ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಮಿರ್‌ ಬೆಟ್ಟಸಾಲಿನ ಗುಹೆಯಲ್ಲಿ ಒಸಾಮ ಅಂಡ್‌ ಕಂಪನಿ ಬಿಡಾರ

By Staff
|
Google Oneindia Kannada News

ಲಂಡನ್‌ : ಅಮೆರಿಕಾದ ಉಪಗ್ರಹಗಳು ಮೈಯೆಲ್ಲಾ ಕಣ್ಣಾಗಿರುವ ಈ ಹೊತ್ತಲ್ಲಿ ಉಗ್ರ ಒಸಾಮ ತಪ್ಪಿಸಿಕೊಂಡಿರುವುದಾದರೂ ಎಲ್ಲಿ? ಅಮೆರಿಕದ ದಿ ನ್ಯೂಸ್‌ ಪತ್ರಿಕೆ ವರದಿ ಮಾಡಿರುವಂತೆ, ಪಾಮಿರ್‌ ಬೆಟ್ಟಸಾಲಿನ ಕೊರಕಲೊಂದರಲ್ಲಿ ಒಸಾಮ ಹಾಗೂ ಆತನ ಕೆಲವು ಸಹಚರರು ಹುದುಗಿದ್ದಾರೆ. ಉಪಗ್ರಹಗಳು ಹಾಗೂ ಮಾನವ ಬೇಹುಗಾರಿಕೆಯಿಂದ ಈ ವಿಷಯ ಪತ್ತೆಯಾಗಿದೆ. ಇದನ್ನು ಅಮೆರಿಕಾ ಹಾಗೂ ಅಫ್ಘಾನಿಸ್ತಾನದ ಜಂಟಿ ಪಡೆಗಳೂ ಬಲವಾಗಿ ನಂಬಿವೆ.

ಕಾಂದಹಾರ್‌ನ ಈಶಾನ್ಯ ಭಾಗದ ಔರ್‌ಝುಗನ್‌ನ ವ್ಯಾಪ್ತಿಯಲ್ಲಿರುವ ಪಾಮಿರ್‌ ಬೆಟ್ಟಸಾಲಿನಲ್ಲಿ ಖುದ್ದು ಒಸಾಮ ಹಾಗೂ ಆತನ ಸಹಚರರೇ ಗುಹೆಯಾಂದನ್ನು ಕೊರೆದಿದ್ದಾರೆ ಎನ್ನಲಾಗುತ್ತಿದೆ. ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಮೊಹಮ್ಮದ್‌ ಒಮರ್‌ ಬೆಳೆದದ್ದು ಇದೇ ಪ್ರದೇಶದ ತಾರಿನ್‌ ಕೋಟ್‌ ಪಟ್ಟಣದಲ್ಲಿ. ಸೆಪ್ಟೆಂಬರ್‌ 15ರಿಂದ 20ರ ಅವಧಿಯಲ್ಲಿ ಸಾಕಷ್ಟು ಸಾಮಾನು ಸರಂಜಾಮು ತುಂಬಿದ ಲಾರಿಯಾಂದು ಇದೇ ಪ್ರದೇಶದಲ್ಲಿ ಸಂಚರಿಸಿದೆ.

ಬ್ರಿಟನ್ನಿನ ಪಡೆಗಳು ಈ ಪ್ರದೇಶಕ್ಕೆ ನುಗ್ಗಲು ಸರ್ವಸಿದ್ಧವಿವೆ. ಈ ಬೆಟ್ಟಸಾಲಿನ ತುಟ್ಟತುದಿ ಜಾಗೆಗಳನ್ನೆಲ್ಲಾ ಜಾಲಾಡಿರುವುದು ರಷ್ಯಾದವರು ಎಂದು ಪತ್ರಿಕೆ ವರದಿ ಮಾಡಿದೆ. ರಷ್ಯಾದ ಬೇಹುಗಾರಿಕಾ ದಳಗಳ ಅಧಿಕಾರಿಗಳು ಈ ಜಾಗೆ ತಲುಪಲು ನಿರ್ದೇಶನಾ ನಕಾಶೆಯನ್ನೂ ಸಿದ್ಧಪಡಿಸಿದ್ದಾರೆ. 1992ರವರೆಗೆ ಈ ಪ್ರದೇಶ ರಷ್ಯಾ ವಶದಲ್ಲೇ ಇತ್ತು.

ಶಸ್ತ್ರಸಜ್ಜಿತ ಅಮೆರಿಕಾ ಯೋಧರು ಪಾಮಿರ್‌ ಬೆಟ್ಟಸಾಲಿನ ಬುಡಕ್ಕೆ ಈಗಾಗಲೇ ತಲುಪಿದ್ದಾರೆ. ಕಾರ್ಯಾಚರಣೆ ಶುರುವಾಗುವುದೊಂದೇ ಬಾಕಿ ಎಂದು ದಿ ನ್ಯೂಸ್‌ ಪ್ರಕಟಿಸಿದೆ.

ಒಸಾಮ ತನ್ನ ಮಲತಾಯಿ ಜೊತೆ ಫೋನಿನಲ್ಲಿ ಮಾತಾಡಿದ್ದು ಹೀಗೆ....

ವಿಶ್ವ ವ್ಯಾಪಾರ ಕೇಂದ್ರ ಹಾಗೂ ಪೆಂಟಗನ್‌ ಮೇಲಿನ ದಾಳಿ ಬಗ್ಗೆ ಉಗ್ರ ಒಸಾಮಾ ಬಿನ್‌ ಲ್ಯಾಡೆನ್‌ ಯಾರಿಗಾದರೂ ಮುನ್ಸೂಚನೆ ಕೊಟ್ಟಿದ್ದನೆ? ಎನ್‌ಬಿಸಿ ವರದಿ ಹೌದೆನ್ನುತ್ತಿದೆ.

ದಾಳಿಗೆ ಎರಡು ದಿನ ಮುಂಚೆ ತನ್ನ ಮಲತಾಯಿಗೆ ಫೋನಾಯಿಸಿದ್ದ ಒಸಾಮ, ದೊಡ್ಡ ಸುದ್ದಿಯಾಂದಕ್ಕೆ ಇದಿರುನೋಡುವಂತೆ ತನ್ನ ಪ್ರತಾಪ ಕೊಚ್ಚಿಕೊಂಡಿದ್ದ. ಜೊತೆಗೆ ಸೆಪ್ಟೆಂಬರ್‌ 11ರ ನಂತರ ಕೆಲವು ದಿನಗಳ ಕಾಲ ತಾನು ಫೋನಾಯಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದ. ವಿದೇಶೀ ಬೇಹುಗಾರಿಕಾ ದಳಗಳು ನಡೆಸಿರುವ ತನಿಖೆಯಿಂದ ಈ ವಿಷಯ ಹೊರಬಿದ್ದಿದೆ ಎಂದು ಎನ್‌ಬಿಸಿ ವರದಿ ಮಾಡಿದೆ.

ಒಸಾಮ ಮಲತಾಯಿ ಅಲ್‌ ಖಲೀಫಾ ಬಿನ್‌ ಲ್ಯಾಡೆನ್‌ ಸೆಪ್ಟೆಂಬರ್‌ 12ರಂದು ಪ್ಯಾರಿಸ್‌ನ ಆಸ್ಪತ್ರೆಯಾಂದಕ್ಕೆ ಕೂಡ ಸೇರಿದ್ದರು. ಅದಕ್ಕೂ ಮೊದಲು ಅಮೆರಿಕ ಆಸ್ಪತ್ರೆಯ ಕ್ಯಾನ್ಸರ್‌ ಘಟಕದಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು ಎಂದು ಫ್ರೆಂಚ್‌ ನಿಯತಕಾಲಿಕ ಲೀ ಪಾಯಿಂಟ್‌ ಪ್ರಕಟಿಸಿದೆ.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X