ದೆಹಲಿ-ಮುಂಬಯಿ ವಿಮಾನ ಅಪಹರಣ ನಾಟಕ ಸುಖಾಂತ್ಯ
ನವದೆಹಲಿ: ಅಮೆರಿಕದ ವಿಮಾನಗಳನ್ನೇ ಅಪಹರಿಸಿ, ಪೆಂಟಗನ್ ಹಾಗೂ ವಿಶ್ವ ವ್ಯಾಪಾರ ಕೇಂದ್ರಗಳ ಮೇಲೆ ಉಗ್ರರು ವಾಯು ದಾಳಿ ಮಾಡಿದ ತರುವಾಯ ವಿಮಾನ ಅಪಹರಣ ಎಂದರೇ ವಿಶ್ವವೇ ಬೆಚ್ಚಿ ಬೀಳುತ್ತಿದೆ. ಪರಿಸ್ಥಿತಿ ಹೀಗಿರುವಾಗ ಬುಧವಾರ ಮಧ್ಯರಾತ್ರಿ ವಿಮಾನ ಅಪಹರಣದ ನಾಟಕ ಪ್ರಧಾನಿ ಆದಿಯಾಗಿ ದೇಶದ ಜನರ ನಿದ್ದೆ ಗೆಡಿಸಿತು.
4 ಗಂಟೆಗಳ ಈ ಸುದೀರ್ಘ ನಾಟಕ ಕೊನೆಗೆ ಸುಖಾಂತ್ಯವಾಗಿದ್ದು, ಈ ಗೊಂದಲಕ್ಕೆ ಕಾರಣನಾದ ಶರ್ಮಾ ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಗಿದೆ. ಸಂಪರ್ಕದ ಕೊರತೆ ಹಾಗೂ ಸಂವಹನದ ನಡುವಿನ ಅಂತರದಿಂದ ಈ ಗೊಂದಲ ಉಂಟಾಯಿತು ಎಂದು ವಿಮಾನಯಾನ ಸಚಿವ ಶಹನವಾಜ್ ಹುಸೇನ್ ತಿಳಿಸಿದ್ದಾರೆ.
ಇದೊಂದು ತಪ್ಪು ಗ್ರಹಿಕೆಯಿಂದ ಉಂಟಾದ ಗೊಂದಲ ಎಂದು ಹುಸೇನ್ ಬಿಕ್ಕಟ್ಟು ನಿವಾರಣಾ ಸಮಿತಿ ಜತೆ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ವಿಮಾನ ಅಪಹರಣವಾಗಿದೆ ಎಂಬ ಸುದ್ದಿ ತಿಳಿದು ಪ್ರಧಾನಿಯವರು ನಿದ್ದೆಗೆಟ್ಟು ರಾತ್ರಿಯಿಡೀ ಕ್ಷಣಕ್ಷಣದ ವಿಧ್ಯಮಾನಗಳ ಬಗ್ಗೆ ಮಾಹಿತಿ ಪಡೆದರು.
ವಿಮಾನ ಅಪಹರಣದ ಕರೆ ನಿಯಂತ್ರಣ ಕಚೇರಿ ತಲುಪಿದ ಬಳಿಕ ದೆಹಲಿ ವಿಮಾನ ನಿಲ್ದಾಣದ ಮೂಲೆಯಲ್ಲಿ ಬಂದಿಳಿದ ವಿಮಾನವನ್ನು ಭದ್ರತಾಪಡೆಯ ಕಮಾಂಡೋಗಳು ಸುತ್ತುವರಿದರು. ಅಪಹರಣಕಾರರು ಪ್ರಯಾಣಿಕರ ಸ್ಥಳದಲ್ಲಿ ಇದ್ದಾರೆಂದು ಪೈಲೆಟ್ ಕಾಕ್‌ಪಿಟ್ ಮುಚ್ಚಿದರೆ, ಪ್ರಯಾಣಿಕರು ಅಪಹರಣಕಾರರು ಕಾಕ್‌ಪಿಟ್‌ನಲ್ಲಿದ್ದಾರೆ ಎಂದು ತಿಳಿದರು.
ಮಧ್ಯ ರಾತ್ರಿ ಘಟನಾವಳಿ : 54 ಜನರಿದ್ದ ವಿಮಾನ ಅಪಹರಣವಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ, ತಮ್ಮ ಬಂಧುಗಳ ಬಗ್ಗೆ ವಿಚಾರಿಸಲು ಜನರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಬುಧವಾರ ರಾತ್ರಿ 11.15ರಲ್ಲಿ ದೆಹಲಿಯತ್ತ ಹೊರಟ ಮುಂಬಯಿ - ದೆಹಲಿ ಅಲೆಯನ್ಸ್ ಏರ್ ಬೋಯಿಂಗ್ 737ನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಬುಧವಾರ ಮಧ್ಯರಾತ್ರಿ 1 ಗಂಟೆಯ ಹೊತ್ತಿನಲ್ಲಿ ಹೊರಬಿತ್ತು. ವಿಮಾನ ಅಪಹರಣದ ವಿಷಯವನ್ನು ಪೈಲಟ್ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಕರೆ ಮಾಡಿ ತಿಳಿಸಿದರು ಎಂದು ಸ್ವತಃ ನಾಗರಿಕ ವಿಮಾನಯಾನ ಸಚಿವರೇ ತಿಳಿಸಿದರು.
ಅಪಹರಣಕಾರರು ಹರುಕು ಮುರುಕು ಇಂಗ್ಲಿಷ್ ಮಾತನಾಡುತ್ತಿದ್ದಾರೆ ಎಂಬ ಸುದ್ದಿಯೂ ಬಂತು. ವಿಮಾನ ಸುತ್ತುವರಿದ ಕಮಾಂಡೋಗಳು ವಿಮಾನದ ಒಳ ಹೊಕ್ಕಾಗ ಅಲ್ಲಿ ಅಪಹರಣಕಾರರು ಇರಲಿಲ್ಲ ಎಂದು ಹುಸೇನ್ ತಿಳಿಸಿದ್ದಾರೆ.
ಹುಸಿಕರೆಯಾಂದರಿಂದ ಉಂಟಾಗಿರುವ ಗೊಂದಲದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಹಿಂದೆಂದೂ ಕಂಡು ಕೇಳರಿಯದಂಥ ವಿಮಾನ ಅಪಹರಣ ನಾಟಕದ ಘಟನೆಗಳು ಪುನರಾವರ್ತನೆ ಆಗದಂತೆ ಮುನ್ನೆಚ್ಚರಿಕೆ ಕೈಗೊಳ್ಳುವುದಾಗಿಯೂ ಸಚಿವರು ತಿಳಿಸಿದ್ದಾರೆ.
(ಪಿ.ಟಿ.ಐ/ಇನ್‌ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications