ ಸ್ಥಳದಲ್ಲಿ ಸಂಭವನೀಯ ಸಂತ್ರಸ್ತರ ಪತ್ತೆ ಕಾರ್ಯದಲ್ಲಿ ತೊಡಗಿವೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X