ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟೇಲರನ್ನು ಪ್ರತಿಮೆಯಾಗಿಸುವುದು ಬೇಡ, ಆದರ್ಶಗಳನ್ನು ಆಚರಿಸೋಣ

By Staff
|
Google Oneindia Kannada News

ಕೂಡಲಸಂಗಮ : ಮಾಜಿ ಮುಖ್ಯಮಂತ್ರಿ ಜೆ.ಹೆಚ್‌.ಪಟೇಲ್‌ ನೇರ ನಡವಳಿಕೆಯ ಆತ್ಮಾಭಿಮಾನದ ವ್ಯಕ್ತಿ . ಅವರ ಪ್ರತಿಮೆಗಳನ್ನು, ಸ್ಮಾರಕಗಳನ್ನು ನಿರ್ಮಿಸುವುದರ ಬದಲು ಅವರ ಆದರ್ಶಗಳನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದುದು ಇಂದಿನ ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸೋಮವಾರ ಜರುಗಿದ ಪಟೇಲ್‌ ಅವರ 72 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಹೆಗಡೆ ಮಾತನಾಡುತ್ತಿದ್ದರು. ಶುದ್ಧಮನಸ್ಸಿನ, ಎಲ್ಲರನ್ನೂ ತಮ್ಮವರೆಂದು ಬಗೆಯುವ ಮನೋಭಾವದ ಪಟೇಲ್‌ ಜೀವನದಲ್ಲಿ ಸಾಮರಸ್ಯ ಹೊಂದಿದ್ದರು. ಅವರು ಅಧಿಕಾರಕ್ಕಾಗಿ ಯಾರ ಬಳಿಯೂ ಕೈ ಚಾಚಿದವರಲ್ಲ . ಮುಖ್ಯಮಂತ್ರಿಯಾಗುವ ಹೊತ್ತಿನಲ್ಲಿ ಕೂಡ ತಮ್ಮನ್ನು ಬೆಂಬಲಿಸಿ ಎಂದು ಯಾರನ್ನೂ ಅವರು ಕೋರಿದವರಲ್ಲ ಎಂದು ಹೆಗಡೆ ತ-ಮ್ಮ ಗೆಳೆಯನನ್ನು ಭಾವಪೂರ್ಣವಾಗಿ ನೆನಪಿಸಿಕೊಂಡರು.

ರಾಜ್ಯದ ನೂತನ ಜಿಲ್ಲೆಗಳ ರಚನೆ ಸೇರಿದಂತೆ ಪಟೇಲರು ಆಡಳಿತಾತ್ಮಕವಾಗಿ ಅನೇಕ ಉತ್ತಮ ನಿರ್ಣಯಗಳನ್ನು ಕೈಗೊಂಡಿದ್ದರು ಎಂದು ವಿಧಾನಸಭೆ ವಿರೋಧ ಪಕ್ಷಗಳ ನಾಯಕ ಜಗದೀಶ್‌ ಶೆಟ್ಟರ್‌ ಪಟೇಲರನ್ನು ಮೆಚ್ಚಿಕೊಂಡರು. ಸಂಯುಕ್ತ ಜನತಾದಳದ ನಾಯಕ ಸಿ. ಭೈರೇಗೌಡ ಪಟೇಲರ ರೈತಪರ ಕಾಳಜಿಯನ್ನು ಸ್ಮರಿಸಿಕೊಂಡರೆ, ಪಟೇಲರ ನಿಕಟವರ್ತಿ ಹಾಗೂ ಮಾಜಿ ಸಚಿವ ಎಂ.ಪಿ.ಪ್ರಕಾಶ್‌ ಪಟೇಲ್‌ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ವಿವರಿಸಿದರು. ಮಾಜಿ ಸಚಿವ ಬಿ.ಸೋಮಶೇಖರ್‌, ನಗರಾಭಿವೃದ್ಧಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಸಣ್ಣ ಕೈಗಾರಿಕಾ ಸಚಿವ ಎಸ್‌.ಆರ್‌.ಕಾಶಪ್ಪನವರ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎದ್ದ ಬಸವೇಶ್ವರ ವಿವಿ ಸೊಲ್ಲು

ಸಚಿವ ಎಸ್‌.ಆರ್‌.ಕಾಶಪ್ಪನವರ್‌ ಅವರು ಬಾಗಲಕೋಟೆ ಪ್ರಾಂತ್ಯದಲ್ಲಿ ಬಸವಣ್ಣನವರ ಹೆಸರಿನ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಶಾಸಕರು, ಸಚಿವರು ಶ್ರಮಿಸಬೇಕು ಎಂದು ಕರೆ ನೀಡಿದರು. ಗದಗ ಡಂಬಳದ ಸಿದ್ದಲಿಂಗ ತೊಂಟದಾರ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಳಕಲ್‌ನ ಚಿತ್ತರಗಿ ಮಠದ ವಿಜಯ ಮಹಾಂತ ಸ್ವಾಮೀಜಿ ಹಾಗೂ ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X