Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಪ್ರಥಮ ಏರ್‌ಫೋರ್ಸ್‌ ಇಂಜಿನಿಯರಿಂಗ್‌ ಕಾಲೇಜು

ಬೆಂಗಳೂರು : ಇಂಡಿಯನ್‌ ಏರ್‌ಫೋರ್ಸ್‌ ತನ್ನ ಪ್ರಥಮ ಏರ್‌ಫೋರ್ಸ್‌ ಇಂಜಿನಿಯರಿಂಗ್‌ ಕಾಲೇಜನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿದೆ.

ಜಾಲಹಳ್ಳಿಯ ಏರ್‌ಫೋರ್ಸ್‌ ಸ್ಟೇಷನ್‌ನಲ್ಲಿ ಈ ಕಾಲೇಜು ಸ್ಥಾಪನೆಯಾಗಲಿದೆ. ಏರ್‌ಫೋರ್ಸ್‌ನಲ್ಲಿ ಬಿಇ ಡಿಗ್ರಿ ನೀಡಲಿದೆ. ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ ಹಾಗೂ ಸ್ಟಾಫ್‌ ಸೆಲೆಕ್ಷನ್‌ ಬೋರ್ಡ್‌ ಸಂದರ್ಶನದಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ಉಚಿತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಹೈದರಾಬಾದ್‌, ಕಾನ್‌ಪುರ್‌, ಪುಣೆ ಮತ್ತು ಬೀದರ್‌ ಪ್ರದೇಶಗಳು ಕಾಲೇಜು ಸ್ಥಾಪನೆಗೆ ಅರ್ಹ ಸ್ಥಳದ ಸ್ಪರ್ಧೆಯಲ್ಲಿದ್ದವು. ಆದರೆ ಬೆಂಗಳೂರಿನಲ್ಲಿ ಎಚ್‌ಎಎಲ್‌, ಬಿಇಎಲ್‌, ಬಿಇಎಂಎಲ್‌ನಂತಹ ಕಂಪೆನಿಗಳು ಇರುವುದರಿಂದ ಏರ್‌ಫೋರ್ಸ್‌ ಕಾಲೇಜು ಸ್ಥಾಪನೆಗೆ ಸೂಕ್ತ ಸ್ಥಳವೆನಿಸಿತು. ಆದರೆ ಕೇಂದ್ರ ಸರಕಾರ ಹಾಗೂ ಎಐಸಿಟಿಇಯ ಒಪ್ಪಿಗೆ ಪಡೆಯುವುದು ಮಾತ್ರ ಬಾಕಿ ಉಳಿದಿದೆ. ಸುಮಾರು 90 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಲೇಜು ನಿರ್ಮಿಸಲು ಉದ್ದೇಶಿಸಲಾಗಿದೆ.

ನಾಲ್ಕು ವರ್ಷಗಳ ಈ ಕೋರ್ಸಿನಲ್ಲಿ ಯುದ್ಧ ಶಸ್ತ್ರಾಸ್ತ್ರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುವುದು. ಊಟ ವಸತಿಯನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗುವುದು. ಆದರೆ ಕೋರ್ಸಿಗೆ ಸೇರುವ ಮುನ್ನ ವಿದ್ಯಾರ್ಥಿ ತಾನು ದೇಶಸೇವೆಗೆ ಬದ್ಧನಾಗಿರುವುದಾಗಿ ಬಾಂಡ್‌ ಬರೆದುಕೊಡಬೇಕು. ಕೋರ್ಸಿನ ನಂತರ ಭಾರತೀಯ ಏರ್‌ಫೋರ್ಸಿನಲ್ಲಿ ಕೆಲಸ ಸಿಗುವುದು ಖಂಡಿತ ಎಂದು ಐಎಎಫ್‌ ಅಧಿಕಾರಿಗಳು ಹೇಳುತ್ತಾರೆ.

ಈ ಕಾಲೇಜನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಅಥವಾ ದೆಹಲಿಯ ಜವಾಹರ್‌ಲಾಲ್‌ ನೆಹರು ವಿಶ್ವ ವಿದ್ಯಾಲಯದಿಂದ ಅನುದಾನ ಪಡೆಯಲಿದೆ. ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ 55ರಷ್ಟು ಅಂಕ ಪಡೆದಿರಬೇಕು.

ಬೆಂಗಳೂರಿನಲ್ಲಿ ಈ ಕಾಲೇಜು ಸ್ಥಾಪನೆಗೆ ಐಎಎಫ್‌ ಅಧಿಕಾರಿಗಳು ಕೊಡುವ ಕಾರಣಗಳು :

ಬೆಂಗಳೂರಿನಲ್ಲಿ ಸಾಕಷ್ಟು ಐಎಎಫ್‌ ಘಟಕಗಳು ಇರುವುದು.
ಶಸ್ತ್ರಾಸ್ತ್ರ ಪರಿಣತರು ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವುದು.
ಐಎಎಫ್‌ ಟ್ರೆೃನಿಂಗ್‌ ಕಮಾಂಡ್‌ ಕೂಡ ಬೆಂಗಳೂರಿನಲ್ಲಿರುವುದು.
ಸಾಕಷ್ಟು ಪ್ರಮಾಣದಲ್ಲಿ ತಂತ್ರಜ್ಞಾನ ಸಂಬಂಧಿ ಘಟಕಗಳಿರುವುದು

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+