Get Updates
Get notified of breaking news, exclusive insights, and must-see stories!

ಮನಸೋಇಚ್ಛೆ ಕೇಬಲ್‌ ಶುಲ್ಕ ವಸೂಲಿ ಪ್ರಶ್ನಿಸಿ ರಿಟ್‌ ಅರ್ಜಿ

ಬೆಂಗಳೂರು : ಸ್ಟಾರ್‌ ಟಿ.ವಿ. ಮತ್ತು ಕೇಬಲ್‌ ಆಪರೇಟರ್‌ಗಳ ನಡುವೆ ಸಮರವೇ ನಡೆಯುತ್ತಿದೆ. ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಕೇಬಲ್‌ ಆಪರೇಟರ್‌ಗಳು ಸ್ಟಾರ್‌ ಟಿ.ವಿ. ಜಾಲದ ಪ್ರಸಾರವನ್ನೇ ಸ್ಥಗಿತಗೊಳಿಸಿದ್ದಾರೆ. ಸ್ಟಾರ್‌ ಟಿ.ವಿ. ಬಳಗ ಪ್ರಸಾರ ಶುಲ್ಕ ಹೆಚ್ಚಿಸಿರುವ ಕಾರಣ ಗ್ರಾಹಕರೂ ಇನ್ನು ಮುಂದೆ ಹೆಚ್ಚು ಶುಲ್ಕ ನೀಡಬೇಕು ಎಂದು ಆಪರೇಟರ್‌ಗಳು ಪಟ್ಟು ಹಿಡಿದಿದ್ದಾರೆ.

ಈ ಮಧ್ಯೆ ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿರುವ ಕೇಬಲ್‌ ಆಪರೇಟರ್‌ಗಳ ಕ್ರಮವನ್ನು ಪ್ರಶ್ನಿಸಿ ಗ್ರಾಹಕರೊಬ್ಬರು ಹೈಕೋರ್ಟ್‌ ಮೆಟ್ಟಿಲು ಏರಿದ್ದಾರೆ. ವಕೀಲರಾದ ಎ.ವಿ. ಅಮರನಾಥ್‌ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿಗಳಾದ ಎನ್‌.ಕೆ. ಜೈನ್‌ ಹಾಗೂ ನ್ಯಾಯಮೂರ್ತಿ ಎನ್‌. ಕುಮಾರ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠವು (ಜಿ.ಪಿ.ಓ) ಹೆಡ್‌ ಪೋಸ್ಟ್‌ಮಾಸ್ಟರ್‌, ಕೇಬಲ್‌ ಆಪರೇಟರ್‌ಗಳ ಸಂಘ ಹಾಗೂ ಸ್ಟಾರ್‌ ಟಿ.ವಿ.ಗೆ ನೋಟಿಸ್‌ ಜಾರಿಗೆ ಆದೇಶಿಸಿದೆ.

ಯಾವುದೇ ನಿಯಮಾವಳಿ ಇಲ್ಲದೆ ಕೇಬಲ್‌ ಆಪರೇಟರ್‌ಗಳು ಒಂದೊಂದು ಬಡಾವಣೆಯಲ್ಲಿ ಒಂದೊಂದು ರೀತಿ ಹಣ ವಸೂಲಿ ಮಾಡುತ್ತಿದ್ದಾರೆ. ಕೇಬಲ್‌ ಆಪರೇಟರ್‌ಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಇಷ್ಟೇ ಶುಲ್ಕ ನಿಗದಿ ಪಡಿಸಬೇಕು ಎಂದು ನಿಗದಿ ಪಡಿಸಿಲ್ಲ. ಹೀಗಾಗಿ ಗ್ರಾಹಕರು ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸುವಂತೆಯೂ ಅವರು ಪ್ರಾರ್ಥಿಸಿದ್ದಾರೆ.

ಸ್ಟಾರ್‌ ಟಿ.ವಿ. ಮತ್ತು ಕೇಬಲ್‌ ಆಪರೇಟರ್‌ಗಳ ಸಮರದಿಂದಾಗಿ ಗ್ರಾಹಕರು ಸ್ಟಾರ್‌ ಕಾರ್ಯಕ್ರಮ ವೀಕ್ಷಣೆಯಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿರುವ ಅವರು, ಹೆಚ್ಚು ಹಣ ವಸೂಲಿ ಮಾಡುವುದು ಕಾನೂನು ಬಾಹಿರ. ಮನಸೋಇಚ್ಛೆ ಶುಲ್ಕ ವಸೂಲಿ ಮಾಡುವುದನ್ನು ನಿಯಂತ್ರಿಸಿ, ಕ್ರಮಬದ್ಧಗೊಳಿಸುವಂತೆ ಅವರು, ನ್ಯಾಯಾಲಯವನ್ನು ಕೋರಿದ್ದಾರೆ.

(ಪಿ.ಟಿ.ಐ/ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+