Get Updates
Get notified of breaking news, exclusive insights, and must-see stories!

ಸಿಮಿ ನಿಷೇಧ ಏಕೆ ;ಆರೆಸ್ಸಸ್‌,ಭಜರಂಗದಳ, ವಿಹೆಚ್‌ಪಿ ಮಾಡುತ್ತಿರುವುದೇನು?

ಧಾರವಾಡ : ಭಾರತೀಯ ಮುಸ್ಲಿ ಂ ವಿದ್ಯಾರ್ಥಿಗಳ ಸಂಘಟನೆ (ಸಿಮಿ) ಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿರುವ ಭಾರತೀಯ ಮುಸ್ಲಿಂ ಲೀಗ್‌ನ ಕರ್ನಾಟಕ ಶಾಖೆ, ಸಿಮಿಯಂಥದ್ದೇ ಚಟುವಟಿಕೆಗಳಲ್ಲಿ ತೊಡಗಿರುವ ಆರೆಸ್ಸಸ್‌, ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.

ಮುಸ್ಲಿಂಲೀಗ್‌ನ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್‌.ಇನಾಂದಾರ್‌ ಅವರು ಸೋಮವಾರ ಬಿಡುಗಡೆ ಮಾಡಿರುವ ಸುದ್ದಿ ಪ್ರಕಟಣೆಯಲ್ಲಿ ಸಿಮಿಯನ್ನು ನಿಷೇಧಿಸಿರುವ ಕ್ರಮವನ್ನು ವಿರೋಧಿಸಿದ್ದಾರೆ. ಸಿಮಿ ನಿಷೇಧಕ್ಕೆ ಸರ್ಕಾರ ಸಾಕ್ಷಿ ಹೊಂದಿದ್ದರೆ, ಬಹಿರಂಗವಾಗಿ ಅಲ್ಪ ಸಂಖ್ಯಾತರ ವಿರುದ್ಧ ಚಟುವಟಿಕೆಗಳನ್ನು ನಡೆಸುತ್ತಿರುವ ಆರೆಸ್ಸಸ್‌, ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಮುಂತಾದ ಫ್ಯಾಸಿಸ್ಟ್‌ ಸಂಸ್ಥೆಗಳ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂದು ಇನಾಂದಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಮಿ ವಿರುದ್ಧ ಸರ್ಕಾರ ಸಾಕ್ಷ್ಯಾಧಾರಗಳನ್ನು ಹೊಂದಿದ್ದರೆ ಅವುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಹೇಳಿರುವ ಇನಾಂದಾರ್‌, ಆರೆಸ್ಸಸ್‌ ಮುಂತಾದ ಫ್ಯಾಸಿಸ್ಟ್‌ ಸಂಘಟನೆಗಳನ್ನು ತಕ್ಷಣವೇ ನಿಷೇಧಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಸರ್ಕಾರ ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+