Get Updates
Get notified of breaking news, exclusive insights, and must-see stories!

ಪೊಲೀಸರ ಸರ್ಪಕಾವಲಿನಲ್ಲಿ ಶಾಂತಿದೂತನಿಗೆ ಇನ್ನೊಂದು ಹೂವು

Mahatma Gandhiನವದೆಹಲಿ : ಗಾಂಧೀಜಿ ಅವರ 132 ನೇ ಜಯಂತಿ ಆಚರಣೆಯ ಪ್ರಯುಕ್ತ ರಾಷ್ಟ್ರಪತಿ ಕೆ.ಆರ್‌.ನಾರಾಯಣ್‌, ಉಪರಾಷ್ಟ್ರಪತಿ ಕೃಷ್ಣ ಕಾಂತ್‌, ಪ್ರಧಾನಿ ವಾಜಪೇಯಿ ಅವರು ರಾಜ್‌ಘಾಟ್‌ನಲ್ಲಿನ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.

ಗೃಹ ಸಚಿವ ಎಲ್‌.ಕೆ. ಅಡ್ವಾನಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಇತರ ಕೇಂದ್ರ ಸಚಿವರು ಗಾಂಧಿ ಸಮಾಧಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ರಾಜ್‌ಘಾಟ್‌ಗೆ ಹಿಂದೆಂದಿಗಿಂತಲೂ ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದುದು ಗಮನ ಸೆಳೆಯುವಂತಿತ್ತು . ರಾಜ್‌ಘಾಟ್‌ ಸುತ್ತಮುತ್ತ ಅರ್ಧ ಕಿಮೀ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ನಿಷೇಧ ಹೇರಲಾಗಿತ್ತು .

ಭಾರತದಲ್ಲಿನ ಅಮೆರಿಕಾದ ರಾಯಭಾರಿ ರಾಬರ್ಟ್‌ ಡಿ ಬ್ಲಾಕ್‌ವಿಲ್‌ ಹಾಗೂ ಪಾಕಿಸ್ತಾನ ಹೈ ಕಮೀಷನರ್‌ ಕ್ವಾಜಿ ಅಶ್ರಫ್‌ ಜಹಂಗೀರ್‌ ಅವರು ಕೂಡ ರಾಜ್‌ಘಾಟ್‌ಗೆ ಭೇಟಿ ನೀಡಿ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು.

(ಪಿಟಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+