ಶಿರಹಟ್ಟಿ ತಾಲೂಕು ಕುಡಿವ ನೀರು ಯೋಜನೆಗೆ ಚಾಲನೆ
ಶಿರಹಟ್ಟಿ : ಲಕ್ಷ್ಮೇಶ್ವರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯ ಉದ್ಘಾಟನೆ ನೆರವೇರಿದೆ. ಶಾಸಕ ಜಿ.ಎಸ್. ಗಡ್ಡದೇವರಮಠ ಇತ್ತೀಚೆಗೆ ಶಿರಹಟ್ಟಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಈ ಯೋಜನೆ ಉದ್ಘಾಟಿಸಿದ್ದಾರೆ.
ಮದ್ದೂರು ಮತ್ತು ಲಕ್ಷ್ಮೇಶ್ವರ ಮುನಿಸಿಪಾಲಿಟಿಗಳು ಈ ಕುಡಿಯುವ ನೀರಿನ ಯೋಜನೆಗೆ ಅಂಗೀಕಾರ ನೀಡಿವೆ. ಯೋಜನೆಯ ಅಂದಾಜುವೆಚ್ಚ 15.19 ಕೋಟಿ ರುಪಾಯಿಗಳು. ಈ ಪೈಕಿ ರಾಜ್ಯ ಸರಕಾರವು 5.51 ಕೋಟಿ ರುಪಾಯಿಗಳನ್ನು ಯೋಜನೆಗೆ ಒದಗಿಸುತ್ತಿದ್ದರೆ, ಭಾರತೀಯ ಜೀವವಿಮಾ ನಿಗಮವು 5.50 ಕೋಟಿ ರುಪಾಯಿಗಳನ್ನು ನೀಡಲಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆಗೆ 4.18 ಕೋಟಿ ರುಪಾಯಿ ಒದಗಿಸುತ್ತಿದೆ. ಈ ವಿಷಯವನ್ನು ತಿಳಿಸಿರುವ ಶಾಸಕ ಗಡ್ಡದೇವರ ಮಠ ಅವರು, ರಾಜ್ಯ ಸರಕಾರವು ಎಲ್ಲರಿಗೂ ಉತ್ತಮ ಕುಡಿಯುವ ನೀರು ಒದಗಿಸುವ ಕಳಕಳಿ ಹೊಂದಿದ್ದು, ಯೋಜನೆಯು ಎರಡು ವರ್ಷಗಳೊಳಗೆ ಜಾರಿಗೆ ಬರಲಿದೆ ಎಂದರು.
ಇಲ್ಲಿನ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಕರಪ್ಪ ಮೆಡ್ಲೇರಿ, ಸಿರಾಜುದ್ದೀನ್, ನರಸಿಂಹ ಹೊಂಬಾಳ್ ಮೊದಲಾದವರು ಹಾಜರಿದ್ದರು.
ಪ್ರತಿಭಟನೆ : ಯೋಜನೆಗಾಗಿ ಸಣ್ಣ ನೀರಾವರಿ ಇಲಾಖೆ ವಶಪಡಿಸಿಕೊಂಡಿರುವ ಭೂ ಮಾಲಿಕರು, ಆದಷ್ಟು ಶೀಘ್ರವಾಗಿ ಪರಿಹಾರ ಧನ ವಿತರಿಸುವಂತೆ ಆಗ್ರಹಿಸಿ, ಕಚೇರಿಯ ಎದುರು ಧರಣಿ ನಡೆಸಿದರು. ವರದಿಗಳ ರೀತ್ಯ 19 ರೈತರಿಗೆ ಪರಿಹಾರ ಧನ ನೀಡಲಾಗಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications